ಮೈನ್ಪುರಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಮಹಿಳೆಯೊರ್ವಳು ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಯಿ-ಮಗು ಸುರಕ್ಷಿತವಾಗಿದ್ದಾರೆಂದು ತಿಳಿದು ಬಂದಿದೆ.
ಮೈನ್ಪುರಿ ಜಿಲ್ಲೆಯ ಕಿಶಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಲಾರಿಯಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧರ್ಮೇಂದ್ರನ ಪತ್ನಿಯಾಗಿರುವ ರಾಗಿಣಿ ಮೂರು ತಲೆಯ ಮಗುವಿಗೆ ಜನ್ಮ ನೀಡಿದ್ದಾಳೆ. 9 ತಿಂಗಳ ಗರ್ಭಿಣಿಯಾಗಿದ್ದ ರಾಗಿಣಿಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಮೂರು ತಲೆಯ ಮಗುವಿಗೆ ಜನ್ಮ ನೀಡಿದ್ದಾಳೆ. ಇಬ್ಬರು ಆರೋಗ್ಯವಾಗಿರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಹಿಳೆ ಮೂರು ತಲೆಯ ಮಗುವಿಗೆ ಜನ್ಮ ನೀಡಿರುವ ಮಾಹಿತಿ ಗ್ರಾಮದ ತುಂಬ ಹಬ್ಬುತ್ತಿದ್ದಂತೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಅದನ್ನ ನೋಡಲು ಗುಂಪುಗುಂಪಾಗಿ ಆಗಮಿಸುತ್ತಿದ್ದಾರೆ. ಈ ಮಗು ದೇವರ ಅವತಾರ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿರಿ: 44 ವರ್ಷದ ಮಹಿಳೆ ಮೇಲೆ ಅತ್ಯಾಚಾರ... ಪಂಜಾಬ್ MLA ವಿರುದ್ಧ ದೂರು