ETV Bharat / bharat

ಮುಂಬೈನಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ ಸಂಭ್ರಮ..ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ - ಮೋದಿ

ಗಣೇಶ ಹಬ್ಬದ ನಿಮಿತ್ತ ರಾಷ್ಟ್ರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Sep 10, 2021, 10:24 AM IST

ಮುಂಬೈ: ಗಣೇಶ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಹಾರೈಸಿರುವ ಅವರು, ಪ್ರತಿಯೊಬ್ಬರ ಜೀವನದಲ್ಲೂ ಆ ಗಣಪತಿ, ಶಾಂತಿ, ಅದೃಷ್ಟ, ಉತ್ತಮ ಆರೋಗ್ಯ ತರಲಿ. ಗಣಪತಿ ಬಪ್ಪ ಮೋರಯಾ ಎಂದು ಟ್ವೀಟ್​ ಮಾಡಿದ್ದಾರೆ.

ಮುಂಬೈನಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ ಸಂಭ್ರಮ

ಮುಂಬೈನ ಪಾರೆಲ್​ನ ಲಾಲ್​ಬಾಗ್​ ಪ್ರದೇಶದ ಗಣೇಶ್​ ಗಲ್ಲಿಯಲ್ಲಿರುವ ಮುಂಬೈ ಚ ರಾಜಾದಲ್ಲಿ ಗಣಪನಿಗೆ ವಿಶೇಷ ಆರತಿ ನೆರವೇರಿಸಲಾಯಿತು. ನಾಗಪುರದ ಶ್ರೀ ಗಣೇಶ ಮಂದಿರದಲ್ಲಿ ಬೆಳಗಿನ ಆರತಿ ಜತೆಗೆ ಪ್ರಾರ್ಥನೆ ಸಲ್ಲಿಸಲಾಯಿತು. ಹಲವು ಭಕ್ತಾದಿಗಳು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬೆನಕನ ಕೃಪೆಗೆ ಪಾತ್ರರಾದರು.

ಇದನ್ನೂ ಓದಿ: ವಿನಾಯಕ ಚತುರ್ಥಿ ಸಂಭ್ರಮ: ಗಣೇಶನಿಗೆ ಕೃಷ್ಣ ಪಿಂಗಾಕ್ಷ ಹೆಸರು ಬರಲು ಕಾರಣವೇನು?

ಈಗಾಗಲೇ ಆಯಾಯ ರಾಜ್ಯ ಸರ್ಕಾರಗಳು ಗಣೇಶ ಹಬ್ಬ ಆಚರಣೆಗೆ ಕೋವಿಡ್ ಮಾರ್ಗಸೂಚಿಗಳನ್ನು ಹೊರಡಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.