ETV Bharat / bharat

COVID ವ್ಯಾಕ್ಸಿನ್ ನೀಡಲು ಬಂದವರಿಗೆ ಹಾವು ತೋರಿಸಿ ಹೆದರಿಸಿದ ಮಹಿಳೆ..ವಿಡಿಯೋ - ಕೊರೊನಾ ಮಹಾಮಾರಿ

ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೋವಿಡ್​ ವ್ಯಾಕ್ಸಿನೇಷನ್​ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಅನೇಕ ಘಟನೆಗಳು ನಡೆಯುತ್ತಿದ್ದು, ಸದ್ಯ ರಾಜಸ್ಥಾನದಲ್ಲಿ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

Women threatens vaccination team
Women threatens vaccination team
author img

By

Published : Oct 16, 2021, 5:56 PM IST

ಅಜ್ಮೀರ್​(ರಾಜಸ್ಥಾನ): ಕೊರೊನಾ ಮಹಾಮಾರಿ ವಿರುದ್ಧದ ಹೋರಾಟ ಮುಂದುವರೆದಿದ್ದು, ರಾಮಬಾಣವಾಗಿರುವ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲರಿಗೂ ಮನವಿ ಮಾಡಿಕೊಳ್ತಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ವ್ಯಾಕ್ಸಿನೇಷನ್​ ಬಗ್ಗೆ ಇರುವ ಭಯ ಮಾತ್ರ ಇಲ್ಲಿಯವರೆಗೆ ಕಡಿಮೆಯಾಗಿಲ್ಲ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ಸಿಕ್ಕಿದೆ.

ಹಾವು ತೋರಿಸಿ ಹೆದರಿಸಿದ ಮಹಿಳೆ

ರಾಜಸ್ಥಾನದ ಅಜ್ಮೀರ್​​ದಲ್ಲಿರುವ ನಗೆಲಾವ್​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಲ್ಬೇಲಿಯಾ ಶಿಬಿರದಲ್ಲಿ ವಾಸವಾಗಿದ್ದ ಕೆಲವರಿಗೆ ಕೋವಿಡ್​ ವ್ಯಾಕ್ಸಿನ್​ ನೀಡುವ ಉದ್ದೇಶದಿಂದ ಆರೋಗ್ಯ ಸಿಬ್ಬಂದಿಗಳು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ, ಮಹಿಳೆಯೊಬ್ಬಳು ತನ್ನ ಕೈಯಲ್ಲಿ ಹಾವು ಹಿಡಿದುಕೊಂಡು, ಆರೋಗ್ಯ ಸಿಬ್ಬಂದಿಗೆ ಹೆದರಿಸಿದ್ದಾಳೆ. ನನಗೆ ಒಂದು ವೇಳೆ ಲಸಿಕೆ ಹಾಕಿಸಿದರೆ ಹಾವಿನಿಂದ ಕಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ವೈದ್ಯರ ತಂಡ ಕೆಲ ನಿಮಿಷಗಳ ಕಾಲ ಗಾಬರಿಗೊಂಡಿದೆ.

ಇದನ್ನೂ ಓದಿರಿ: ಹೆಣ್ಣು ಮಗು ಹುಟ್ಟಿರುವ ಸಂಭ್ರಮ.. ಗ್ರಾಹಕರಿಗೆ ಹೆಚ್ಚುವರಿ 'ಉಚಿತ ಪೆಟ್ರೋಲ್'​​ ನೀಡಿದ ಬಂಕ್ ಮಾಲೀಕ..

ಮನವೊಲಿಸಿದ ವೈದ್ಯರ ತಂಡ: ಕೈಯಲ್ಲಿ ಹಾವು ಹಿಡಿದುಕೊಂಡು ಹೆದರಿಸಿರುವ ಮಹಿಳೆ ಮನವೊಲಿಕೆ ಮಾಡುವಲ್ಲಿ ಕೊನೆಗೂ ವೈದ್ಯರ ತಂಡ ಯಶಸ್ವಿಯಾಗಿದ್ದು, ಇದಾದ ಬಳಿಕ ಎಲ್ಲರಿಗೂ ಕೋವಿಡ್​ ವ್ಯಾಕ್ಸಿನ್​ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.