ಸಮಸ್ತಿಪುರ(ಬಿಹಾರ): ಜಮೀನು ವಿವಾದದ ಹಿನ್ನೆಲೆ ಚಿಕ್ಕಮ್ಮ ತನ್ನ ಮಗಳನ್ನು ಮನೆಯಲ್ಲಿ ಕೂಡಿ ಹಾಕಿ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿರುವ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಸಂಬಂಧಿಕರು ಚಿಕಿತ್ಸೆಗಾಗಿ ಸಮಸ್ತಿಪುರ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಗಂಭೀರ ಸ್ಥಿತಿ ಕಂಡ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಸೂಚಿಸಿದರು. ಈ ಪ್ರಕರಣವು ಜಿಲ್ಲೆಯ ರೋಸ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಉದಯಪುರ ಗ್ರಾಮಕ್ಕೆ ಸಂಬಂಧಿಸಿದೆ.
ಸೀಮೆಎಣ್ಣೆ ಸುರಿದು ಸಜೀವ ದಹನಕ್ಕೆ ಯತ್ನ: ಉದಯಪುರ ಗ್ರಾಮದ ನಿವಾಸಿ ಸಿಂಗೇಶ್ವರ್ ರಾಮ್ ಮತ್ತು ಆತನ ಅಣ್ಣನ ಮಧ್ಯೆ ಜಮೀನು ವಿವಾದ ನಡೆಯುತ್ತಿದೆ ಎನ್ನಲಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪಂಚಾಯಿತಿ ಕೂಡ ನಡೆದಿತ್ತು.
ಸಿಂಗೇಶ್ವರ್ ರಾಮ್ ಮತ್ತು ಅವರ ಪತ್ನಿ ಭಾನುವಾರ ರಾತ್ರಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಸಂಗೇಶ್ವರ್ ರಾಮ್ ಮಗಳು ನೇಹಾ ಕುಮಾರಿ (14) ಟ್ಯೂಷನ್ ಮುಗಿಸಿಕೊಂಡು ಮನೆಗೆ ಬಂದಿದ್ದಾಳೆ.
ಜಮೀನು ವಿವಾದದಲ್ಲಿ ರಾಕ್ಷಿಸಿಯಾದ ಚಿಕ್ಕಮ್ಮ: ಟ್ಯೂಷನ್ನಿಂದ ಬಂದ ನೇಹಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಇದೇ ವೇಳೆ ತನ್ನ ಮೈದುನನ ಮನೆಗೆ ಬಂದ ಅತ್ತಿಗೆ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ಮನೆಯ ಬಾಗಿಲನ್ನು ಹೊರಗಿನಿಂದ ಮುಚ್ಚಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಮತ್ತು ಸಂಬಂಧಿಕರು ಕೂಡಲೇ ಮನಗೆ ತಲುಪಿದ್ದಾರೆ.
ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿದ್ದ ಸ್ಥಿತಿಯಲ್ಲಿದ್ದ ನೇಹಾಳನ್ನು ಸಂಬಂಧಿಕರು ಚಿಕಿತ್ಸೆಗಾಗಿ ರೋಸ್ರಾ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದರು. ಘಟನೆ ಬಳಿಕ ಸಂಗೇಶ್ವರ್ ಸಹೋದರನ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಸದ್ಯ ಸಂತ್ರಸ್ತೆ ತಂದೆಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ನೇಹಾ ಸ್ಥಿತಿ ಚಿಂತಾಜನಕವಾಗಿದ್ದು, ಶೇ.80ರಿಂದ 90ರಷ್ಟು ಸುಟ್ಟು ಹೋಗಿದ್ದಾರೆ.
ಮಾತನಾಡಲು ಸಾಧ್ಯವಾಗುತ್ತಿಲ್ಲ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನೇಹಾಳನ್ನು ಡಿಎಂಸಿಎಚ್‌ಗೆ ಸ್ಥಳಾಂತರಿಸಲಾಗಿದೆ. ಈ ವಿಷಯವು ಜಮೀನು ವಿವಾದಕ್ಕೆ ಸಂಬಂಧಿಸಿದೆ. ಬಾಲಕಿಗೆ ಪ್ರಜ್ಞೆ ಮರಳಿದ ನಂತರ, ಸರಿಯಾದ ಪರಿಸ್ಥಿತಿ ತಿಳಿಯುತ್ತದೆ. ಹೇಳಿಕೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.