ಘಾಜಿಪುರ( ಉತ್ತರಪ್ರದೇಶ): ಸೇನೆಯಲ್ಲಿನ ಹೊಸ ನೇಮಕಾತಿ ನೀತಿ ‘ಅಗ್ನಿಪಥ್ ಯೋಜನೆ’ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ರೈಲುಗಳು ಸ್ಥಗಿತಗೊಂಡಿವೆ. ಇದರಿಂದಾಗಿ ರೈಲು ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಯುವಕರ ಪ್ರತಿಭಟನೆಯಿಂದಾಗಿ ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ರೈಲಿನಲ್ಲಿ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ರೆ, ಅದೇ ರೈಲಿನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ರೈಲಿನಲ್ಲಿ ಮಗುವಿಗೆ ಜನ್ಮ: ಪ್ರತಿಭಟನೆ ಹಿನ್ನೆಲೆ ರೈಲು ಸಂಖ್ಯೆ 13258 ಡೌನ್ ದಾನಪುರ್ - ಆನಂದ್ ವಿಹಾರ್ ರೈಲು ಗಾಜಿಪುರದ ಜಮಾನಿಯಾ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಏಳು ಗಂಟೆಯಿಂದ ನಿಂತಿದೆ. ಸುಮಾರು ಏಳು ಗಂಟೆಗಳ ನಂತರ ಈ ಟ್ರೈನ್ ಗಮ್ಯಸ್ಥಾನಕ್ಕೆ ಹೊರಡುವ ಸಾಧ್ಯತೆಯಿದೆ. ರೈಲಿನ ಸ್ಲೀಪರ್ ಕೋಚ್ ಸಂಖ್ಯೆ ಡಿ-17 ರಲ್ಲಿ ಬಿಹಾರದ ಮಹರ್ನಾ ನಿವಾಸಿ ಪ್ರಮೋದ್ ಲೈಯಾ ಪತ್ನಿ ಗುಡಿಯಾ ದೇವಿ (28) ತುಂಬ ಗರ್ಭಿಣಿಯಾಗಿದ್ದು, ಮೊರಾದಾಬಾದ್‌ನಿಂದ ಭಾಗಲ್ಪುರಕ್ಕೆ ಹೋಗುತ್ತಿದ್ದರು.
ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪ್ರಯಾಣಿಕರ ನೆರವಿನಿಂದ ರೈಲಿನಲ್ಲೇ ಗುಡಿಯಾ ದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ತಿಳಿದ ಎಸ್ಡಿಎಂ ಭರತ್ ಭಾರ್ಗವ್ಗೆ ತಿಳಿದಿದೆ. ಕೂಡಲೇ ಅವರ ಸೂಚನೆ ಮೇರೆಗೆ ತಾಯಿ ಮತ್ತು ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಓದಿ: ಅಗ್ನಿಪಥ ವಿರುದ್ಧ ಬಿಹಾರ್ನಲ್ಲಿ ಬಸ್ - ಲಾರಿಗೆ ಬೆಂಕಿ:ತಮಿಳುನಾಡು -ಪಂಜಾಬ್ದಲ್ಲಿ ತೀವ್ರಗೊಂಡ ಪ್ರತಿಭಟನೆ!
ರೈಲಿನಲ್ಲಿ ವ್ಯಕ್ತಿ ಸಾವು: ಅದೇ ರೈಲಿನ ಸ್ಲೀಪರ್ ಕೋಚ್ ಸಂಖ್ಯೆ ಡಿ-11 ರಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಮೋಹನ್‌ಚಕ್ ಗ್ರಾಮದ ನಿವಾಸಿ ರಾಮೇಶ್ವರ್ಗೆ (55) ಹೆಚ್ಚು ಬಿಸಿಲಿದ್ದ ಕಾರಣ ಆರೋಗ್ಯ ಹದಗೆಟ್ಟಿದೆ. ರಾಮೇಶ್ವರ್ ಆರೋಗ್ಯ ಹದಗೆಟ್ಟಿರುವ ಮಾಹಿತಿ ಮೇರೆಗೆ ಎಸ್ಡಿಎಂ ಭರತ್ ಭಾರ್ಗವ್ ಅವರು ರೋಗಿಯನ್ನು ಕರೆದ್ಯೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದರು. ಬಳಿಕ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಪ್ರಯಾಣಿಕ ರಾಮೇಶ್ವರ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಡಾ.ರವಿ ರಂಜನ್ ಘೋಷಿಸಿದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಗೆ ತೆರಳುತ್ತಿದ್ದ ರಾಮಶ್ವೇರ್ ಸಾವು: ಮೃತ ರಾಮೇಶ್ವರ್ ಸಹಚರ ಬಿಹಾರದ ಸಾದಿಸೋಪುರ್ ನಿವಾಸಿ ರಾಕೇಶ್ ಮಾತನಾಡಿ, ಮೃತರು ದೆಹಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದರು. ದೆಹಲಿಯ ಸಫ್ದರ್ಗಂಜ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಹೃದಯದಲ್ಲಿ ಸಮಸ್ಯೆ ಇತ್ತು. ಚಿಕಿತ್ಸೆಗಾಗಿ ಸಡಿಸೋಪುರಕ್ಕೆ ಹೋಗುತ್ತಿದ್ದರು. ಆದರೆ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದರು. ಮತ್ತೊಂದೆಡೆ ರೈಲ್ ಯಾತ್ರಿ ಕಲ್ಯಾಣ ಸಮಿತಿ, ಸ್ವಯಂಸೇವಾ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ನೀರು, ಬಿಸ್ಕತ್ ಸೇರಿದಂತೆ ಉಚಿತ ಉಪಾಹಾರದ ವ್ಯವಸ್ಥೆ ಮಾಡಿತ್ತು.
ಚಂದೌಲಿ ಡಿಪೋ ಬಸ್ಗೆ ಬೆಂಕಿ: ಅಗ್ನಿಪಥ್ ಯೋಜನೆ ವಿರೋಧಿಸುತ್ತಿರುವ ಪ್ರತಿಭಟನಾಕಾರರು ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಬಳಿಕ ಧ್ವಂಸಗೊಳಿಸಿ, ಬೆಂಕಿ ಹಚ್ಚಿದರು. ಈ ಬಸ್ ಚಂದೌಲಿ ಡಿಪೋಗೆ ಸೇರಿದ್ದಾಗಿದ್ದು, ಲಖನೌದಿಂದ ವಾರಾಣಸಿಗೆ ಹೋಗುತ್ತಿತ್ತು ಎಂದು ತಿಳಿದು ಬಂದಿತು. ಬದ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೂರಮುಕುಂದ ಗ್ರಾಮದಲ್ಲಿ ಪ್ರತಿಭಟನಾಕಾರರು ಇನ್ಸ್‌ಪೆಕ್ಟರ್ ವಾಹನವನ್ನು ಧ್ವಂಸಗೊಳಿಸಿದರು. ಇದಾದ ನಂತರ ಇನ್ಸ್‌ಪೆಕ್ಟರ್ ಮತ್ತು ಅವರ ತಂಡ ಒಡೆದ ವಾಹನದೊಂದಿಗೆ ತೆರಳಿದರು.