ಬಿಲಾಸ್ಪುರ (ಛತ್ತೀಸ್ಗಢ್) : ಅತ್ತೆ ಕಂಡರೆ ಸೊಸೆಗೆ ಆಗಲ್ಲ, ಸೊಸೆ ಕಂಡರೆ ಅತ್ತೆಗೆ ಆಗಲ್ಲ. ಜೊತೆಗೆ ಇಬ್ಬರ ಜಗಳದ ಬಗ್ಗೆ ನಾವು ನೀವೆಲ್ಲಾ ಕೇಳಿರುತ್ತೇವೆ. ಆದ್ರೆ, ಇಲ್ಲಿ ಸೊಸೆಯರು ತಮ್ಮ ಪ್ರೀತಿಯ ಅತ್ತೆಗೆ ಗುಡಿ ನಿರ್ಮಿಸಿ, ಆಕೆಯನ್ನು ದೇವತೆಯಾಗಿ ಕಾಣುತ್ತಾ ಪ್ರತಿದಿನ ಪೂಜಿಸುತ್ತಿದ್ದಾರೆ.
ಬಿಲಾಸ್ಪುರ ಜಿಲ್ಲೆಯ ರತನ್ಪುರದ ನಿವೃತ್ತ ಶಿಕ್ಷಕ ಶಿವಪ್ರಸಾದ್ ತಂಬೋಲಿ 39 ಸದಸ್ಯರ ಅವಿಭಕ್ತ ಕುಟುಂಬದ ಮುಖ್ಯಸ್ಥರಾಗಿದ್ದಾರೆ. ಕುಟುಂಬದ ಪ್ರತಿ ಸದಸ್ಯರು ಮೃತ ಗೀತಾ ದೇವಿ ಅವರ ಮೇಲೆ ತುಂಬಾ ಪ್ರೀತಿ ಹೊಂದಿದ್ದರು.
ಶಿವಪ್ರಸಾದ್ ಅವರ ಪತ್ನಿ ಗೀತಾ ಕುಂಟುಂಬದ ಸದಸ್ಯರಿಗೆ ಉತ್ತಮ ಮೌಲ್ಯಗಳನ್ನು ಮತ್ತು ಧಾರ್ಮಿಕ ನೀತಿಗಳನ್ನು ಹೇಳಿಕೊಟ್ಟಿದ್ದರು. ಗೀತಾ ದೇವಿ 2010ರಲ್ಲಿ ನಿಧನ ಹೊಂದಿದ್ದು, ಅವರಿಗೆ ಮೂವರು ಗಂಡು ಮಕ್ಕಳು, ಹನ್ನೊಂದು ಹೆಣ್ಣುಮಕ್ಕಳಿದ್ದಾರೆ.
ಗೀತಾ ಅವರು ತಮ್ಮ ಹೆಣ್ಣುಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ, ಹಾಗೆಯೇ ಸೊಸೆಯಂದಿರನ್ನು ನೋಡಿಕೊಳ್ಳುತ್ತಿದ್ದರು. ಗೀತಾ ಅವರ ಈ ಪ್ರೀತಿಯೇ ಈಗ ಅವರ ದೇವಾಲಯವನ್ನು ನಿರ್ಮಿಸಲು ಕಾರಣವಂತೆ.
ಓದಿ:ಸಂಕ್ರಾಂತಿಗೆ ಮನೆಗೆ ಬಂದ ಹೊಸ ಅಳಿಯನಿಗಾಗಿ 125 ಬಗೆಯ ಖಾದ್ಯ ತಯಾರಿಸಿದ ಅತ್ತೆ!
ಗೀತಾ ದೇವಿ ಅವರ ವಿಗ್ರಹವನ್ನು ಆಭರಣಗಳಿಂದ ಅಲಂಕರಿಸಲಾಗಿದೆ. ಪ್ರತಿ ತಿಂಗಳಿಗೊಮ್ಮೆ ಕುಟುಂಬ ಸದಸ್ಯರು ದೇವಾಲಯದಲ್ಲಿ ಭಜನೆ-ಕೀರ್ತನೆ ಮಾಡುತ್ತಾರೆ.