ಶಿಮ್ಲಾ: ಮದುವೆಯಾದ 24 ವರ್ಷಗಳ ನಂತರ ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆವೋರ್ವಳು ಆರೋಪಿಸಿದ್ದಾಳೆ.
ಜನವರಿ 12ರಂದು ಪತಿ, ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಪ್ರಕರಣದ ಬಗ್ಗೆ ಮಾತನಾಡಿದ ಶಿಮ್ಲಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ "ಮಹಿಳೆಯ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ" ಎಂದಿದ್ದಾರೆ.
ಇದನ್ನು ಓದಿ: ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ: ಲಕ್ಷ ಜನರು ಸೇರುವ ಸಾಧ್ಯತೆ
ದೇಶದಲ್ಲಿ ಆಗಸ್ಟ್ 1, 2019ರಂದು ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು ಕಾನೂನು ಜಾರಿಗೆ ಬಂದಿದೆ. ಇದರಿಂದಾಗಿ ತಲಾಖ್ -ಇ- ಬಿಡ್ಡತ್ ಅಥವಾ ಯಾವುದೇ ರೀತಿಯ ತಲಾಖ್ ಅನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿದೆ. ತನ್ನ ಹೆಂಡತಿಗೆ ತಲಾಖ್ ಎಂದು ಉಚ್ಚರಿಸುವ ಯಾವುದೇ ಮುಸ್ಲಿಂ ಪತಿ ಮೂರು ವರ್ಷಗಳ ಅವಧಿಗೆ ಜೈಲು ಶಿಕ್ಷೆ ಅನುಭವಿಸಬೇಕೆಂದು ಕಾನೂನು ಜಾರಿಗೆ ತರಲಾಯಿತು. ಆದರೂ ತಲಾಖ್ ಪ್ರಕರಣಗಳು ಕಂಡುಬರುತ್ತಿವೆ.