ETV Bharat / bharat

ಸಿಗದ ಆ್ಯಂಬುಲೆನ್ಸ್: ಬಂಡಿ ಮೇಲೆ ಮಹಿಳೆ ಶವ ಸಾಗಿಸಿದ ಕುಟುಂಬ

ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳ ಶವ ಸಾಗಿಸಲು ಆ್ಯಂಬುಲೆನ್ಸ್​ ಸಿಗದ ಕಾರಣ ಬಂಡಿ ಮೇಲೆ ಶವವಿಟ್ಟುಕೊಂಡು ಮನೆಗೆ ತೆರಳಿರುವ ಘಟನೆ ನಡೆದಿದೆ.

Women body
Women body
author img

By

Published : Apr 28, 2021, 3:45 PM IST

ಭೋಪಾಲ್​(ಮಧ್ಯಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶದಲ್ಲಿ ನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಹುತೇಕ ರಾಜ್ಯದ ಆಸ್ಪತ್ರೆಗಳಲ್ಲಿ ಔಷಧ, ಬೆಡ್​ ಹಾಗೂ ಆ್ಯಂಬುಲೆನ್ಸ್​ ಸಮಸ್ಯೆ ಉಂಟಾಗಿದೆ.

ಬಂಡಿ ಮೇಲೆ ಶವವಿಟ್ಟುಕೊಂಡು ಮನೆಗೆ ತೆರಳಿದ ಕುಟುಂಬ

ಮಧ್ಯಪ್ರದೇಶದ ದಾಮೋದಲ್ಲಿ ಕುಟುಂಬವೊಂದು ಮೃತ ಮಹಿಳೆಯ ಶವವನ್ನ ಬಂಡಿಯ ಮೇಲಿಟ್ಟುಕೊಂಡು ಸಾಗಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 45 ವರ್ಷದ ಮಹಿಳೆಯೊಬ್ಬಳನ್ನು ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಸರಿಯಾದ ವೈದ್ಯಕೀಯ ಆರೈಕೆ ಇಲ್ಲದ ಕಾರಣ ಅವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೋವಿಡ್ ರೋಗಿಗೆ ರೆಮ್​ಡಿಸಿವಿರ್​​ ಔಷಧಿ ಕೊಡಿಸಿ: ಆರೋಗ್ಯಾಧಿಕಾರಿಯ ಕಾಲಿಗೆ ಬಿದ್ದು ಮಹಿಳೆಯರ ಮನವಿ

ಮಹಿಳೆ ಸಾವನ್ನಪ್ಪಿದ ಬಳಿಕ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್​ ನೀಡುತ್ತಾರೆಂದು ಕುಟುಂಬ ಕಾಯ್ದಿದೆ. ಆದರೆ ಅದು ಸಿಗದ ಕಾರಣ ಕೊನೆಯದಾಗಿ ಆಕೆಯ ಮೃತದೇಹವನ್ನ ಬಂಡಿಯಲ್ಲಿಟ್ಟುಕೊಂಡು ಮನೆಗೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.