ನವದೆಹಲಿ : ಇಬ್ಬರು ಮಕ್ಕಳು ಕರೆದುಕೊಂಡು ಮನೆಗೆ ತೆರಳುತ್ತಿದ್ದ ತಾಯಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಹಿಂಬದಿಯಿಂದ ಓಡಿ ಬಂದು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಾಗರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?: ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ವ್ಯಕ್ತಿಯೊಬ್ಬ ನೋಡಿದ್ದಾನೆ. ಆತ ಬೆನ್ನತ್ತಿರುವ ಸಂಗತಿ ಸಹ ಮಹಿಳೆಗೆ ಗೊತ್ತಾಗಿದೆ. ದಾಳಿಕೋರನಿಂದ ತಪ್ಪಿಸಿಕೊಳ್ಳುವ ಮಹಿಳೆ ವೇಗವಾಗಿ ನಡೆಯಲು ಪ್ರಯತ್ನಿಸುತ್ತಿದ್ದಳು. ಆದ್ರೆ, ಮಹಿಳೆಯ ಮಡಿಲಲ್ಲಿ ಮಗು ಇದ್ದ ಕಾರಣ ಆಕೆಗೆ ವೇಗವಾಗಿ ಓಡಲು ಸಾಧ್ಯವಾಗಲಿಲ್ಲ.
ಹೀಗಾಗಿ, ಆಕೆ ತನ್ನ ಮತ್ತು ತನ್ನ ಮಕ್ಕಳನ್ನು ಉಳಿಸಿಕೊಳ್ಳಲು ಮನೆಯೊಂದರಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದಾರೆ. ಆದ್ರೆ, ಅದಕ್ಕೂ ಮುನ್ನವೇ ಆ ವ್ಯಕ್ತಿ ಮಕ್ಕಳೆದುರೇ ತಾಯಿಯ ಮೇಲೆ ಹುಚ್ಚನಂತೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆ.
ಓದಿ: ಮಕ್ಕಳ ಮೇಲೆ ವಾಮಾಚಾರದ ಶಂಕೆ.. ಊಟ ಮಾಡುತ್ತಿದ್ದ ಚಿಕ್ಕಪ್ಪ-ಚಿಕ್ಕಮ್ಮಳನ್ನು ಕೊಚ್ಚಿ ಕೊಲೆ ಮಾಡಿದ ಮಗ!
ಚಾಕುವಿನಿಂದ ಹಲ್ಲೆಗೊಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಮಹಿಳೆಯನ್ನು ಸಮೀಪದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ಮಹಿಳೆಯನ್ನು ಆರತಿ ಎಂದು ಗುರುತಿಸಲಾಗಿದೆ. ಅವಳು ಪಶ್ಚಿಮ ಸಾಗರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ವ್ಯಕ್ತಿ ಆಕೆಗೆ ಪರಿಚಿತ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಪೊಲೀಸ್ ತಂಡವು ಸಮೀಪದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿತ್ತು. ಆದ್ರೆ, ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಘಟನೆ ಕುರಿತು ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದೆ.
ಈ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳು ಸಹ ಮುನ್ನೆಲೆಗೆ ಬಂದಿದ್ದು, ಕೆಂಪು ಟಿ-ಶರ್ಟ್ ಧರಿಸಿರುವ ದಾಳಿಕೋರ ಮಹಿಳೆ ಕೊಲೆಗಾಗಿ ಓಡುತ್ತಿರುವುದು ಕಂಡು ಬಂದಿದೆ. ಆರೋಪಿ ಪತ್ತೆಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಆರೋಪಿ ಪೊಲೀಸರ ವಶವಾಗಲಿದ್ದಾನೆ. ಸದ್ಯಕ್ಕೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ ಎಂದು ನೈರುತ್ಯ ಜಿಲ್ಲಾ ಡಿಸಿಪಿ ಮನೋಜ್ ಸಿ. ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.