ಒಡಿಶಾ: ಇಲ್ಲಿನ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಬರುತ್ತಿದೆ. ಆದರೆ ಈ ಘಟನೆ ಇಲ್ಲಿನ ವ್ಯವಸ್ಥೆಯನ್ನು ಬೆತ್ತಲು ಮಾಡಿದೆ.
ಆಸ್ಪತ್ರೆಗೆ ಹೋಗುವ ವೇಳೆ ಮಾರ್ಗದಲ್ಲಿನ ನದಿ ದಾಟಿ ಅಣೆಕಟ್ಟೆಯ ಬಳಿ ಗರ್ಭಿಣಿ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆಗೆ ಹೆರಿಗೆ ಮಾಡಿಸಲು ಅಥವಾ ಆಕೆಯನ್ನು ಹೆರಿಗೆಗೂ ಮುನ್ನ ಆಸ್ಪತ್ರೆಗೆ ಸಾಗಿಸಲು ಯಾವುದೇ ಆ್ಯಂಬುಲೆನ್ಸ್‌ಗಳು ಬರಲಿಲ್ಲ. ದುರಂತ ಎಂದರೆ ಹೆರಿಗೆ ಆದ ನಂತರ ಆಕೆಯನ್ನು 108 ಆ್ಯಂಬುಲೆನ್ಸ್ ಆಸ್ಪತ್ರೆಗೆ ಕರೆದೊಯ್ದಿದೆ.
ಈ ಘಟನೆ ನಬರಂಗ್‌ಪುರ ಜಿಲ್ಲೆಯ ತೆಂಟುಲಿಖುಂತಿ ಬ್ಲಾಕ್‌ನ ಪೊಡಘ್ರದ ಬಳಿ ನಡೆದಿದೆ. ತಾಯಿ ಮತ್ತು ಮಗುವನ್ನು ತೆಂಟುಲಿಖುಂತಿ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.