ಕೋಟಾ (ರಾಜಸ್ಥಾನ) : ಮಹಿಳೆಯೊಬ್ಬರು ತನ್ನ ಐವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪುಟ್ಟ ಕಂದಮ್ಮ ಸೇರಿ ಆರು ಮಂದಿಯೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಾಯದೊಂದಿಗೆ ಇಂದು ಬೆಳಗ್ಗೆ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್ನಲ್ಲಿ ಭದ್ರತಾ ಪಡೆ ಫೈರಿಂಗ್: 13 ನಾಗರಿಕರು, ಓರ್ವ ಯೋಧ ಸಾವು
ಮೃತರನ್ನು ಕೋಟಾದ ರಾಮಗಂಜಮಂಡಿ ನಿವಾಸಿಯಾದ ಬಾದಮ್ ದೇವಿ (40) ಹಾಗೂ ಅವರ ಮಕ್ಕಳಾದ ಸಾವಿತ್ರಿ (14), ಅಂಜಲಿ (8), ಕಾಜಲ್ (6), ಗುಂಜನ್ (4) ಹಾಗೂ ಅರ್ಚನಾ (1) ಎಂದು ಗುರುತಿಸಲಾಗಿದೆ.
ಬಾದಮ್ ದೇವಿ ಅವರು ತನ್ನ ಪತಿ ಶಿವಲಾಲ್ನೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಟಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.