ETV Bharat / bharat

ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಶ್ನಿಸಿದ ಮಹಿಳಾ ಪೊಲೀಸ್​ ಮೇಲೆ ಲಾಯರ್​ ಮಗನಿಂದ ಹಲ್ಲೆ

ಗಸ್ತಿನಲ್ಲಿದ್ದ ಮಹಿಳಾ ಕಾನ್​​ಸ್ಟೇಬಲ್ ಮೇಲೆ ಯುವಕ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಆರೋಪಿ ಲಾಯರ್​ಮಗ ಎಂದು ತಿಳಿದುಬಂದಿದೆ.

woman-constable-attacked-for-objecting-to-lewd-remarks
ಪ್ರಶ್ನಿಸಿದ ಮಹಿಳಾ ಪೊಲೀಸ್​ ಮೇಲೆ ಲಾಯರ್​ ಮಗನಿಂದ ಹಲ್ಲೆ
author img

By

Published : Aug 30, 2021, 1:38 PM IST

ಲಕ್ನೋ: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಆಕ್ಷೇಪಿಸಿದ ಮಹಿಳಾ ಕಾನ್​ಸ್ಟೇಬಲ್ ಮೇಲೆ ಯುವಕನೊಬ್ಬ ರಾಡ್‌ನಿಂದ ಹೊಡೆದಿದ್ದಾನೆ. ಭಾನುವಾರ ಸಂಜೆ ಅಲಿಗಂಜ್ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಸ್ಥಳೀಯ ನಿವಾಸಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಆರೋಪಿ ಪ್ರಭಾತ್ ಕುಮಾರ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಹುಡುಗಿಯರು/ಮಹಿಳೆಯರ ವಿರುದ್ಧದ ಅಪರಾಧ ಘಟನೆಗಳನ್ನು ತಡೆಗಟ್ಟಲು ವಿಶೇಷ ವಿಭಾಗವನ್ನು ರಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಮಹಿಳಾ ಕಾನ್​​ಸ್ಟೇಬಲ್ ಮೇಲೆ ಈ ಆರೋಪಿ ಹಲ್ಲೆ ನಡೆಸಿದ್ದಾನೆ. ಈತ ವಕೀಲನ ಮಗ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಮಹಿಳಾ ಕಾನ್​ಸ್ಟೇಬಲ್ ಅದೇ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಈ ಸಂಬಂಧ ಉತ್ತರ ವಲಯದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಪ್ರಾಚಿ ಸಿಂಗ್ ಪ್ರತಿಕ್ರಿಯಿಸಿ, ಪೊಲೀಸ್ ಸಮವಸ್ತ್ರ ಧರಿಸಿದ ಮಹಿಳಾ ಕಾನ್​​ಸ್ಟೇಬಲ್ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದುಷ್ಕರ್ಮಿ ಆಕೆಯನ್ನು ನೋಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಸಿಬ್ಬಂದಿ ಆತನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆ ವೇಳೆ ಆತ ಸಿಟ್ಟಿಗೆದ್ದು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.