ಅಮೃತಸರ: ಫಜಿಲ್ಕಾದಿಂದ ಬಂದಿರುವ 25 ವರ್ಷದ ಯುವತಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆ ಮಂಗಳವಾರ ಫಜಿಲ್ಕಾದಿಂದ ಪಂಜಾಬ್ಗೆ ಏಕಾಂಗಿಯಾಗಿ ಬಂದಿದ್ದು, ಗುರುದ್ವಾರದಲ್ಲಿ ಉಳಿದದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಅಪರಿಚಿತನೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತಾ, ಆಕೆಯನ್ನು ನಂಬಿಸಿ ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಗೆ ಇನ್ನೂ ಐದು ಪುರುಷರು ಬಂದಿದ್ದು, ರಾತ್ರಿಯಿಡೀ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಅವರು ಆಕೆಯನ್ನು ನಗರದ ಹೊರವಲಯಕ್ಕೆ ಕರೆದೊಯ್ದು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಆಕೆ ಬುಧವಾರ ಸಂಜೆ ಪೊಲೀಸರಿಗೆ ಈ ವಿಷಯವಾಗಿ ದೂರು ನೀಡಿದ್ದಾಳೆ. ಮುಖ್ಯ ಆರೋಪಿಗಳಾದ ಯುಗರಾಜ್ ಸಿಂಗ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.