ETV Bharat / bharat

ಚರಂಡಿ ವಿಷಯವಾಗಿ ಜಗಳ: ಸಿನಿಮೀಯ ಶೈಲಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ.. ವಿಡಿಯೋ - ಮಹಿಳೆ ಮೇಲೆ ಕತ್ತಿಯಿಂದ ದಾಳಿ

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಚರಂಡಿ ವಿಷಯವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಸಿನಿಮೀಯ ಶೈಲಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ ಮಾಡಿದ್ದಾರೆ.

woman-cut-with-sword-over-drain-dispute-in-vaishali
ಚರಂಡಿ ವಿಷಯವಾಗಿ ಜಗಳ: ಸಿನಿಮೀಯ ಶೈಲಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ.. ವಿಡಿಯೋ
author img

By

Published : Oct 7, 2022, 8:29 PM IST

ವೈಶಾಲಿ (ಬಿಹಾರ): ವ್ಯಕ್ತಿಯೊಬ್ಬ ಹಾಡಹಗಲೇ ಕತ್ತಿಯಿಂದ ಮಹಿಳೆಯ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಇದರ ದೃಶ್ಯಗಳು ಮೊಬೈಲ್​ನಲ್ಲಿ​ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತೆ ಇದೆ.

ಇಲ್ಲಿನ ಜಂಡಾಹ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಿಯುದ್ದೀನ್‌ಪುರ ಗರಾಹಿ ಪಂಚಾಯತ್‌ನ ಮಥುರಾಪುರ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಮಹಿಳೆ ಮೇಲೆ ಕತ್ತಿಯಿಂದ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಅದೃಷ್ಟವಶಾತ್ ಬದುಳಿದ ಮಹಿಳೆ: ಮಥುರಾಪುರ ಗ್ರಾಮದಲ್ಲಿ ಚರಂಡಿ ವಿಷಯವಾಗಿ ಗುರುವಾರ ಸಂಜೆ ಸಂಬಂಧಿಕರಾದ ಮಮತಾ ದೇವಿ ಹಾಗೂ ದೀಪಕ್ ಮಹ್ತೋ ಕುಟುಂಬದ ನಡುವೆ ಜಗಳ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿದೆ. ಈ ವೇಳೆ ದೀಪಕ್ ಮಹ್ತೋ ಮನೆಯೊಳಗೆ ಹೋಗಿ ಕತ್ತಿ ತಂದು ಮಮತಾದೇವಿ ಮೇಲೆ ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಎರಡನೇ ಮದುವೆಗೆ ನಿರಾಕರಣೆ: ಯುವತಿಗೆ ಬೆಂಕಿ ಹಚ್ಚಿದ ಪ್ರಿಯಕರ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

ಓಡಿ ಬಂದು ನೇರವಾಗಿ ಕತ್ತಿಯಿಂದ ಮಹಿಳೆಯ ಕುತ್ತಿಗೆಗೆ ಹೊಡೆದಿದ್ದು, ನೋಡನೋಡುತ್ತಿದ್ದಂತೆ ಆಕೆ ಕೆಳಗಡೆ ಬಿದ್ದಿದ್ದಾರೆ. ಈ ಇಡೀ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದಾರೆ. ಆರೋಪಿಯು ಮಹಿಳೆಯ ಕತ್ತಿಗೆಗೆ ಕತ್ತಿಯಿಂದ ದಾಳಿ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

ಚರಂಡಿ ವಿಷಯವಾಗಿ ಜಗಳ: ಸಿನಿಮೀಯ ಶೈಲಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ.. ವಿಡಿಯೋ

ಮಗನನ್ನು ಉಳಿಸುವಂತೆ ಮನವಿ: ಮಮತಾ ದೇವಿ ಮೇಲೆ ಕತ್ತಿಯಿಂದ ದಾಳಿ ಮಾಡಿ ದೀಪಕ್ ಮಹ್ತೋ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಕತ್ತಿಯ ದಾಳಿಯಿಂದಾಗಿ ಮಹಿಳೆ ನೆಲಕ್ಕೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಕುತ್ತಿಗೆಗೆ ಪೆಟ್ಟು ಬಿದ್ದರೂ ನನ್ನ ಮಗನನ್ನು ಉಳಿಸುವಂತೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಸ್ಥಳೀಯರು ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇತ್ತ, ಘಟನೆ ಕುರಿತು ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳು ಮಹಿಳೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಮತಾ ದೇವಿಯ ಪತಿ ಪಂಜಾಬ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಎಸ್‌ಎಚ್‌ಒ ವಿಶ್ವನಾಥ ರಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸರಿಂದಲೇ ಬುಡಕಟ್ಟು ಮಹಿಳೆ ಮೇಲೆ ಗ್ಯಾಂಗ್​ ರೇಪ್​:ಸಂತ್ರಸ್ತೆಯ ಜೀವನ್ಮರಣ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.