ಜಮುಯಿ (ಬಿಹಾರ): ಜಮುಯಿ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಈಗ ಎಲ್ಲೆಡೆ ಇದರ ಬಗ್ಗೆ ಚರ್ಚೆ ಜೋರಾಗಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಲಾಕಪ್ನಿಂದ ಬಿಡಿಸಿಕೊಳ್ಳಳು ದುರ್ಗಾಮಾತೆಯಾದ ಕತೆ ಇದು. ಒಂದು ಕೈಯಲ್ಲಿ ಅಕ್ಕಿ ಇನ್ನೊಂದರಲ್ಲಿ ಕೋಲು ಹಿಡಿದು ಸಾಕ್ಷಾತ್ ದೇವಿ ನಾನೇ ಎಂದು ಹೇಳುತ್ತಿದ್ದರು ಈ ಮಹಿಳೆ.
ಕುಡುಕ ಗಂಡನನ್ನು ಬಿಡಿಸಿಕೊಳ್ಳಲು ಬಂದ ಮಹಿಳೆ: ಈ ಘಟನೆಯಲ್ಲಿನ ಮಹಿಳೆಯ ಹೆಸರು ಸಂಜೂ ದೇವಿ. ಇವರ ಕುಡುಕ ಪತಿ ಕಾರ್ತಿಕ್ ಮಾಂಝಿ ಬಂಧಿಸಿ ಸಿಕಂದರಾ ಠಾಣೆಯ ಲಾಕಪ್ನಲ್ಲಿರಿಸಲಾಗಿತ್ತು. ಪೊಲೀಸ್ ಠಾಣೆಗೆ ಬಂದ ಮಹಿಳೆ, ನಾನೋರ್ವ ದೇವಿ ಭಕ್ತೆ.. ನನ್ನ ಮೇಲೆ ದೇವಿ ಆವಾಹನೆಯಾಗಿದ್ದಾಳೆ ಎನ್ನತೊಡಗಿದರು. ನನ್ನ ಪತಿಯನ್ನು ಬಿಡಿಕೊಂಡು ಹೋಗಲು ಬಂದಿರುವೆ ಎಂದು ಹೇಳತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಹೈ ವೋಲ್ಟೇಜ್ ಡ್ರಾಮಾನೇ ನಡೆಯಿತು.
ಪೊಲೀಸ್ ಠಾಣೆಯಲ್ಲಿ ಡ್ರಾಮಾ: ಮಹಿಳೆಯು ಪೊಲೀಸರ ಎದುರು ಮಾಟ ಮಂತ್ರ, ಜಾದೂ ಟೋನಾ ಮುಂತಾದುವನ್ನು ಮಾಡತೊಡಗಿದರು. ಗಂಟೆಗಳವರೆಗೆ ಮಹಿಳೆಯ ಈ ಡ್ರಾಮಾ ನಡೆಯುತ್ತಲೇ ಇತ್ತು.
ಸಂಜೂ ದೇವಿಯ ಪತಿ ಕುಡುಕನಾಗಿದ್ದು, ಆತನನ್ನು ಜೈಲಿಗೆ ಕಳುಹಿಸುವ ಸಲುವಾಗಿ ಪೊಲೀಸರು ಆತನನ್ನು ಕರೆತಂದು ಲಾಕಪ್ನಲ್ಲಿರಿಸಿದ್ದರು. ಇದೇ ಸಂದರ್ಭದಲ್ಲಿ ಕೈಯಲ್ಲಿ ಲಾಠಿ ಹಿಡಿದ ಸಂಜೂ ದೇವಿ, ನಾನೇ ದುರ್ಗಾ ಮಾತೆ ಎಂದು ಹೇಳುತ್ತ ಠಾಣೆಗೆ ಬಂದರು.
ಎಲ್ಲರ ಮೇಲೂ ಮಾಟ ಮಂತ್ರ: ಪೊಲೀಸ್ ಠಾಣೆಯಲ್ಲಿದ್ದ ಎಲ್ಲರ ತಲೆಯ ಮೇಲೆ ಅಕ್ಕಿಕಾಳುಗಳನ್ನು ಎಸೆಯುತ್ತ ಮಾಟ ಮಂತ್ರಗಳನ್ನು ಗುನುಗತೊಡಗಿದರು ಸಂಜೂ ದೇವಿ. ಅಲ್ಲದೇ ನನ್ನ ಆದೇಶವಿಲ್ಲದೆ ಇಲ್ಲಿ ಏನೂ ನಡೆಯಲ್ಲ ಎಂದರು. ಇನ್ನು ಅವರೊಂದಿಗೆ ಬಂದಿದ್ದ ಕೆಲವರು ಅವರು ನಿಜವಾಗಿಯೂ ದೇವರ ಅವತಾರ, ಆಕೆಗೆ ಏನೂ ಅನ್ನಕೂಡದು ಎಂದು ದನಿಗೂಡಿಸಿದ್ದರು.
ಹಿಂದೆಯೂ ಹೀಗೆ ಮಾಡಿದ್ದಳಂತೆ: ಮಹಿಳೆಯ ಡ್ರಾಮಾ ನೋಡಿ ರೋಸಿ ಹೋದ ಠಾಣೆಯ ಅಧಿಕಾರಿ ಜಿತೇಂದ್ರ ದೇವ್ ದೀಪ್, ಮಹಿಳಾ ಪೊಲೀಸರಿಂದ ಎಲ್ಲ ಮಹಿಳೆಯರನ್ನು ಹೊರಹಾಕಿಸಿದರು. ಸಂಜೂಳನ್ನು ಸಹ ಲಾಕಪ್ಗೆ ತಳ್ಳಲಾಗುವುದು ಎಂದು ಬೆದರಿಸಿದಾಗಲೇ ಆ ಮಹಿಳೆ ತಣ್ಣಗಾಗಿದ್ದು.