ETV Bharat / bharat

ಕೋವಿಡ್‌ ವೇಳೆ 1,400 ಕಿ.ಮೀ ಸಂಚರಿಸಿ ಮಗನ ಕರೆತಂದ ತಾಯಿಗೆ ಮತ್ತೆ ಮಗ ಉಕ್ರೇನ್‌ನಲ್ಲಿ ಸಿಲುಕಿದ ಸಂಕಟ! - Razia Begum a teacher at a government run school in Telangana s Nizamabad district

ಉಕ್ರೇನ್‌ನಿಂದ 260 ವಿದ್ಯಾರ್ಥಿಗಳು ತೆಲಂಗಾಣಕ್ಕೆ ಹಿಂತಿರುಗಿದ್ದರೂ ರಜಿಯಾ ಇನ್ನೂ ತನ್ನ ಮಗ ಅಮನ್‌ಗಾಗಿ ಕಾಯುತ್ತಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿದ್ದಾನೆ ಈ ಮಹಾತಾಯಿ ಮಗ!

author img

By

Published : Mar 4, 2022, 7:00 PM IST

ಹೈದರಾಬಾದ್: ಎರಡು ವರ್ಷಗಳ ಹಿಂದೆ ತನ್ನ ಮಗ ಸಂಕಷ್ಟದಲ್ಲಿದ್ದಾಗ ಆತನನ್ನು ಮನೆಗೆ ಕರೆತರಲು ಸ್ಕೂಟರ್‌ನಲ್ಲಿ 1,400 ಕಿ.ಮೀ ಸವಾರಿ ಮಾಡಿದ ಆಕೆ ಇಂದು ಬೇರೆ ದೇಶದಲ್ಲಿ ಸಿಲುಕಿರುವ ಮಗನನ್ನು ಕರೆತರುವ ವಿಷಯದಲ್ಲಿ ಅಸಹಾಯಕಳಾಗಿದ್ದಾಳೆ.

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ರಜಿಯಾ ಬೇಗಂ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ 19 ವರ್ಷದ ಮಗನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.

ಉಕ್ರೇನ್‌ನಿಂದ 260 ವಿದ್ಯಾರ್ಥಿಗಳು ತೆಲಂಗಾಣಕ್ಕೆ ಹಿಂತಿರುಗಿದ್ದರೂ ರಜಿಯಾ ಇನ್ನೂ ತನ್ನ ಮಗ ಅಮನ್‌ಗಾಗಿ ಕಾಯುತ್ತಿದ್ದಾರೆ. ಇವರ ಪುತ್ರ ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಸುಮಿಯಲ್ಲಿ ಎಂಬಿಬಿಎಸ್​ ಮೊದಲ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ರಷ್ಯಾದ ಗಡಿಗೆ ಸಮೀಪವಿರುವ ಸುಮಿ ನಗರದಲ್ಲಿರುವ ಸುಮಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಅಮನ್ ಓದುತ್ತಿದ್ದು, ಇಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳೂ ಸಹ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಕಾತುರದಿಂದ ಎದುರು ನೋಡುತ್ತಿದ್ದಾರೆ ಎಂದು ಸುಮಿಯಲ್ಲಿನ ವರದಿಗಳಿಂದ ತಿಳಿದುಬಂದಿದೆ. ರಷ್ಯಾದ ನಿರಂತರ ಶೆಲ್ ದಾಳಿಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಬಂಕರ್‌ಗಳಲ್ಲಿದ್ದಾರೆ ಎಂದು ವರದಿಯಾಗಿದೆ. ನಗರದಲ್ಲಿ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯು ಯುದ್ಧದಲ್ಲಿ ಹಾನಿಗೊಳಗಾಗಿದೆ ಎಂದು ಹೇಳಲಾಗಿದೆ.

ರಜಿಯಾ ಬೇಗಂ ತನ್ನ ಮಗ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇನ್ನು ಆತ ಅಲ್ಲಿ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಲು ಎರಡು ದಿನಗಳ ಹಿಂದೆ ಕರೆ ಮಾಡಿದ್ದನಂತೆ. ಈ ಬಗ್ಗೆ 50 ವರ್ಷದ ಶಿಕ್ಷಕಿ ಹೇಳಿದ್ದಾರೆ.

ಸುರಕ್ಷಿತವಾಗಿದ್ದೇನೆ ಚಿಂತಿಸಬೇಡಿ ಎಂದು ಆತ ನನಗೆ ಹೇಳಿದ್ದಾನೆ. ಆದರೆ, ಆತ ವಿದೇಶಿ ಭೂಮಿಯಲ್ಲಿ ಯುದ್ಧದ ಮಧ್ಯೆ ಸಿಲುಕಿಕೊಂಡಿರುವುದರಿಂದ ನನಗೆ ಚಿಂತೆಯಾಗಿದೆ ಎನ್ನುತ್ತಾರೆ ಬೇಗಂ.

ರಜಿಯಾ ಬೇಗಂ ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಮನವಿ ಮಾಡಿದ್ದು, ಅಲ್ಲಿ ಸಿಲುಕಿರುವ ತನ್ನ ಮಗ ಮತ್ತು ಇತರ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಬಾರಿ ತನ್ನ ಮಗ ಸಾವಿರಾರು ಕಿಲೋಮೀಟರ್ ದೂರದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಮತ್ತು ಅದೂ ಬೇರೆ ದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ತಾನು ಅಸಹಾಯಕಳಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಹಿಂದೆ 1,400 ಕಿಮೀ ಸ್ಕೂಟರ್​​ನಲ್ಲೇ ಸಂಚರಿಸಿದ್ದರು: ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದ ತನ್ನ ಮಗನನ್ನು ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಮನೆಗೆ ಕರೆತರಲು ರಜಿಯಾ ಬೇಗಂ ತನ್ನ ಸ್ಕೂಟರ್‌ನಲ್ಲಿ 1,400 ಕಿಮೀ ಉದ್ದದ ಪ್ರಯಾಸಕರ ಪ್ರಯಾಣವನ್ನು ಮಾಡಿ ಹೆಸರಾಗಿದ್ದರು. ಅವರು ತನ್ನ ಮಗನನ್ನು ತಲುಪಲು ರಾತ್ರಿಯೂ ಸಹ ಹೆದ್ದಾರಿಗಳಲ್ಲಿ ಸವಾರಿ ಮಾಡಿದ್ದರು.

ಏಪ್ರಿಲ್ 2020 ರಲ್ಲಿ ಬೇಗಂ ಮಗ ನೆಲ್ಲೂರು ಜಿಲ್ಲೆಯ ರಹಮತಾಬಾದ್‌ಗೆ ಸ್ನೇಹಿತನ ಮನೆಗೆ ಹೋಗಿದ್ದರು. ಆದರೆ, ಆ ವೇಳೆ ಹಠಾತ್​ ಕೊರೊನಾ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ಅವರು ಈ ರೀತಿ ಮಾಡಿದ್ದರು.

ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ರಜಿಯಾ ಕೆಲವು ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಪತಿಯನ್ನು ಕಳೆದುಕೊಂಡಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸೇವೆ ಸಲ್ಲಿಸಲು ತನ್ನ ಕಿರಿಯ ಮಗ ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡಿದ್ದಾನೆ ಎಂದು ಮಗನ ಬಗ್ಗೆ ಹೆಮ್ಮೆಪಡುತ್ತಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.