ಬಾಪಟ್ಲ(ಆಂಧ್ರಪ್ರದೇಶ): ಆಂಧ್ರ ಪ್ರದೇಶದಲ್ಲಿ ಆತಂಕಕಾರಿ ದುಷ್ಕೃತ್ಯ ನಡೆದಿದೆ. ರೈಲ್ವೆ ನಿಲ್ದಾಣದಲ್ಲೇ ವಲಸೆ ಕಾರ್ಮಿಕ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬಾಪಟ್ಲ ಜಿಲ್ಲೆಯಲ್ಲಿ ರೆಪಲ್ಲೆ ಎಂಬಲ್ಲಿ ನಡೆದಿದೆ.
ಪ್ರಕಾಶಂ ಜಿಲ್ಲೆಯ ಮೂಲದ ಪತಿ ಮತ್ತು ಪತ್ನಿ ಶನಿವಾರ ರಾತ್ರಿ ತಾವು ತೆರಳಬೇಕಾಗಿದ್ದ ಊರಿಗೆ ಬಸ್ ಸಿಗದ ಕಾರಣ ರೈಲ್ವೆ ನಿಲ್ದಾಣಕ್ಕೆ ಬಂದು ಮಲಗಿದ್ದರು. ಈ ವೇಳೆ ಮೂವರು ಕಾಮುಕರು ಮಲಗಿದ್ದ ಮಹಿಳೆಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾರೆ. ಅಂತೆಯೇ, ಪತಿ ಎಚ್ಚರಗೊಂಡು ಪ್ರಶ್ನೆ ಮಾಡಿದ್ದಾನೆ. ಕಾಮುಕರು ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ಧಾರೆ.
ಇತ್ತ, ಮಹಿಳೆ ಮೇಲೆ ಮೂವರು ಸೇರಿ ಅತ್ಯಾಚಾರ ಎಸಗಿ ಪರಾರಿಯಾಗಿದ್ಧಾರೆ. ಅಲ್ಲದೇ, ಪತಿಯ ಬಳಿಯಿದ್ದ ಹಣವನ್ನೂ ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ಪೊಲೀಸರು ರೈಲ್ವೆ ನಿಲ್ದಾಣಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸಂತ್ರಸ್ತ ಮಹಿಳೆ ಮತ್ತು ಪತಿಯಿಂದ ಹೇಳಿಕೆ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 3 ತಿಂಗಳ ಪುಟ್ಟ ಕಂದ ಸೇರಿ ಮೂವರು ಮಕ್ಕಳನ್ನು ಕೊಂದು ಬಾವಿಗೆಸೆದ ಪಾಪಿ ಅಪ್ಪ