ಎರ್ನಾಕುಲಂ, ಕೇರಳ: ಜಿಲ್ಲೆಯಲ್ಲಿ ಬರ್ಬರ ಕೊಲೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ಆಗಸ್ಟ್ 9ರ ರಾತ್ರಿ ಕೊಚ್ಚಿ ನಗರದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಕೊಟ್ಟಾಯಂ ಚಂಗನಾಶ್ಶೇರಿ ಮೂಲದ ರೇಷ್ಮಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಯುವಕನನ್ನು ಬಾಳುಸ್ಸೆರಿ ನಿವಾಸಿ ನೌಶಿದ್ ಎಂದು ತಿಳಿದು ಬಂದಿದೆ.
ಆರೋಪಿ ನೌಶಿದ್ ಕಾಲೂರು ನಗರದ ಹೊಟೇಲ್ವೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದು, ಲ್ಯಾಬ್ ಅಟೆಂಡರ್ ರೇಷ್ಮಾ ಜೊತೆ ಸ್ನೇಹ ಬೆಳಸಿದ್ದ. ಇವರಿಬ್ಬರ ಪರಿಚಯ ಸಾಮಾಜಿಕ ಜಾಲತಾಣ ಮೂಲಕ ಆಗಿತ್ತು. ಆಗಸ್ಟ್ 9 ರಾತ್ರಿ ರೇಷ್ಮಾಳಿಗೆ ನೌಶಿದ್ ಕಾಲ್ ಮಾಡಿ ಕಾಲೂರಿನ ಹೊಟೇಲ್ ಬರುವಂತೆ ಹೇಳಿದ್ದಾನೆ. ನೌಶಿದ್ ಫೋನ್ ಬಂದಾಕ್ಷಣ ರೇಷ್ಮಾ ನೇರ ಹೊಟೇಲ್ಗೆ ತೆರಳಿದ್ದಾಳೆ. ಬಳಿಕ ನೌಶಿದ್ ರೂಂಗೆ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ನೌಶಿದ್ ಚಾಕು ತೆಗೆದುಕೊಂಡು ರೇಷ್ಮಾ ಅವರ ಕುತ್ತಿಗೆಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದದ್ದ ರೇಷ್ಮಾಳನ್ನು ಕಂಡ ಹೊಟೇಲ್ ಸಿಬ್ಬಂದಿ ಕೂಡಲೇ ಆಕೆಯ ಸಹಾಯಕ್ಕೆ ದೌಡಾಯಿಸಿದ್ದರು. ಆಕೆಯ ಪ್ರಾಣ ಉಳಿಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ರೇಷ್ಮಾ ಮೃತಪಟ್ಟರು. ರೇಷ್ಮಾಳನ್ನು ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ನೌಶಿದ್ ಸಹ ಜೊತೆಗಿದ್ದನು. ಆಗ ಪೊಲೀಸರಿಗೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೌಶಿದ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಎರ್ನಾಕುಲಂ ಉತ್ತರ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ಮುಗಿದ ನಂತರ ಯುವತಿಯ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಪೊಲೀಸರು ಇಂದು (ಆ.10) ನೌಶಿದ್ನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಓದಿ:Sana Khan: ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ ಸನಾ ಖಾನ್; ಪೊಲೀಸರಿಂದ ತನಿಖೆ ಚುರುಕು
ಸ್ನೇಹಿತನನ್ನು ಕೊಂದು ಶರಣಾದ ವ್ಯಕ್ತಿ:ಬೆಂಗಳೂರು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯಕಂಡಿದೆ. ವ್ಯಕ್ತಿಯೊಬ್ಬ ಸ್ನೇಹಿತನನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಘಟ್ಟದಲ್ಲಿ ನಡೆದಿದೆ. ಕೊಮ್ಮಘಟ್ಟ ನಿವಾಸಿ ಚೇತನ್ ಮೃತ ದುರ್ದೈವಿ. ಸ್ನೇಹಿತ ಅಮಾನುಲ್ಲಾ ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.