ETV Bharat / bharat

ಉತ್ತರಾಖಂಡ ಚುನಾವಣೆ: ದೇವಭೂಮಿಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ - ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್ ಡೇಟಾ ಬಿಡುಗಡೆ

ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್ ಡೇಟಾದ ಪ್ರಕಾರ, 2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ 9 ಗುಡ್ಡಗಾಡು ಜಿಲ್ಲೆಗಳ 34 ಸ್ಥಾನಗಳಲ್ಲಿ ಪುರುಷರ ಮತದಾನದ ಶೇಕಡಾವಾರು 51.15 ಆಗಿದ್ದರೆ, ಮಹಿಳೆಯರ ಮತದಾನದ ಶೇ.65.12 ರಷ್ಟಿದೆ. ಅಲ್ಲದೇ ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಮತದಾನ ಮಾಡಿದ್ದಾರೆ. ಹಾಗಾಗಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎಂದರೇ ಮಹಿಳಾ ಮತದಾರರನ್ನು ನಿರ್ಲಕ್ಷಿಸುವಂತಿಲ್ಲ.

Women voters have the key to power in Uttarakhand
ಉತ್ತರಾಖಂಡ ಚುನಾವಣೆ
author img

By

Published : Feb 7, 2022, 8:57 AM IST

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಫೆ.14ರಂದು ಚುನಾವಣೆ ನಡೆಯಲಿದ್ದು, ಪ್ರಚಾರ ಕಣ ರಂಗೇರಿದೆ. ಆದರೆ ಮಹಿಳಾ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಕಾರಣ ರಾಜ್ಯದಲ್ಲಿರುವ ನೋಂದಾಯಿತ ಮತದಾರರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರೇ ಮತ ದಾಖಲು ಮಾಡುತ್ತಾರೆ. ಹೀಗಿದ್ದರೂ ಕೂಡ ಕಣದಲ್ಲಿರುವವರು ಮಾತ್ರ ಶೇ.45 ರಷ್ಟು ಮಹಿಳೆಯರು ಮಾತ್ರ.

ವಾಸ್ತವ ಏನೆಂದರೇ ಉತ್ತರಾಖಂಡದಲ್ಲಿ ಕಳೆದ ಚುನಾವಣೆಯಲ್ಲಿ ಅಂದ್ರೆ 2017ರಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ಮತದಾನ ಮಾಡಿದ್ದಾರೆ. ಮತದಾನದ ಹಕ್ಕಿನ ಬಗ್ಗೆ ಜಾಗೃತರಾಗಿರುವ ಉತ್ತರಾಖಂಡದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ರಾಜ್ಯದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿರುವುದು ಇದಕ್ಕೆ ಕಾರಣವಾಗಿದೆ.

ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್ (ಎಸ್‌ಡಿಸಿ) ಚುನಾವಣೆಗಳಲ್ಲಿ ಮಹಿಳೆಯರ ಪಾತ್ರದ ಕುರಿತು ಡೇಟಾವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅವರು 2017 ರ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿದ್ದಾರೆ. 2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ 9 ಗುಡ್ಡಗಾಡು ಜಿಲ್ಲೆಗಳ 34 ಸ್ಥಾನಗಳಲ್ಲಿ ಪುರುಷರ ಮತದಾನದ ಶೇಕಡಾವಾರು 51.15 ಆಗಿದ್ದರೆ, ಮಹಿಳೆಯರ ಮತದಾನದ ಶೇಕಡಾವಾರು 65.12 ರಷ್ಟಿತ್ತು.

ಗುಡ್ಡಗಾಡು ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 28,202 ಮಹಿಳೆಯರು ಮತ್ತು 23,086 ಪುರುಷರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಸರಾಸರಿ 5,116 ಮಹಿಳೆಯರು ತಮ್ಮ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಉಭಯ ಸದನಗಳಲ್ಲಿ ಇಂದು ಹೇಳಿಕೆ ನೀಡಲಿರುವ ಅಮಿತ್ ಶಾ

2017 ರಲ್ಲಿ ಬಾಗೇಶ್ವರ್, ರುದ್ರಪ್ರಯಾಗ ಮತ್ತು ದ್ವಾರಹತ್ ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ. ಬಾಗೇಶ್ವರದಲ್ಲಿ ಪುರುಷರಿಗಿಂತ 9,802 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರುದ್ರಪ್ರಯಾಗದಲ್ಲಿ 9,517, ದ್ವಾರಹತ್‌ನಲ್ಲಿ 9,043 ಮಹಿಳೆಯರು ಮತ ಚಲಾಯಿಸಿದ್ದಾರೆ.

ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್‌ನ ಸಂಸ್ಥಾಪಕ ಅನೂಪ್ ನೌಟಿಯಾಲ್ ಪ್ರಕಾರ, ದೋಯಿವಾಲಾ, ರಿಷಿಕೇಶ್, ಕಲಾಧುಂಗಿ ಮತ್ತು ಖತಿಮಾದಂತಹ ಪ್ರದೇಶಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು 2,917 ಮತಗಳನ್ನು ಚಲಾಯಿಸಿದ್ದಾರೆ. ಉತ್ತರಾಖಂಡದ ಮಹಿಳೆಯರನ್ನು ರಾಜ್ಯದ ಆರ್ಥಿಕತೆಯ ಬೆನ್ನೆಲುಬು ಎಂದು ಕರೆಯಲಾಗಿದ್ದರೂ, ಈ ವರದಿಯು ರಾಜ್ಯದ ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಸೂಚಿಸುತ್ತದೆ.

ರಾಜ್ಯದಲ್ಲಿ ಶೇ.48.12ರಷ್ಟು ಮಹಿಳಾ ಮತದಾರರಿದ್ದರೂ ರಾಜಕೀಯ ಪಕ್ಷಗಳು ಕೇವಲ 21 ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿವೆ. ಬಿಜೆಪಿ-ಎಎಪಿ ತಲಾ 8, ಕಾಂಗ್ರೆಸ್ 5, ಉಳಿದ 24 ಮಹಿಳೆಯರು ಸ್ವತಂತ್ರ ಅಥವಾ ಸ್ಥಳೀಯ ಪಕ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. 2017ರಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 8 ಮಹಿಳೆಯರಿಗೆ ಟಿಕೆಟ್ ನೀಡಿತ್ತು.

ರಾಜ್ಯದಲ್ಲಿ ಒಟ್ಟು 81.43 ಲಕ್ಷ ಮತದಾರರು: 42.24 ಲಕ್ಷ ಪುರುಷರು ಮತ್ತು 39.19 ಲಕ್ಷ ಮಹಿಳಾ ಮತದಾರರಿದ್ದಾರೆ. ಪ್ರಸ್ತುತ, ರಾಜ್ಯವು ಕೇವಲ ನಾಲ್ವರು ಮಹಿಳಾ ಶಾಸಕರನ್ನು ಹೊಂದಿದ್ದು, ಅದರಲ್ಲಿ ಒಬ್ಬರು ಸಚಿವೆಯಾಗಿದ್ದಾರೆ. ಮತದಾನದಲ್ಲಿ ಮಹಿಳೆಯರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಕೆಲವೇ ಮಹಿಳೆಯರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿರುವುದು ಉತ್ತರಾಖಂಡಕ್ಕೆ ವಿಷಾದದ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.