ನಾಸಿಕ್, ಮಹಾರಾಷ್ಟ್ರ: ಗಂಡ ಸಾವನ್ನಪ್ಪಿ 10 ದಿನಗಳು ಕಳೆದಿವೆ. ತನ್ನ ಗಂಡ 10ನೇ ದಿನದ ಕಾರ್ಯ ನಡೆಯುತ್ತಿತ್ತು. ಪತಿಯ ಸಾವು ಅನುಮಾನಿಸಿದ್ದಕ್ಕೆ ಸಂಬಂಧಿಕರು ಮತ್ತು ಗ್ರಾಮಸ್ಥರು ಆಕೆಯನ್ನು ವಿಧವೆ ಮಹಿಳೆಯನ್ನು ಥಳಿಸಿ, ಮುಖಕ್ಕೆ ಕಪ್ಪು ಮಸಿ ಹಚ್ಚಿ, ಆಕೆಯ ಕುತ್ತಿಗೆಗೆ ಪಾದರಕ್ಷೆಯ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಚಂದವಾಡ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.
ಏನಿದು ಘಟನೆ: ಮಾಹಿತಿ ಪ್ರಕಾರ ಚಂದವಾಡ ತಾಲೂಕಿನ ಗ್ರಾಮದಲ್ಲಿ ವಾಸವಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೃತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇದಾದ ನಂತರ ಮೃತರ ಮನೆಯಲ್ಲಿ ಮುಂದಿನ ವಿಧಿವಿಧಾನಗಳು ನಡೆದವು. ವಿಧಿವಿಧಾನದ ವೇಳೆ ಮಹಿಳೆ ತನ್ನ ಗಂಡನ ಸಾವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು ಎಂದು ಹೇಳಲಾಗಿದೆ. ಆಕೆ, ತನ್ನ ಗಂಡನ ಸಾವಿನ ಸತ್ಯವನ್ನು ತನ್ನ ಅತ್ತಿಗೆಯಿಂದ ತಿಳಿದುಕೊಳ್ಳಲು ಬಯಸಿದ್ದಳು. ಈ ವೇಳೆ, ಮಹಿಳೆಯ ಪ್ರಶ್ನೆಗಳಿಂದ ಆಕೆಯ ಅತ್ತಿಗೆ ಕೋಪಗೊಂಡಿದ್ದಾರೆ. ಈ ವೇಳೆ, ಆಕೆ ಗ್ರಾಮದ ಇತರ ಮಹಿಳೆಯರೊಂದಿಗೆ ಸೇರಿ ಸಂತ್ರಸ್ತೆ ಮತ್ತು ಆಕೆಯ ಮಕ್ಕಳನ್ನು ತೀವ್ರವಾಗಿ ಥಳಿಸಿದ್ದಾರೆ. ಇದ್ಯಾವುದಕ್ಕೂ ತೃಪ್ತರಾಗದ ಅವರು ವಿಧವೆ ಮುಖಕ್ಕೆ ಕಪ್ಪು ಮಸಿ ಬಳಿದು, ಪಾದರಕ್ಷೆಯ ಹಾರ ಹಾಕಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ವಿಧವೆ ಮಹಿಳೆಯನ್ನು ರಕ್ಷಿಸಿದ ಪೊಲೀಸರು: ಸಂತ್ರಸ್ತೆಗೆ ನಡೆದ ಅಮಾನವೀಯ ವರ್ತನೆಯ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಜನರ ಕಪಿಮುಷ್ಠಿಯಿಂದ ಆ ಮಹಿಳೆ ಮತ್ತು ಅವರ ಮಕ್ಕಳನ್ನು ರಕ್ಷಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಜಗಳದ ಸಮಯದಲ್ಲಿ ಮಹಿಳೆ ಗಾಯಗೊಂಡಿದ್ದಾರೆ. ಆದರೆ, ಎರಡೂ ಕಡೆಯವರು ಪ್ರಕರಣ ದಾಖಲಿಸಿಲ್ಲ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಗ್ರಾಮಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ವಡ್ನೇರ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪೊಲೀಸರು ಹೇಳಿದ್ದೇನು?: ಸಂತ್ರಸ್ತೆ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ನಂತರ ಪತಿ ಅವಳನ್ನು ಆಕೆಯ ತಾಯಿಯ ಮನೆಗೆ ಬಿಟ್ಟಿದ್ದರು. ತನ್ನ ಪತ್ನಿಯನ್ನು ನೋಡಲು ಪತಿ ತನ್ನ ಮಕ್ಕಳೊಂದಿಗೆ ಎರಡ್ಮೂರು ಬಾರಿ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಆಗಿನಿಂದಲೂ ಪತ್ನಿಗೆ ಪತಿಯ ಸಾವಿನ ಬಗ್ಗೆ ಅನುಮಾನ ಮೂಡಿದೆ. ಪತಿಯ ಅಂತಿಮ ಸಂಸ್ಕಾರ ನೆರವೇರಿಸಿದರು. ಇದಾದ ನಂತರ ಮೃತರ ಮನೆಯಲ್ಲಿ ಮುಂದಿನ ವಿಧಿವಿಧಾನಗಳು ನಡೆದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತೆ ತನ್ನ ಪತಿಯ ಹತನೇ ದಿನದ ಕಾರ್ಯಕ್ಕೆ ತೆರಳಿದ್ದರು. ನಂತರ ಆಕೆ ತನ್ನ ಪತಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಥಳಿಸಲಾಗಿದೆ. ಈ ಘಟನೆ ಕುರಿತು ಆಕೆಯ ಸಂಬಂಧಿಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಗೌತಮ್ ತೈಡೆ ತಿಳಿಸಿದ್ದಾರೆ.
ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಚಂದವಾಡ್ ಜಿಲ್ಲೆಯಲ್ಲಿ ವಿಧವೆಯೊಬ್ಬರನ್ನು ತಮ್ಮ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಥಳಿಸಿ, ಚಪ್ಪಲಿ ಹಾರ ಹಾಕಿ ಅವಮಾನಿಸಿದ ಘಟನೆ ಕುರಿತು ವಿಧಾನ ಪರಿಷತ್ತಿನ ಉಪ ಸಭಾಪತಿ ಡಾ. ನೀಲಂ ಗೊರ್ಹೆ ಮಾಹಿತಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓದಿ: ಕೆಳಮನೆ 'ಪತ್ನಿ' ಮೇಲ್ಮನೆ 'ಗಂಡ'ಪರಾರಿ ಪ್ರಕರಣ: ವಕೀಲರ ಮೂಲಕ ಪೊಲೀಸರ ಮುಂದೆ ಹಾಜರಾದ ಮೇಲ್ಮನೆ ಗಂಡ