ಡೆಹ್ರಾಡೂನ್(ಉತ್ತರಾಖಂಡ): ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಕಳೆದ ಕೆಲವು ದಿನಗಳ ಹಿಂದೆ ಬಹಿರಂಗಗೊಂಡಿದ್ದು, ಇದರಲ್ಲಿ ಅನೇಕ ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ. ಉತ್ತರಾಖಂಡದಲ್ಲಿ ಪುರುಷರ ಜೊತೆಗೆ ಮಹಿಳೆಯರು ಕುಡಾ ಮದ್ಯಪಾನ ಹಾಗೂ ತಂಬಾಕು ಸೇವನೆಯಲ್ಲಿ ಮುಂದಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಪ್ರಕಾರ, ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆ ಮಾಡ್ತಾರೆ. ಅಲ್ಮೋರಾ ಜಿಲ್ಲೆಯಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆ ಮಾಡುತ್ತಾರೆ.
ಅಂಕಿ-ಅಂಶಗಳ ಪ್ರಕಾರ, ಉತ್ತರಾಖಂಡದಲ್ಲಿ ಶೇ. 4.6ರಷ್ಟು ಮಹಿಳೆಯರು ಮತ್ತು ಶೇ. 33.7ರಷ್ಟು ಪುರುಷರು ತಂಬಾಕು ಸೇವನೆ ಮಾಡ್ತಿದ್ದಾರೆ. ಈ ಮೂಲಕ ಪುರುಷರು ಮಾತ್ರವಲ್ಲದೇ ಮಹಿಳೆಯರು ಮಾದಕ ವ್ಯಸನಿಗಳು ಎಂಬುದು ತಿಳಿದು ಬಂದಿದೆ.
ಪ್ರಮುಖವಾಗಿ, ಗುಡ್ಡುಗಾಡು ಪ್ರದೇಶಗಳಲ್ಲಿ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುವುದು ಕಂಡು ಬಂದಿದ್ದು, ತಂಬಾಕು ಸೇವನೆಯಲ್ಲೂ ಮುಂದಿದ್ದಾರೆ. ರಾಜ್ಯದಲ್ಲಿ ಶೇ. 0.3ರಷ್ಟು ಮಹಿಳೆಯರು ಹಾಗೂ ಶೇ. 25.5ರಷ್ಟು ಪುರುಷರು ಮದ್ಯ ಸೇವನೆ ಮಾಡುತ್ತಾರೆಂಬುದು ಸಾಬೀತುಗೊಂಡಿದೆ.
ಇದನ್ನೂ ಓದಿ: 12 ಸಂಸದರ ಅಮಾನತು ಪ್ರಜಾಪ್ರಭುತ್ವ ವಿರೋಧಿ ಎಂದು ವಿಪಕ್ಷಗಳ ಆಕ್ರೋಶ, ನಾಳೆ ಸಭೆಗೆ ನಿರ್ಧಾರ..
ಮದ್ಯಪಾನ ಮತ್ತು ತಂಬಾಕು ಸೇವನೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಮುಂದಿರುವುದು ಕಂಡು ಬಂದಿದ್ದು, ಈ ಪ್ರದೇಶದ ಜನರು ಮಾದಕ ದ್ರವ್ಯಗಳಿಂದ ಹೆಚ್ಚು ಪ್ರಭಾವಿತರಾಗಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಇನ್ನು ಅಸ್ಸೋಂನಲ್ಲೂ ಮಹಿಳೆಯರು ಹೆಚ್ಚು ಮದ್ಯಪಾನ ಮಾಡುತ್ತಾರೆಂಬ ಮಾಹಿತಿ ಸಹ ತಿಳಿದು ಬಂದಿದೆ.