ETV Bharat / bharat

ಹೋಟೆಲ್​ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಯುವತಿಗೆ ಲೈಂಗಿಕ ದೌರ್ಜನ್ಯ: ಒಬ್ಬನ ಸೆರೆ, ಮತ್ತೊಬ್ಬ ಪರಾರಿ - ಇಬ್ಬರಿಂದ ಯುವತಿಗೆ ಹೋಟೆಲ್​ನಲ್ಲಿ ಲೈಂಗಿಕ ದೌರ್ಜನ್ಯ

ಕೆಲಸ ಕೊಡಿಸುವ ನೆಪದಲ್ಲಿ ಸ್ನೇಹಿತ ಯುವತಿಯೊಬ್ಬರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಹೋಟೆಲ್​ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಯುವತಿಗೆ ಲೈಂಗಿಕ ದೌರ್ಜನ್ಯ: ಓರ್ವ ಸೆರೆ, ಮತ್ತೊಬ್ಬ ಪರಾರಿ

author img

By

Published : Jul 14, 2022, 4:26 PM IST

ಗುರುಗ್ರಾಮ್: ಸೈಬರ್ ಸಿಟಿ ಗುರುಗ್ರಾಮ್‌ನಲ್ಲಿ ಎರಡು ದಿನಗಳ ಕಾಲ ಹೋಟೆಲ್ ಕೊಠಡಿಯಲ್ಲಿ ಯುವತಿಯನ್ನು ಒತ್ತೆ ಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಯುವತಿ ತನ್ನ ಸ್ನೇಹಿತ ಅಜಯ್ ಮತ್ತು ಆತನ ಸ್ನೇಹಿತ ಪವನ್ ವಿರುದ್ಧ ದೂರು ನೀಡಿದ್ದಾರೆ. ನಂತರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೆಲಸದ ನೆಪದಲ್ಲಿ ಸ್ನೇಹಿತ ಯುವತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದಾನೆ. ಸಂತ್ರಸ್ತೆ ಮೂಲತಃ ಬಂಗಾಳದವರು. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ತೆ ತಾನು ಗುರುಗ್ರಾಮ್‌ನ ಮಾಲ್‌ನಲ್ಲಿರುವ ಕ್ಲಬ್‌ನಲ್ಲಿ ಡ್ಯಾನ್ಸರ್ ಆಗಿದ್ದು, ಅಲ್ಲಿ ಅಜಯ್ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ಕೆಲಸ ಕಳೆದುಕೊಂಡಿದ್ದು, ಸ್ನೇಹಿತ ಅಜಯ್ ಕೆಲಸದ ನೆಪದಲ್ಲಿ ಆತನನ್ನು ಹೋಟೆಲ್‌ಗೆ ಕರೆದಿದ್ದಾರೆ. ಪೊಲೀಸರಿಗೆ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ, ಗುರುಗ್ರಾಮ್‌ನ ಕ್ಲಬ್‌ನಲ್ಲಿ ಕೆಲಸ ಕೊಡಿಸುವಂತೆ ಅಜಯ್ ಸಂತ್ರಸ್ತೆಗೆ ಹೇಳಿದ್ದಾನೆ.

ಒತ್ತೆಯಾಳಾಗಿ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ : ಸಂತ್ರಸ್ತೆಯ ಪ್ರಕಾರ, ಅವಳು ಹೋಟೆಲ್‌ಗೆ ತಲುಪಿದಾಗ ಅಜಯ್ ಅವಳನ್ನು ಜವಾಹರ್ ಅಲಿಯಾಸ್ ಪವನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಭೇಟಿಯಾಗುವಂತೆ ಸೂಚಿಸಿದ್ದಾನಂತೆ. ಇದಾದ ನಂತರ ಹೋಟೆಲ್‌ನಲ್ಲಿ ಪವನ್ ಅವರಿಗೆ ಅಮಲು ಪದಾರ್ಥವನ್ನು ನೀಡಿ ಹೋಟೆಲ್ ಕೊಠಡಿಯಲ್ಲಿ ಬೀಗ ಹಾಕಿದ್ದಾನೆ. ಅಲ್ಲಿ ಅವಳನ್ನು ಎರಡು ದಿನಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತಂತೆ.

ಅವಕಾಶ ನೋಡಿ ಹೋಟೆಲ್‌ನಿಂದ ಪರಾರಿ : ಒತ್ತೆಯಾಳಾಗಿಟ್ಟುಕೊಂಡ ಎರಡು ದಿನಗಳ ನಂತರ ಅವಕಾಶ ಸಿಕ್ಕ ನಂತರ ಹೋಟೆಲ್‌ನಿಂದ ಪರಾರಿಯಾಗಿದ್ದೇನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ - 46 ತಲುಪಿದ ಕೂಡಲೇ ಇಬ್ಬರೂ ಮತ್ತೆ ಮಹಿಳೆಯನ್ನು ಹಿಡಿದು ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಆದರೆ, ಹೋಟೆಲ್​​ ಗೇಟ್ ಬಳಿ ಪೊಲೀಸ್ ಕಾರನ್ನು ನೋಡಿದ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತಲೆಮರೆಸಿಕೊಳ್ಳುವ ಮುನ್ನ ಆರೋಪಿಗಳು ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ತಿಳಿದು ಬಂದಿದೆ.

ಇದರ ನಂತರ ಹುಡುಗಿ ಗುರುಗ್ರಾಮ್‌ನ ಸೆಕ್ಟರ್ -50 ರಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯನ್ನು ಹೋಟೆಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪವನ್ ಮತ್ತು ಅಜಯ್ ವಿರುದ್ಧ ಐಪಿಸಿ ಸೆಕ್ಷನ್ 354-ಬಿ, 376, 511, 342, 34, 323 ಅಡಿ ಪ್ರಕರಣ ದಾಖಲಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಮತ್ತೊಬ್ಬನಿಗೆ ಹುಟುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: 'ಬೆತ್ತಲೆ ಜಗತ್ತ'ಲ್ಲಿ ಸಂಸದ ಪ್ರತಾಪ್​ ಸಿಂಹ ಏನು ಬರೆದಿದ್ದಾರೆ ಹೇಳಲಿ: ಯತೀಂದ್ರ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.