ETV Bharat / bharat

ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್​​ನಲ್ಲಿ ಸಿಲುಕಿ ಮಹಿಳೆ ಸಾವು

author img

By

Published : Mar 22, 2022, 8:42 PM IST

ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಟೈರ್​​ನಡಿ ಸಿಲುಕಿ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

HYDERABAD BUS ACCIDENT NEWS
HYDERABAD BUS ACCIDENT NEWS

ಅಫ್ಜಲ್​ಗಂಜ್​​(ತೆಲಂಗಾಣ): ಮಹಿಳೆಯೋರ್ವಳು ಬಸ್ಸಿನ ಟೈರ್​​ನಡಿ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೈದರಾಬಾದ್​​ನ ಅಫ್ಜಲ್​​ಗಂಜ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 21 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪೊಲೀಸರು ವಿಡಿಯೋ ರಿಲೀಸ್ ಮಾಡಿದ್ದಾರೆ. ಮನೆಗೆ ಹೋಗುವ ಅವಸರದಲ್ಲಿ ಬಸ್ಸಿನಿಂದ ಕೆಳಗೆ ಇಳಿದಿರುವ ಮಹಿಳೆ ರಸ್ತೆ ಕ್ರಾಸ್ ಮಾಡಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.

ತೆಲಂಗಾಣ ಸರ್ಕಾರಿ ಬಸ್​​ನಲ್ಲಿ ಪ್ರಯಾಣ ಮಾಡಿರುವ ಮಹಿಳೆಯೋರ್ವಳು ಅದರಿಂದ ಕೆಳಗಿಳಿದು, ಮುಂಭಾಗದಿಂದ ದಾಟಲು ಮುಂದಾಗಿದ್ದಾರೆ. ಇದನ್ನು ಗಮನಿಸದೆ ಬಸ್​ ಚಲಾಯಿಸಿದಾಗ ಮುಂಭಾಗದ ಟೈರ್​​ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಚಂಚಲ್​ ಗೂಡಿನ ಜೆಕೆ ಟವರ್ಸ್​​ ಪ್ರದೇಶದ ಸಿರಾಜ್ ಬಾನು ಮಾರ್ಚ್​ 1ರಂದು ಮನೆಗೆ ಹೋಗಲು ಬಸ್​​ ಹತ್ತಿದ್ದಾರೆ. ಸಿದ್ದಿ ಅಂಬರ್​ ಬಜಾರ್ ಸೇತುವೆ ಬಳಿ ಚಾಲಕ ಬಸ್​ ನಿಲ್ಲಿಸಿದ್ದಾನೆ. ಈ ವೇಳೆ ಬಸ್ಸಿನಿಂದ ಕೆಳಗಿಳಿದ ಸಿರಾಜ್ ಬಾನು, ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಮದುವೆ ಮಾಡಿಕೊಳ್ಳಲು ₹2 ಲಕ್ಷ ಬೇಡಿಕೆ ಇಟ್ಟ ವಧು: ವರನ ತಂದೆಗೆ ಹೃದಯಾಘಾತ!

ಪ್ರಕರಣ ದಾಖಲು ಮಾಡಿಕೊಂಡಿರುವ ಅಫ್ಜಲ್​ಗಂಜ್​​ ಪೊಲೀಸರು ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಅಪಘಾತಕ್ಕೆ ಕಾರಣವಾದ ಬಸ್​ ಚಾಲಕ ಸೈಯದ್ ಎಂಬಾತನನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.