ಪುನಲೂರು (ಕೇರಳ): ವ್ಯಕ್ತಿಯೋರ್ವನಿಂದ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆಯೋರ್ವರು ಚಲಿಸುತ್ತಿದ್ದ ರೈಲಿನಿಂದ ಜಿಗಿದಿರುವ ಘಟನೆ ಕೇರಳದ ಪುನಲೂರಿನಲ್ಲಿ ನಡೆದಿದೆ.
ಗುರುವಾಯೂರ್-ಪುನಲೂರು ಪ್ಯಾಸೆಂಜರ್ ರೈಲಿನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲಿನಲ್ಲಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಕಿರುಕುಳ ನೀಡಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿ ಹಣ ಲೂಟಿ ಮಾಡಲು ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರೈಲಿನಿಂದ ಜಿಗಿದಿದ್ದಾಳೆ. ಘಟನೆಯಿಂದ ಸಂತ್ರಸ್ತೆ ತಲೆಗೆ ಏಟು ಬಿದ್ದಿದೆ.
ಇದನ್ನೂ ಓದಿ: ಮತ ಎಣಿಕೆ; ಏಜೆಂಟ್ರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ
ಮಹಿಳೆಯನ್ನ ಮುಲಾಂತುರುತಿ ಮೂಲದವರು ಎಂದು ಗುರುತಿಸಲಾಗಿದ್ದು, ಚೆಂಗಣ್ಣೂರಿನಲ್ಲಿ ಕೆಲಸ ಮಾಡಲು ರೈಲಿನಲ್ಲಿ ತೆರಳುತ್ತಿದ್ದಳು. ಆಕೆ ಕುಳಿತುಕೊಂಡಿದ್ದ ಕಂಪಾರ್ಟ್ಮೆಂಟ್ ಖಾಲಿ ಇದ್ದ ಕಾರಣ ಎರಡು ಬದಿಯ ಬಾಗಿಲು ಮುಚ್ಚಿ ಆಭರಣ ಕಸಿದುಕೊಂಡು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಜತೆಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಭಯಭೀತಳಾದ ಮಹಿಳೆ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರೈಲಿನಿಂದ ಹಾರಿದ್ದಾಳೆ.
ಇದೀಗ ಚಿಕಿತ್ಸೆಗಾಗಿ ಕೊಚ್ಚಿನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.