ETV Bharat / bharat

Uttarakhand Polls : ಮಹಿಳಾ ಶಕ್ತಿಯನ್ನು ಒಲಿಸಿಕೊಂಡರೆ ಗೆಲುವು ಖಚಿತ

author img

By

Published : Feb 4, 2022, 7:35 PM IST

ರಾಜ್ಯದಲ್ಲಿ ಶೇ.48.12ರಷ್ಟು ಮಹಿಳಾ ಮತದಾರರಿದ್ದರೂ, ರಾಜಕೀಯ ಪಕ್ಷಗಳು ಕೇವಲ 21 ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿವೆ. ಬಿಜೆಪಿ ಮತ್ತು ಎಎಪಿ ತಲಾ 8, ಕಾಂಗ್ರೆಸ್ 5, ಉಳಿದಂತೆ 24 ಮಹಿಳೆಯರು ಇತರ ಪಕ್ಷಗಳಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. 2017ರಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 8 ಮಹಿಳೆಯರಿಗೆ ಟಿಕೆಟ್ ನೀಡಿತ್ತು..

Women voters have the key to power in Uttarakhand
Uttarakhand Polls: ಮಹಿಳಾ ಶಕ್ತಿಯನ್ನು ಒಲಿಸಿಕೊಂಡರೆ ಗೆಲುವು ಖಚಿತ

ಡೆಹ್ರಾಡೂನ್,ಉತ್ತರಾಖಂಡ್​ : ಚುನಾವಣೆಯಲ್ಲಿ ಗೆಲ್ಲಲು ವಿವಿಧ ಪಕ್ಷಗಳು ಈಗಾಗಲೇ ಕಸರತ್ತು ಆರಂಭಿಸಿವೆ. ರಾಜಕೀಯ ತಜ್ಞರು ಕೂಡ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ದಾಳ ಉರುಳಿಸಿದರೆ ಗೆಲುವು ಸಾಧ್ಯವಿದೆ ಎಂಬುದನ್ನು ರಾಜಕೀಯ ಮುಖಂಡರು ಈಗಾಗಲೇ ಚಿಂತನೆಯಲ್ಲಿ ತೊಡಗಿದ್ದಾರೆ. ಈಗ ಉತ್ತರಾಖಂಡದಲ್ಲಿ ಒಂದು 'ಲೆಕ್ಕಾಚಾರ' ಬಯಲಾಗಿದೆ.

ಫೆಬ್ರವರಿ 14ರಂದು ಉತ್ತರಾಖಂಡದಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮಹಿಳಾ ಶಕ್ತಿಯನ್ನು ಕಡೆಗಣಿಸುವುದು ಸಾಧ್ಯವಿಲ್ಲ. ನೋಂದಾಯಿತ ಮತದಾರರ ಪೈಕಿ ಶೇ.45ಕ್ಕೂ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ವೋಟಿಂಗ್ ವಿಚಾರಕ್ಕೆ ಬರುವುದಾದರೆ, ಪುರುಷರಿಗಿಂತ ಮಹಿಳೆಯರ ಮತದಾನದ ಪ್ರಮಾಣವೇ ಹೆಚ್ಚಾಗಿದೆ. ಇದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡೇ ರಾಜಕೀಯ ಪಕ್ಷಗಳು ಮಹಿಳೆಯರ ಮತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್ (ಎಸ್‌ಡಿಸಿ) ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿಯ ಪ್ರಕಾರ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡ್​ನ 9 ಗುಡ್ಡಗಾಡು ಜಿಲ್ಲೆಗಳ 34 ಸ್ಥಾನಗಳಲ್ಲಿ ಶೇ.51.15 ಮಂದಿ ಪುರುಷರು, ಶೇ.65.12ರಷ್ಟು ಮಹಿಳೆಯರು ಮತದಾನ ಮಾಡಿದ್ದರು.

ಈ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 28,202 ಮಹಿಳೆಯರು ಮತ್ತು 23,086 ಪುರುಷರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಅಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ 5,116 ಮಹಿಳೆಯರು ತಮ್ಮ ಮತ ಚಲಾಯಿಸಿದ್ದರು.

ಇದನ್ನೂ ಓದಿ: ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ.. ಸಾವಿಗೆ ಹೆದರುವುದಿಲ್ಲ ಎಂದ ಹೈದರಾಬಾದ್​ ಸಂಸದ!

ಬಾಗೇಶ್ವರ್, ರುದ್ರಪ್ರಯಾಗ ಮತ್ತು ದ್ವಾರಹತ್ ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರು ಹೆಚ್ಚು ಮತ ಚಲಾಯಿಸಿದ್ದಾರೆ. ಪುರುಷರ ಮತಗಳಿಗೆ ಹೋಲಿಕೆ ಮಾಡಿದರೆ ಬಾಗೇಶ್ವರದಲ್ಲಿ 9,802 ಮತಗಳು, ರುದ್ರಪ್ರಯಾಗದಲ್ಲಿ 9,517 ಮತಗಳು, ದ್ವಾರಹತ್‌ನಲ್ಲಿ 9,043 ಮಹಿಳೆಯರು ಹೆಚ್ಚಿನ ಮತದಾನ ಮಾಡಿದ್ದರು.

ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್‌ನ ಸಂಸ್ಥಾಪಕ ಅನೂಪ್ ನೌಟಿಯಾಲ್ ಪ್ರಕಾರ, ದೋಯಿವಾಲಾ, ರಿಷಿಕೇಶ್, ಕಲಾಧುಂಗಿ ಮತ್ತು ಖತಿಮಾದಂತಹ ಕ್ಷೇತ್ರಗಳಲ್ಲಿ ಸೀಟುಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದಾರೆ.

ರಾಜ್ಯದಲ್ಲಿ ಶೇ.48.12ರಷ್ಟು ಮಹಿಳಾ ಮತದಾರರಿದ್ದರೂ, ರಾಜಕೀಯ ಪಕ್ಷಗಳು ಕೇವಲ 21 ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿವೆ. ಬಿಜೆಪಿ ಮತ್ತು ಎಎಪಿ ತಲಾ 8, ಕಾಂಗ್ರೆಸ್ 5, ಉಳಿದಂತೆ 24 ಮಹಿಳೆಯರು ಇತರ ಪಕ್ಷಗಳಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. 2017ರಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 8 ಮಹಿಳೆಯರಿಗೆ ಟಿಕೆಟ್ ನೀಡಿತ್ತು.

ಉತ್ತರಾಖಂಡ್​ನ ಒಟ್ಟು ಮತದಾರರು : ಉತ್ತರಾಖಂಡ್​ನಲ್ಲಿ ಒಟ್ಟು 81.43 ಲಕ್ಷ ಮತದಾರರಿದ್ದು, 42.24 ಲಕ್ಷ ಪುರುಷರು ಮತ್ತು 39.19 ಲಕ್ಷ ಮಹಿಳಾ ಮತದಾರರಿದ್ದಾರೆ. ಪ್ರಸ್ತುತ, ಈ ರಾಜ್ಯದಲ್ಲಿ ಕೇವಲ ನಾಲ್ವರು ಮಹಿಳಾ ಶಾಸಕರಿದ್ದಾರೆ. ಸಚಿವರ ಸಂಖ್ಯೆ ಕೇವಲ ಒಂದು. ಮತದಾನದಲ್ಲಿ ಹೆಚ್ಚು ಮಹಿಳೆಯರಿದ್ದರೂ, ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇರುವುದು ವಿಷಾದದ ಸಂಗತಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.