ETV Bharat / bharat

ಹಿಂದೂ ಧರ್ಮೀಯನೊಂದಿಗೆ ಹೋಗುತ್ತಿದ್ದಾಳೆ ಎಂದು ಹಿಜಾಬ್ ತೆಗೆಸಿದ ದುಷ್ಕರ್ಮಿಗಳು!  ವಿಡಿಯೋ ವೈರಲ್ - ಹಿಜಾಬ್ ತೆಗೆಯಲು ಮಹಿಳೆಗೆ ಬಲವಂತ

ಯುವಕ ಹಿಂದೂ ಸಮುದಾಯಕ್ಕೆ ಸೇರಿದವನು, ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಳೆ ಎಂದು ಭಾವಿಸಿದ ಕೆಲವರು ಸ್ಕೂಟರ್ ಅಡ್ಡಗಟ್ಟಿ ಯುವತಿಯ ಹಿಜಾಬ್ ತೆಗೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ- ಪೊಲೀಸ್ ಅಧಿಕಾರಿ ಆರ್.ಎಸ್.ವರ್ಮಾ

woman  forced to take off Hijab in Madhya Pradesh
ಯುವತಿಗೆ ಹಿಜಾಬ್ ತೆಗೆಯಲು ಒತ್ತಾಯ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಚರ್ಚೆ
author img

By

Published : Oct 17, 2021, 9:38 AM IST

ಭೋಪಾಲ್(ಮಧ್ಯಪ್ರದೇಶ): ಸ್ಕೂಟರ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಯುವತಿಗೆ ಕೆಲವು ದುಷ್ಕರ್ಮಿಗಳು ಬಲವಂತದಿಂದ ಹಿಜಾಬ್​ ತೆಗೆಸಿದ ಘಟನೆ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ.

ಭೋಪಾಲ್​ನ ಇಸ್ಲಾಂನಗರದಲ್ಲಿ ಯುವತಿ ಹಿಜಾಬ್ ಧರಿಸಿ ಓರ್ವ ಯುವಕನೊಂದಿಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದಳು. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆ ಹಿಂದೂ ಧರ್ಮೀಯ ಯುವಕನೊಂದಿಗೆ ತೆರಳುತ್ತಿದ್ದಾಳೆ ಎಂದು ಆಕೆ ಧರಿಸಿದ್ದ ಹಿಜಾಬ್​ ತೆಗೆಯುವಂತೆ ಬಲವಂತ ಮಾಡಿದರು.

  • A woman was riding scooter with a man when some people stopped them on a narrow street in Islam Nagar, Bhopal and asked her to remove the hijab that she was wearing. Its is suspected that the people believed the man was Hindu and the girl Muslim. #SickMentality pic.twitter.com/CqPWOMqEn8

    — Karan Pal (@karanktbd) October 16, 2021 " class="align-text-top noRightClick twitterSection" data=" ">

ವೈರಲ್ ಆದ ದೃಶ್ಯದಲ್ಲಿ, ಯುವತಿ ಹಿಜಾಬ್ ತೆಗೆಯಲು ಅಸಮಾಧಾನ ವ್ಯಕ್ತಪಡಿಸಿ, ಅಳುತ್ತಿರುವುದು ದಾಖಲಾಗಿದೆ. ಈ ಸಂದರ್ಭದಲ್ಲಿ ಓರ್ವ ದುಷ್ಕರ್ಮಿ, 'ಈ ಮಹಿಳೆ ನಮ್ಮ ಸಮುದಾಯಕ್ಕೆ ಅವಮಾನ' ಎಂದಿರುವುದು ಕೂಡಾ ಕೇಳಿಸುತ್ತದೆ.

ಯುವಕ ಹಿಂದೂ ಸಮುದಾಯಕ್ಕೆ ಸೇರಿದವನು, ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಳೆ ಎಂದು ಭಾವಿಸಿದ ಕೆಲವರು ಸ್ಕೂಟರ್ ಅಡ್ಡಗಟ್ಟಿ, ಯುವತಿಯ ಹಿಜಾಬ್ ತೆಗೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಆರ್.ಎಸ್.ವರ್ಮಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: 'ವಿಶೇಷ ಸ್ಥಾನಮಾನ ರದ್ದಾಗುವ ಮುನ್ನ ಕೇಂದ್ರದ ಹಣ ಜಮ್ಮು ಕಾಶ್ಮೀರ ನಾಯಕರ ಜೇಬು ಸೇರುತ್ತಿತ್ತು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.