ವಾರಂಗಲ್: ಪ್ರಿಯಕರನ ಸಹಾಯದೊಂದಿಗೆ ಗಂಡನ ಕೊಲೆ ಮಾಡಿರುವ ಪತ್ನಿ, ಬಳಿಕ ಆತ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿರುವ ಪ್ರಕರಣ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ವಾರಂಗಲ್ನ ವಡ್ಡಪಲ್ಲಿ ಪ್ರದೇಶದಲ್ಲಿ ಅನಿಲ್ ಎಂಬ ವ್ಯಕ್ತಿ ಕಾಣೆಯಾಗಿದ್ದಾನೆಂದು ಆತನ ಪತ್ನಿ ಪೂಜಿತಾ ದೂರು ನೀಡಿದ್ದಳು. ತನಿಖೆ ನಡೆಸಲು ಮುಂದಾದ ಪೊಲೀಸರು ಜನವರಿ 29ರಂದು ಮೈಲಾಪುರ ಜಲಾಶಯದಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ವೇಳೆ ಪತ್ನಿ ಮೇಲೆ ಅನಿಲ್ ಪೋಷಕರು ಅನುಮಾನ ವ್ಯಕ್ತಪಡಿಸಿರುವ ಕಾರಣ ವಿಶೇಷ ತಂಡ ರಚಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರು, 4 ಮೊಬೈಲ್ ಫೋನ್ ಹಾಗೂ ಪೂಜಿತಾ, ಡ್ಯಾನಿ, ಸತೀಶ್ ಮತ್ತು ಸುಧಾಮಣಿ ಎಂಬುವವರ ಹೆಡೆಮುರಿ ಕಟ್ಟಿದ್ದಾರೆ.
ಓದಿ: ಮದುವೆಯಾಗಿ ಎರಡೇ ತಿಂಗಳಿಗೆ ಮನಸ್ತಾಪ.. ಬಿ.ಟೆಕ್ ವಿದ್ಯಾರ್ಥಿನಿ ಕೊಂದು ಕಥೆ ಕಟ್ಟಿದ ಗಂಡ!
ಯಾವ ಕಾರಣಕ್ಕಾಗಿ ಕೊಲೆ!?
2018ರಲ್ಲಿ ಅನಿಲ್ ತನ್ನ ಬಳಿ ಇದ್ದ ಆಟೋ ಅಡವಿಟ್ಟು ಡ್ಯಾನಿಯಿಂದ 1 ಲಕ್ಷ ರೂ. ಹಣ ಪಡೆದುಕೊಂಡಿದ್ದನು. ಜತೆಗೆ ಕಂತುಗಳಲ್ಲಿ ಸಾಲ ತೀರಿಸುವ ಭರವಸೆ ನೀಡಿದ್ದನು. ಇದಾದ ಬಳಿಕ ಡ್ಯಾನಿ ಮೇಲಿಂದ ಮೇಲೆ ಅನಿಲ್ ಮನೆಗೆ ಬರಲು ಶುರು ಮಾಡಿದ್ದು, ಪೂಜಿತಾ(ಅನಿಲ್ ಪತ್ನಿ) ಪರಿಚಯವಾಗಿದ್ದಾಳೆ. ಇಬ್ಬರ ನಡುವೆ ವಿವಾಹೇತರ ಸಂಬಂಧ ಕೂಡ ಬೆಳೆದಿದ್ದು, ಇದಕ್ಕೆ ಗಂಡ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಆತನ ಕೊಲೆ ಮಾಡಲು ಮುಂದಾಗಿರುವ ಡ್ಯಾನಿ ಹಾಗೂ ಪೂಜಿತಾ ಜನವರಿ 22ರಂದು ಸ್ಕೆಚ್ ಹಾಕಿ ಆತನನ್ನು ಕೊಲೆ ಮಾಡಿದ್ದಾರೆ. ಯಾರಿಗೂ ಸಂದೇಹ ಬಾರದಂತೆ ಮೃತದೇಹವನ್ನ ಜಲಾಶಯದಲ್ಲಿ ಎಸೆದಿದ್ದಾರೆ.
ಇದಾದ ಬಳಿಕ ಗಂಡ ಕಾಣೆಯಾಗಿದ್ದಾನೆಂದು ಪೂಜಿತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆಕೆಯ ಬಣ್ಣ ಬಯಲಾಗಿದೆ.