ಚೆನ್ನೈ: ಮೂರು ದಿನಗಳ ತಮಿಳುನಾಡು ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಇಂದು ಕರೂರ್ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಆರೆಸ್ಸೆಸ್ ವಿಚಾರಗಳು ತಮಿಳುನಾಡಿನ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ ರಾಹುಲ್, ತಮ್ಮ ಜೀವನದ ಕೊನೆ ಉಸಿರು ಇರುವವರೆಗೂ ತಮಿಳುನಾಡಿನ ಸಂಸ್ಕೃತಿ ಗೌರವಿಸುವುದಾಗಿ ತಿಳಿಸಿದರು.
ಓದಿ: ಅಂಗವೈಫಲ್ಯ ಮೆಟ್ಟಿ ನಿಂತ ಛಲಗಾತಿ.. ನೃತ್ಯ ಕ್ಷೇತ್ರದಲ್ಲಿ ಮಿಂಚಿದ ಯಾಮಿನಿ
ಪ್ರಧಾನಿ ನರೇಂದ್ರ ಮೋದಿ ಕೇವಲ ಐವರು ಶ್ರೀಮಂತರಿಗೋಸ್ಕರ ಕೆಲಸ ಮಾಡ್ತಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ಎಲ್ಲ ಸೌಲಭ್ಯ ಒದಗಿಸುತ್ತಿದ್ದಾರೆ. ಜತೆಗೆ ಅವರ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರು, ರೈತರಿಗೋಸ್ಕರ ಯಾವುದೇ ಯೋಜನೆ ಜಾರಿಗೊಳಿಸುತ್ತಿಲ್ಲ ಎಂದರು.
ಇದೇ ವೇಳೆ ಎಐಎಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇಲ್ಲಿ ಇರುವುದು ಮೋದಿ ನೇತೃತ್ವದ ರಿಮೋಟ್ ಸರ್ಕಾರ. ಪ್ರಧಾನಿ ತೆಗೆದುಕೊಳ್ಳುತ್ತಿರುವ ಯಾವುದೇ ನಿರ್ಧಾರದ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಇವರಿಗೆ ಇಲ್ಲ ಎಂದಿದ್ದಾರೆ.
ಆರ್ಎಸ್ಎಸ್ ಯೋಚನೆಗಳು ತಮಿಳುನಾಡು ಸಂಸ್ಕೃತಿಗೆ ವಿರುದ್ಧವಾಗಿವೆ. ನನ್ನ ಅಜ್ಜಿ ಕಾಲದಿಂದಲೂ ತಮಿಳುನಾಡಿನ ಮೇಲೆ ನಮಗೆ ವಿಶೇಷ ಪ್ರೀತಿ. ತಮಿಳುನಾಡು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.