ETV Bharat / bharat

ಆಸ್ತಿ ವಿವಾದ: ಮಹಿಳೆಗೆ ಕಬ್ಬಿಣದ ರಾಡ್​ನಿಂದ ಹೊಡೆದು ಭೀಕರ ಹತ್ಯೆ - ವರ್ಕಳದ ಆಯೂರಿನಲ್ಲಿ ಮಹಿಳೆ ಕೊಲೆ

ಕೇರಳದ ವರ್ಕಳದಲ್ಲಿ ಮಹಿಳೆಯೊಬ್ಬರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ವರ್ಕಳದ ಆಯೂರಿನಲ್ಲಿ ಮಹಿಳೆ ಕೊಲೆ
ವರ್ಕಳದ ಆಯೂರಿನಲ್ಲಿ ಮಹಿಳೆ ಕೊಲೆ
author img

By

Published : Jul 16, 2023, 8:33 PM IST

ತಿರುವನಂತಪುರಂ (ಕೇರಳ) : ಆಸ್ತಿ ವಿವಾದ ಹಿನ್ನೆಲೆ ಮಹಿಳೆಯೊಬ್ಬರ ಮೇಲೆ ಸಂಬಂಧಿಕರೇ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವರ್ಕಳದ ಆಯೂರಿನಲ್ಲಿ ಘಟನೆ ನಡೆದಿದ್ದು, ಮೃತರನ್ನು ಲೀನಾಮಣಿ (56) ಎಂದು ಗುರುತಿಸಲಾಗಿದೆ.

ಲೀನಾಮಣಿ ಮತ್ತು ಅವರ ಪತಿಯ ಸಂಬಂಧಿಕರ ನಡುವೆ ಆಸ್ತಿ ವಿವಾದವಿತ್ತು. ಈ ಕಾರಣಕ್ಕಾಗಿ ಸಂಬಂಧಿಕ ಆರೋಪಿಗಳಾದ ಶಾಜಿ, ಅಹದ್ ಮತ್ತು ಮುಹ್ಸಿನ್ ಅವರು ಲೀನಾಮಣಿ ಮೇಲೆ ಇಂದು ಹಲ್ಲೆ ನಡೆಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಲೀನಾಮಣಿ ಅವರನ್ನು ವರ್ಕಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ವರ್ಕಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ವಿಶೇಷ ತನಿಖಾ ತಂಡ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ.

ಮಹಿಳೆಗೆ ಚಾಕು ಇರಿದು ಕೊಲೆ : ಜುಲೈ 11 ರಂದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ. ಕೆ. ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮಹಿಳೆಗೆ ಹರಿತ ಆಯುಧಗಳಿಂದ ಇರಿದು ಹತ್ಯೆ ಮಾಡಿದ್ದರು. ಜೊತೆಗಿದ್ದ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು. ವಿಜಯಲಕ್ಷ್ಮೀ ಮಠ ಎಂಬುವರು ಮೃತಪಟ್ಟಿದ್ದರು. ಇವರನ್ನು ರಕ್ಷಿಸಲು ಹೋದ ನಾಲ್ವರು ಮಕ್ಕಳಾದ ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಮೇಲೂ ಹಂತಕರು ಹಲ್ಲೆ ಮಾಡಿ ಗಾಯಗೊಂಡಿದ್ದರು. ಘಟನೆಗೆ ಆಸ್ತಿ ವಿವಾದವೇ ಕಾರಣ ಎಂದು ಹೇಳಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣನನ್ನು ಹತ್ಯೆ ಮಾಡಿ ಸಹೋದರರು : ಮಡಿಕೇರಿಯ ಚೆಂಬು ಗ್ರಾಮದ ಬಳಿ ರಸ್ತೆಯಲ್ಲೇ ತಮ್ಮಂದಿರೇ ಸೇರಿ ಅಣ್ಣನನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಜುಲೈ 14 ರಂದು ಜರುಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಮ್ಮಂದಿರೇ ಉಸ್ಮಾನ್ (63) ಎಂಬುವವರನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಘಟನಾ ಸ್ಥಳಕ್ಕೆ ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಹಾಗೂ ಸಂಪಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ : ಆಸ್ತಿ ವಿವಾದದಿಂದ ಕಂಗೆಟ್ಟು ಗಂಡ, ಹೆಂಡತಿ ಹಾಗೂ ಮಗಳು ಒಟ್ಟಿಗೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮಹಾದೇವಸ್ವಾಮಿ (42), ಪತ್ನಿ ಸವಿತಾ (33) ಹಾಗೂ 15 ವರ್ಷದ ಮಗಳು ಮೃತರು. ಜೂನ್​ 23 ರ ಬೆಳಗ್ಗೆ ದುರ್ಘಟನೆ ನಡೆದಿತ್ತು. ಡೆತ್​ನೋಟ್ ಸಹ ಬರೆದಿಟ್ಟಿದ್ದು, ಮೃತನ ಅಕ್ಕ - ತಂಗಿಯರ ಹೆಸರು ಉಲ್ಲೇಖಿಸಿ ಇವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕೋರಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್​ಪಿ ಪದ್ಮಿನಿ ಸಾಹು ಭೇಟಿ ನೀಡಿ, ಪರಿಶೀಲಿಸಿದ್ದರು. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಆಸ್ತಿ ವಿವಾದ: ಕೊಡಗಿನಲ್ಲಿ ಸಹೋದರರಿಂದಲೇ ಅಣ್ಣನ ಭೀಕರ‌ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.