ಮಥುರಾ(ಉತ್ತರಪ್ರದೇಶ):ಮಥುರಾ ಜಿಲ್ಲೆಯ ಬರ್ಸಾನದಲ್ಲಿ ನಡೆದ 'ಲಾಥ್ಮಾರ್ ಹೋಳಿ' ಆಚರಣೆಯ ನಿಮಿತ್ತ ಮಹಿಳೆಯರು ಪುರುಷರಿಗೆ ಕೋಲುಗಳಿಂದ ಹೊಡೆದಿದ್ದಾರೆ.
ಮಥುರಾದಿಂದ ಕೇವಲ 42 ಕಿ.ಮೀ ದೂರದಲ್ಲಿರುವ ಹಳ್ಳಿಯೊಂದು ಈ ಬಗೆಯ 'ಲಾಥ್ಮಾರ್ ಹೋಳಿ'ಗೆ ಹೆಸರುವಾಸಿಯಾಗಿದೆ, ಅಲ್ಲಿ ಮಹಿಳೆಯರು ಪುರುಷರನ್ನು ಬಣ್ಣಗಳಿಂದಷ್ಟೇ ಅಲ್ಲ, ಆದರೆ ಕೋಲುಗಳಿಂದ ಹೊಡೆಯುತ್ತಾರೆ.
ಪೌರಾಣಿಕ ವ್ಯಕ್ತಿ ಹಾಗೂ ಮಹಿಳೆಯರ ಆರಾಧ್ಯದೈವ ಶ್ರೀ ಕೃಷ್ಣನ ಮನದರಸಿ ರಾಧೆಯ ಜನ್ಮಸ್ಥಳವಾದ ಬರ್ಸಾನದಲ್ಲಿ ಹೋಳಿ ಸಮಯದಲ್ಲಿ ಈ ರೀತಿಯ ಕೆಲವು ವಿಶೇಷ ಆಚರಣೆಗಳನ್ನು ಕಾಣಬಹುದು. ಹೋಳಿ ದಿನದ ಕೆಲವು ದಿನಗಳ ಮೊದಲು ಇವುಗಳನ್ನು ಆಚರಿಸಲಾಗುತ್ತದೆ. ಮಥುರಾದಲ್ಲಿ, ಹೋಳಿ ಹಬ್ಬಗಳು ಆಚರಣೆಗೆ ಏಳು ದಿನಗಳ ಮೊದಲು ಇವುಗಳು ಪ್ರಾರಂಭವಾಗುತ್ತವೆ. ಈ ವರ್ಷ ಮಾರ್ಚ್ 29 ರಂದು ಹೋಳಿ ಆಚರಿಸಲಾಗುವುದರಿಂದ, ಲಾಥ್ಮಾರ್ ಹೋಳಿ ಸೇರಿದಂತೆ ಹಬ್ಬಗಳು ಮಾರ್ಚ್ 22 ರಂದು ಪ್ರಾರಂಭವಾದವು. ಲಾಥ್ಮಾರ್ ಎಂದರೆ ಕೋಲುಗಳೊಂದಿಗೆ ಆಟವಾಡುವುದು. ಪುರುಷರು ಮಹಿಳೆಯರಿಗೆ ಬಣ್ಣ ಎರಚಲು ಯತ್ನಿಸುತ್ತಾರೆ. ಆಗ ಮಹಿಳೆಯರು ಕೋಲಿನಿಂದ ಪುರುಷರನ್ನು ಹೊಡೆಯಲು ಮುಂದಾಗುತ್ತಾರೆ. ಈ ವೇಳೆ ಪುರುಷರು ಗುರಾಣಿಗಳನ್ನು ಅಡ್ಡ ಹಿಡಿದು ದೊಣ್ಣೆಯ ಏಟುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಮರುದಿನ ಮಹಿಳೆಯರಿಗೆ ಬಣ್ಣದೋಕುಳಿ ಎರಚಿ ತೇವಗೊಳಿಸಿ ಒಂದು ಸಣ್ಣ ವಿನೋದ, ತಮಾಷೆ ರೀತಿಯಲ್ಲಿ ನಡೆಯುತ್ತದೆ. ಈ ವೇಳೆ ಹಾಡುಗಳನ್ನು ಕೂಡ ಹಾಡುತ್ತಾರೆ.
ಇನ್ನು ಈ ಬಾರಿ ಇಂತಹ ವಿಶಿಷ್ಟ ಆಚರಣೆಗಳು ನಡೆಯುವಾಗ ಯಾವುದೇ ಅಹಿತಕರ ವಿದ್ಯಮಾನಗಳು ನಡೆಯದಂತೆ ಪೊಲೀಸರು ನಿಗಾ ವಹಿಸುವುದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಜಾಪ್ರಭುತ್ವದ ನಾಶ: ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆ ಬಗ್ಗೆ ಖರ್ಗೆ ಆಕ್ರೋಶ