ETV Bharat / bharat

ಒಂಟಿ ಮಹಿಳೆ ಮೇಲೆ ಅತ್ಯಾಚಾರ.. ಸಂತ್ರಸ್ತೆಗೆ ಚಾಕು ಇರಿದು ಪರಾರಿಯಾದ ಕೀಚಕರು - ಗುರುಗ್ರಾಮದಲ್ಲಿ ಒಂಟಿ ಮಹಿಳೆ ಮೇಲೆ ಅತ್ಯಾಚಾರ

ಒಂಟಿಯಾಗಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳಿಬ್ಬರು ಅತ್ಯಾಚಾರ ಎಸಗಿದ್ದಲ್ಲದೇ ಆಕೆಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

Woman gangraped in Gurugram  Rape accused arrested in Gurugram  stabbed after rape in gurugram  Woman Raped Stabbed in gurugram  ಹರಿಯಾಣದಲ್ಲಿ ಸಂತ್ರಸ್ತೆಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು  ಗುರುಗ್ರಾಮದಲ್ಲಿ ಒಂಟಿ ಮಹಿಳೆ ಮೇಲೆ ಅತ್ಯಾಚಾರ  ಗುರುಗ್ರಾಮ ಅಪರಾಧ ಸುದ್ದಿ
ಸಂತ್ರಸ್ತೆಗೆ ಚಾಕು ಇರಿದು ಪರಾರಿಯಾದ ದುಷ್ಕರ್ಮಿಗಳು
author img

By

Published : May 4, 2022, 2:35 PM IST

ಗುರುಗ್ರಾಮ : ನಗರದಲ್ಲಿ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಗೆ ಚಾಕುವಿನಿಂದ ಇರಿದು ಆರೋಪಿಗಳಿಬ್ಬರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರಿಂದ ಅತ್ಯಾಚಾರ : ಸೋಮವಾರ ಪತಿ ಕೆಲಸಕ್ಕೆಂದು ಹೋಗಿದ್ದು, 24 ವರ್ಷದ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಳು. ಒಂಟಿಯಾಗಿದ್ದ ಮಹಿಳೆ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲೂ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಮನೆಗೆ ಬಂದ ಪತಿ : ಇಬ್ಬರು ಪುರುಷರು ನನ್ನ ಮೇಲೆ ಅತ್ಯಾಚಾರ ಎಸಗಿ, ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಮಹಿಳೆ ತನ್ನ ಪತಿಗೆ ಹೇಳಿದ್ದಾರೆ. ಪತಿ ಕೂಡಲೇ ತನ್ನ ಹೆಂಡ್ತಿಯನ್ನು ಗುರುಗ್ರಾಮ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಹಿಳೆಯ ಗಂಭೀರ ಸ್ಥಿತಿಯನ್ನು ಕಂಡ ವೈದ್ಯರು ಆಕೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಿದರು.

ಓದಿ: ಕಟ್ಟಿಕೊಂಡ ಹೆಂಡ್ತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿದ ಪತಿ.. ಯಾವ ಕಾರಣಕ್ಕಾಗಿ ಗೊತ್ತಾ?

ಪ್ರಕರಣ ದಾಖಲು: ಸಂತ್ರಸ್ತೆಯ ಪತಿ ಡಿಎಲ್‌ಎಫ್ ಹಂತ-3 ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಆಕೆಯ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಂಧನ : ಈ ಪ್ರಕರಣದ ಆರೋಪಿಯನ್ನು ಬಿಹಾರದ ನಿವಾಸಿ ಅನಿಲ್ ಠಾಕೂರ್ ಎಂದು ಗುರುತಿಸಲಾಗಿದೆ. ಎರಡನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಶೀಘ್ರದಲ್ಲೇ ಎರಡನೇ ಆರೋಪಿಯನ್ನೂ ಬಂಧಿಸಲಾಗುವುದು ಎಂದು ಗುರುಗ್ರಾಮ್ ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.