ETV Bharat / bharat

ಡೇಟಿಂಗ್ ಆ್ಯಪ್‌ನಲ್ಲಿ ನಗ್ನವಾಗುವಂತೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ - Information and Technology Act

ವೆಬ್ ಸೀರೀಸ್‌ನ ಸಹಾಯಕ ನಿರ್ದೇಶಕರೊಬ್ಬರನ್ನ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡಿರುವ ಘಟನೆ ಮುಂಬೈನ ಮಲಾಡ್​ನಲ್ಲಿ ನಡೆದಿದೆ.

ಸುಲಿಗೆ
ಸುಲಿಗೆ
author img

By ETV Bharat Karnataka Team

Published : Dec 22, 2023, 8:07 AM IST

ಮುಂಬೈ (ಮಹಾರಾಷ್ಟ್ರ) : ವೆಬ್ ಸೀರೀಸ್‌ನ ಸಹಾಯಕ ನಿರ್ದೇಶಕರೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡುವುದಾಗಿ ಬೆದರಿಸಿ, ಸುಲಿಗೆ ಮಾಡಿರುವ ಪ್ರಕರಣ ಮುಂಬೈನ ಮಲಾಡ್‌ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಡಿಸೆಂಬರ್ 11 ರಂದು ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುತೂಹಲಕಾರಿಯಾಗಿ ವೆಬ್ ಸರಣಿಯ ಸಹಾಯಕ ನಿರ್ದೇಶಕರು (45) ಡೇಟಿಂಗ್ ಅಪ್ಲಿಕೇಶನ್ ಮೂಲಕ ಮಹಿಳೆಯೊಬ್ಬರನ್ನು ಭೇಟಿಯಾಗಿದ್ದಾರೆ. ತದನಂತರ ಇವರನ್ನು ಬ್ಲ್ಯಾಕ್‌ಮೇಲ್ ಮಾಡಿ ಮತ್ತು ವಿಡಿಯೊ ಚಾಟ್ ಸಮಯದಲ್ಲಿ ರೆಕಾರ್ಡ್ ಮಾಡಿದ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಸುಲಿಗೆಗೆ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ.

ಸಹಾಯಕ ನಿರ್ದೇಶಕರು ನೀಡಿದ ದೂರಿನ ಆಧಾರದ ಮೇಲೆ ಮಾಳವಾಣಿ ಪೊಲೀಸರು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ನಾಲ್ವರ ವಿರುದ್ಧ ಸುಲಿಗೆ, ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೈಬರ್ ಪೊಲೀಸರ ಸಹಾಯದಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಮಾಲ್ವಾನಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಚಿಮಾಜಿ ಅಧವ್ ತಿಳಿಸಿದ್ದಾರೆ.

ಸೈಬರ್ ಸೆಲ್‌ನಿಂದ ತನಿಖೆ : ದೂರುದಾರ ಮಲಾಡ್‌ನ ಮಾರ್ವ್ ರೋಡ್ ಪ್ರದೇಶದಲ್ಲಿ ವೆಬ್ ಸರಣಿಯ ಸಹಾಯಕ ನಿರ್ದೇಶಕಿಯಾಗಿರುವ ತನ್ನ ಸಹೋದರಿಯೊಂದಿಗೆ ವಾಸವಾಗಿದ್ದಾರೆ ಮತ್ತು ಅವರ ಸಹೋದರಿ ಕಥೆಗಾರ್ತಿ ಎಂಬುದು ತಿಳಿದು ಬಂದಿದೆ. ಇದುವರೆಗೆ ಹಲವು ವೆಬ್ ಸಿರೀಸ್​ಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಳೆದ ವಾರ ಸಂತ್ರಸ್ತರು ಮೊಬೈಲ್​ನಲ್ಲಿ ಡೇಟಿಂಗ್ ಆ್ಯಪ್​​ ಡೌನ್ಲೋಡ್​ ಮಾಡಿಕೊಂಡಿದ್ದರು.

ಈ ಆ್ಯಪ್ ಮೂಲಕ ಅವರು ಮಹಿಳೆಯೊಬ್ಬರನ್ನು ಭೇಟಿಯಾಗಿದ್ದಾರೆ. ಈ ಮಹಿಳೆಯ ಪರಿಚಯವಾದ ನಂತರ ಇಬ್ಬರೂ ಚಾಟ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ. ವಿಡಿಯೋ ಕರೆ ಸಮಯದಲ್ಲಿ ಮಹಿಳೆ ತಮ್ಮ ಎಲ್ಲಾ ಬಟ್ಟೆಗಳನ್ನು ತೆಗೆದುಹಾಕಲು ಇವರಿಗೆ ಹೇಳಿದ್ದಾರೆ. ಹೀಗಾಗಿ ಸಹಾಯಕ ನಿರ್ದೇಶಕರು ತಮ್ಮ ಬಟ್ಟೆಗಳನ್ನೆಲ್ಲ ತೆಗೆದಿದ್ದಾರೆ. ಆ ಸಮಯದಲ್ಲಿ ಆಕೆ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಾರೆ.

ವಿಡಿಯೋ ವೈರಲ್ ಮಾಡುವ ಬೆದರಿಕೆ : ಕೆಲ ಹೊತ್ತು ವಿಡಿಯೋ ಕಾಲ್​ನಲ್ಲಿ ಹರಟೆ ಹೊಡೆದು ಮರುದಿನ ಇಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಮರುದಿನ ನಿರ್ದೇಶಕರಿಗೆ ಅಪರಿಚಿತ ಮೊಬೈಲ್ ಫೋನ್‌ನಿಂದ ಸಂದೇಶ ಬಂದಿದೆ. ಅದರಲ್ಲಿ ಆತ ಮಹಿಳೆಯೊಂದಿಗಿನ ಅಸಭ್ಯ ವಿಡಿಯೋಗಳನ್ನು ಕಳುಹಿಸಿದ್ದ. ಆ ವಿಡಿಯೋ ಡಿಲೀಟ್ ಮಾಡಲು 75,000 ರೂ. ಗಳನ್ನು ಬ್ಯಾಂಕ್ ಖಾತೆಗೆ ನೀಡಬೇಕು ಎಂದು ಅಕೌಂಟ್ ನಂಬರ್ ನೀಡಿದ್ದರು. ಇಲ್ಲದಿದ್ದರೆ ಅವರ ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಕೊನೆಗೆ ಪೊಲೀಸರಿಗೆ ದೂರು : ಮಾನಕ್ಕೆ ಹೆದರಿ ಸಂತ್ರಸ್ತ ನಿರ್ದೇಶಕರು ಅಪರಿಚಿತರೊಬ್ಬರ ಬ್ಯಾಂಕ್ ಖಾತೆಗೆ 35 ಸಾವಿರ ರೂ. ವರ್ಗಾಯಿಸಿದ್ದಾರೆ. ಆದರೆ, ಇಷ್ಟು ಮೊತ್ತ ಪಾವತಿಸಿದ ನಂತರವೂ ಬೇರೆ ಬೇರೆ ಮೊಬೈಲ್ ಫೋನ್​ಗಳಿಂದ ಬ್ಲಾಕ್ ಮೇಲ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಆದ್ದರಿಂದ ಘಟನೆಯ ಕುರಿತು ಮಾಳವಾಣಿ ಪೊಲೀಸರಿಗೆ ತಿಳಿಸಿ 4 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ನಾಲ್ವರ ವಿರುದ್ಧ ಸುಲಿಗೆ ಬೆದರಿಕೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ದುಬೈನಿಂದ ಚಿನ್ನ ಕೊಡಿಸುವುದಾಗಿ ಮೋಸ: ಪಾನ್ ಬ್ರೋಕರ್​​ನಿಂದ 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.