ಪಣಜಿ (ಗೋವಾ): ಗೋವಾದಲ್ಲಿನ ಭಾರತೀಯ ನೌಕಾಪಡೆಯು ನೌಕಾ ನೆಲೆಗಳ ಬಳಿ ಹಾರುವ ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳ (ಯುಎವಿ) ವಿರುದ್ಧ ಎಚ್ಚರಿಕೆ ನೀಡಿದ್ದು, ಅಂತಹ ಸಾಧನಗಳನ್ನು "ತಟಸ್ಥಗೊಳಿಸಲಾಗುತ್ತದೆ" ಮತ್ತು ಮೂರು ಕಿ.ಮೀ ವ್ಯಾಪ್ತಿಯಲ್ಲಿ ಹಾರಿಸಿದರೆ ಆಪರೇಟರ್‌ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.
"ಗೋವಾದಲ್ಲಿನ ನೌಕಾ ನೆಲೆಯ ಪರಿಧಿಯಿಂದ ಮೂರು ಕಿಲೋಮೀಟರ್ ವಿಸ್ತೀರ್ಣವನ್ನು 'ನೋ ಫ್ಲೈ ಜೋನ್' ಎಂದು ಗೊತ್ತುಪಡಿಸಲಾಗಿದೆ. ಎಲ್ಲ ವಲಯಗಳು ಮತ್ತು ನಾಗರಿಕ ಏಜೆನ್ಸಿಗಳು ಯಾವುದೇ ಕಾರಣಕ್ಕೂ ಈ ವಲಯಗಳಲ್ಲಿ ಯಾವುದೇ ವೈಮಾನಿಕ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ" ಎಂದು ಭಾರತೀಯ ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಯಾವುದೇ ಅನುಮೋದನೆ ಇಲ್ಲದೇ ಈ ಪ್ರದೇಶಗಳಲ್ಲಿ ಹಾರಾಟ ನಡೆಸುತ್ತಿರುವ ವೈಮಾನಿಕ ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಮುಟ್ಟುಗೋಲು ಹಾಕುವ ಅಥವಾ ನಾಶಪಡಿಸುವ ಹಕ್ಕನ್ನು ಭಾರತೀಯ ನೌಕಾಪಡೆ ಹೊಂದಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆಪರೇಟರ್‌ಗಳ ವಿರುದ್ಧ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.