ETV Bharat / bharat

ಶೀಘ್ರದಲ್ಲೇ ಸಂಸತ್ತಿನಲ್ಲಿ ಶೇ.33 ಮಹಿಳಾ ಮೀಸಲು ಮಸೂದೆ ತನ್ನಿ: ಸುಭಾಶಿನಿ ಅಲಿ ಒತ್ತಾಯ - Kisan Sansad

ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ದೆಹಲಿಯ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಸುಮಾರು 200 ಮಹಿಳಾ ರೈತರು ಸೋಮವಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ 'ಕಿಸಾನ್ ಸಂಸದ್' ನಡೆಸಿದರು.

AIKS Subhashini Ali, AIKS Subhashini Ali news, AIKS Subhashini Ali spark on center government, ಅಖಿಲ ಭಾರತ ಕಿಸಾನ್ ಸಭೆಯ ಮುಖಂಡ ಸುಭಾಸಿನಿ ಅಲಿ, ಅಖಿಲ ಭಾರತ ಕಿಸಾನ್ ಸಭೆಯ ಮುಖಂಡ ಸುಭಾಸಿನಿ ಅಲಿ ಸಂದರ್ಶನ, ಎಐಕೆಎಸ್​ ಮುಖಂಡೆ ಸುಭಾಶಿನಿ ಅಲಿ
ಸುಭಾಶಿನಿ ಅಲಿ
author img

By

Published : Jul 27, 2021, 2:28 PM IST

ನವದೆಹಲಿ: ಮಹಿಳಾ ಸಂಸತ್ತಿನಲ್ಲಿ ಚರ್ಚಿಸಲಾದ ವಿಷಯಗಳು ಮತ್ತು ಅಂಗೀಕರಿಸಿದ ನಿರ್ಣಯಗಳ ಕುರಿತು ಅಖಿಲ ಭಾರತ ಕಿಸಾನ್ ಸಭೆಯ ಮುಖಂಡ ಸುಭಾಶಿನಿ ಅಲಿ ಅವರೊಂದಿಗೆ ಈಟಿವಿ ಭಾರತ್ ವಿಶೇಷ ಸಂವಾದ ನಡೆಸಿತು.

ಮಹಿಳಾ ರೈತರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020ರ ಒಪ್ಪಂದ; ಮತ್ತು ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ, 2020 'ಕಿಸಾನ್ ಸಂಸದ್' ಕೇಂದ್ರ ಬಿಂದುವಾಗಿತ್ತು.

ಮಹಿಳಾ ಕಿಸಾನ್ ಸಂಸದ್​ನ್ನು ಉದ್ದೇಶಿಸಿ ಮಾತನಾಡಿದ ರಾಜಕಾರಣಿ ಸುಭಾಶಿನಿ ಅಲಿ, ಇಂದಿನ ಸಂಸದ್ ಮಹಿಳೆಯರ ಶಕ್ತಿಯನ್ನು ಪ್ರದರ್ಶಿಸುತ್ತಿದೆ. ಮಹಿಳೆಯರು ಕೃಷಿ ಮಾಡಬಹುದು ಮತ್ತು ದೇಶವನ್ನು ನಡೆಸಬಹುದು ಎಂದು ಹೇಳಿದರು.

ಮೂರು ಕೃಷಿ ಕಾನೂನುಗಳ ವಿರುದ್ಧ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿಯುತ್ತದೆ. ಸರ್ಕಾರವು ನಮ್ಮನ್ನು (ರೈತರನ್ನು) ಭಯೋತ್ಪಾದಕರು, ಖಲಿಸ್ತಾನಿಗಳು ಮುಂತಾದ ವಿವಿಧ ಹೆಸರಿನಿಂದ ಕರೆಯುತ್ತಲೇ ಇದೆ. ಆದರೆ, ಅವರಿಗೆ ಶಕ್ತಿ ಇದ್ದರೆ ಈ ಭಯೋತ್ಪಾದಕರು ಮತ್ತು ಖಲಿಸ್ತಾನಿಗಳು ಉತ್ಪಾದಿಸುವ ಆಹಾರವನ್ನು ಅವರು ತಿನ್ನಬಾರದು ಎಂದು ಸವಾಲು ಹಾಕಿದರು.

ಮಹಿಳೆಯರಿಗೆ ಅವಕಾಶ ನೀಡಿದರೆ ಅವರು ಯಾವುದೇ ಕೆಲಸ ಮಾಡಬಹುದು ಎಂಬ ಸಂದೇಶವಿದೆ. ದೇಶದ ಸಂಸತ್ತಿನಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಮತ್ತು ಕೇವಲ 8 ರಿಂದ 10 ಪ್ರತಿಶತ ಮಹಿಳಾ ಸಂಸದರು ಇದ್ದಾರೆ. ಸಂಸತ್ತಿನಲ್ಲಿ ಶೇ.33ರ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ತರಬೇಕು ಎಂದರು.

ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ನಡೆಯುತ್ತಿರುವ ಕೋಲಾಹಲಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಸುಭಾಸಿನಿ, ದೇಶದ ಸಂಸತ್ತಿನಲ್ಲಿ ಇಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಥವಾ ಪ್ರತಿಭಟಿಸಲು ಜನರಿಗೆ ಅವಕಾಶ ನೀಡುತ್ತಿಲ್ಲ. ಧ್ವನಿ ಎತ್ತಿದ ಮೇಲೆ ಸ್ಪೀಕರ್ ಸಂಸದರನ್ನು ಹೊರಹಾಕುತ್ತಾರೆ. ಯಾವುದೇ ವಿಷಯದ ಬಗ್ಗೆ ಸರ್ಕಾರಕ್ಕೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಪೆಗಾಸಸ್ ಸ್ಪೈವೇರ್ ವಿಷಯದ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಅಂತೆಯೇ, ಮೂರು ಕೃಷಿ ಕಾನೂನುಗಳ ವಿಷಯದಲ್ಲೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ತನ್ನ ಮಾತನ್ನು ಮಾತ್ರ ಮಾತನಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.