ವಾರಾಣಸಿ(ಉತ್ತರಪ್ರದೇಶ): ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ನಡೆಸುವ ಕಸರತ್ತುಗಳು ಒಂದೆರಡಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷಗಳು ಜನರನ್ನು ತಲುಪಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ. ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ, ವಿಭಿನ್ನ ತಂತ್ರಗಳನ್ನು ಪಕ್ಷಗಳು ಅನುಸರಿಸುತ್ತಿವೆ.
ಕೆಲವೇ ದಿನಗಳ ಹಿಂದೆ ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಯುಪಿ ಮೇನ್ ಸಬ್ ಬಾ (ಉತ್ತರ ಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನು ಹೊಗಳಲಾಗಿತ್ತು. ರವಿ ಕಿಶನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
ಈಗ ಆ ಹಾಡಿಗೆ ಪ್ರತಿಕ್ರಿಯೆಯಾಗಿ ಯುಪಿ ಮೇನ್ ಕಾ ಬಾ ( ಉತ್ತರ ಪ್ರದೇಶದಲ್ಲಿ ಏನಿದೆ?) ಎಂಬ ಹಾಡನ್ನು ಬೋಜಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ರವಿ ಕಿಶನ್ ಹಾಡಿಗೆ ವಿರುದ್ಧವಿದ್ದು, ಯೋಗಿ ಸರ್ಕಾರದ ವಿರುದ್ಧ ಈ ಹಾಡಿನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಿರುದ್ಯೋಗ ಮುಂತಾದ ಸಮಸ್ಯೆಗಳ ಜೊತೆಗೆ ಲಖಿಂಪುರ ಖೇರಿ ಘಟನೆಗಳಂತಹ ವಿಚಾರಗಳನ್ನು ಈ ಹಾಡಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
-
ऐ बाबा,
— Sanjeev Mishra🍁🍁 (@sanjeevscion) January 16, 2022 " class="align-text-top noRightClick twitterSection" data="
यू पी में का बा?#बेशर्मBJP#NehaSinghRathor pic.twitter.com/iXwIW2t6Tr
">ऐ बाबा,
— Sanjeev Mishra🍁🍁 (@sanjeevscion) January 16, 2022
यू पी में का बा?#बेशर्मBJP#NehaSinghRathor pic.twitter.com/iXwIW2t6Trऐ बाबा,
— Sanjeev Mishra🍁🍁 (@sanjeevscion) January 16, 2022
यू पी में का बा?#बेशर्मBJP#NehaSinghRathor pic.twitter.com/iXwIW2t6Tr
ಇನ್ನು ನೇಹಾ ಸಿಂಗ್ ರಾಥೋಡ್ ಕಾನ್ಪುರ್ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಪದವಿ ಪಡೆದಿದ್ದು, ಜನರ ಕವಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಬಿಹಾರ ಚುನಾವಣೆಯಲ್ಲಿ 'ಬಿಹಾರದಲ್ಲಿ ಏನಿದೆ' ಎಂದು ಹಾಡಿ, ಪ್ರಚಲಿತಕ್ಕೆ ಬಂದಿದ್ದರು. ಈಗ 'ಉತ್ತರ ಪ್ರದೇಶದಲ್ಲಿ ಏನಿದೆ?' ಎಂದು ಹಾಡಿದ್ದು, ಈ ಹಾಡಿನ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ನೇಹಾ ಸಿಂಗ್ ರಾಥೋಡ್ ಹೇಳಿದ್ದಾರೆ.
ಇದನ್ನೂ ಓದಿ: ನೂತನ ಪಾರ್ಲಿಮೆಂಟ್ ಕಟ್ಟಡ ಕಾಮಗಾರಿ ವೆಚ್ಚ ₹200 ಕೋಟಿ ಹೆಚ್ಚಳ