ಅಮೃತಸರ, ಪಂಜಾಬ್: ಮಗಳೊಂದಿಗೆ ಶಿವನ ದರ್ಶನ ಪಡೆದ ತಾಯಿಯೊಬ್ಬರು ದೇವಾಲಯದ ಮೂರನೇ ಅಂತಸ್ತಿನಿಂದ ಕೆಳಗೆ ಬಿದ್ದಿರುವ ಘಟನೆ ಇಲ್ಲಿನ ಬೋಹರ್ವಾಲೆಯಲ್ಲಿ ನಡೆದಿದೆ. ದೇವಾಲಯದ ಕಟ್ಟದಿಂದ ಜಿಗಿದ ಮಹಿಳೆಗೆ 44 ವರ್ಷ ವಯಸ್ಸಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವಿಜಯ್ ನಗರ ಹೊರ ಠಾಣೆ ಪೊಲೀಸ್ ಅಧಿಕಾರಿ ಜಗ್ಬೀರ್ ಸಿಂಗ್, ಗೋಕುಲ್ ವಿಹಾರ್ ಮೂಲದ ಮಹಿಳೆ ತನ್ನ ಮಗಳೊಂದಿಗೆ ದೇವಸ್ಥಾನಕ್ಕೆ ಬಂದಿದ್ದಾರೆ. ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದು ಮಗಳನ್ನು ಬಿಟ್ಟು ದೇವಾಲಯ ಕಟ್ಟಡ ಮೇಲಕ್ಕೆ ತೆರಳಿದ್ದಾೆರೆ. ಬಳಿಕ ಅವರು ದೇವಸ್ಥಾನದ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಕಾರಣವೆನೆಂಬುದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಓದಿ: ಕೋಲಾರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ದೇವಸ್ಥಾನಕ್ಕೆ ಉತ್ತರಾಖಂಡ ಸಚಿವ ಪ್ರೇಮ್ ಚಂದ್ ಭೇಟಿ