ಔರಂಗಾಬಾದ್(ಮಹಾರಾಷ್ಟ್ರ): ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡ್ತಿದ್ದ ವೇಳೆ ಕರೆಂಟ್ ಹೊಡೆದಿರುವ ಪರಿಣಾಮ ಆತ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಕಂಬ ಏರಿದ ವ್ಯಕ್ತಿ ಗಾಯಗೊಂಡಿದ್ದಾನೆ. ವಾಜ್ ಎಂಬ ಪ್ರದೇಶದಲ್ಲಿನ ಕಂಪೂರ್ ರಸ್ತೆಯಲ್ಲಿ ಒಳಚರಂಡಿ ಮಾರ್ಗದ ಕೆಲಸ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಕೆಲಸದ ಗುತ್ತಿಗೆ ನೀಡಲಾಗುತ್ತು. ವಿದ್ಯುತ್ ಕಂಬ ಏರಿ ಕೆಲಸ ಮಾಡ್ತಿದ್ದ ವೇಳೆ ಆತನಿಗೆ ಶಾಕ್ ಹೊಡೆದಿದ್ದು, ಅಲ್ಲಿಂದ ಕೆಳಗೆ ಬಿದ್ದಿದ್ದಾನೆ.
ಆತ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.