ETV Bharat / bharat

'ಆಕ್ರಮಣಕಾರಿ ಬ್ಯಾಟಿಂಗ್​, ಬಿಗಿ ಫೀಲ್ಡಿಂಗ್​ನಿಂದ ಗೆಲುವು': ತೆಲಂಗಾಣ ಚುನಾವಣೆಯನ್ನು ಕ್ರಿಕೆಟ್​ಗೆ ಹೋಲಿಸಿದ ಕಾಂಗ್ರೆಸ್​ ಅಭ್ಯರ್ಥಿ ಅಜರುದ್ದೀನ್

2014 ರಲ್ಲಿ ರಾಜಸ್ಥಾನದ ಟೋಂಕ್-ಸವಾಯಿ ಮಾಧೋಪುರ್‌ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಮಾಜಿ ಕ್ರಿಕೆಟರ್​, ರಾಜಕಾರಣಿ ಮೊಹಮದ್​ ಅಜರುದ್ದೀನ್​ ಈಗ ಕಾಂಗ್ರೆಸ್​ ಮೂಲಕ ತೆಲಂಗಾಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

author img

By ETV Bharat Karnataka Team

Published : Oct 29, 2023, 5:27 PM IST

ಕಾಂಗ್ರೆಸ್​ ಅಭ್ಯರ್ಥಿ ಅಜರುದ್ದೀನ್
ಕಾಂಗ್ರೆಸ್​ ಅಭ್ಯರ್ಥಿ ಅಜರುದ್ದೀನ್

ನವದೆಹಲಿ: ಒಂದು ಕಾಲದಲ್ಲಿ ಸ್ಟೈಲಿಶ್ ಫ್ಲಿಕ್‌ಗಳು ಮತ್ತು ಮೈದಾನದಲ್ಲಿ ಚುರುಕಾದ ಕ್ಯಾಚಿಂಗ್‌ಗೆ ಹೆಸರುವಾಸಿಯಾಗಿದ್ದ ಮಾಜಿ ಕ್ರಿಕೆಟರ್​ ಮೊಹಮ್ಮದ್ ಅಜರುದ್ದೀನ್ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಜುಬಿಲಿ ಹಿಲ್ಸ್‌ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು, 'ಹೊಸ ಪಿಚ್‌ನಲ್ಲಿ ಗೆಲ್ಲಲು ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸರಿಯಾಗಿ ಫೀಲ್ಡಿಂಗ್' ಮಾಡುವುದಾಗಿ ಹೇಳಿದ್ದಾರೆ.

ಹೈದರಾಬಾದ್​ ಮೂಲಕ ಅಜರ್ 2009 ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸುವುದರ ಮೂಲಕ ರಾಜಕೀಯ ಇನ್ನಿಂಗ್ಸ್ ಅನ್ನು ಭರ್ಜರಿಯಾಗಿ ಆರಂಭಿಸಿದ್ದರು. 2014 ರ ಚುನಾವಣೆಯಲ್ಲಿ ರಾಜಸ್ಥಾನದ ಟೋಂಕ್-ಸವಾಯಿ ಮಾಧೋಪುರ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದಾದ ನಂತರ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ತವರಿನ ಮೂಲಕವೇ ಮತ್ತೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಜುಬಿಲಿ ಹಿಲ್ಸ್​ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುತ್ತಿದ್ದು, ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಕಾಲಿಡುತ್ತಿದ್ದಾರೆ.

ತೆಲುವು ಜನರಿಗೆ ನೆರವಾಗುವ ಹಂಬಲ: ಭಾರತ ಕ್ರಿಕೆಟ್ ತಂದದ ಮಾಜಿ ನಾಯಕ ಅಜರ್​, ಲೋಕಸಭೆ ಚುನಾವಣೆಯಲ್ಲಿ ಒಂದು ಬಾರಿ ಸೋಲು, ಗೆಲುವು ಕಂಡಿರುವ ನಾನು ತೆಲಂಗಾಣದ ಜನರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಈ ಬಾರಿ ತವರು ರಾಜ್ಯದಿಂದ ಟಿಕೆಟ್ ಸಿಕ್ಕಿರುವುದು ತುಂಬಾ ಖುಷಿ ತಂದಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಮತ್ತು ಪಿಸಿಸಿ ಮುಖ್ಯಸ್ಥ ಎ ರೇವಂತ್ ರೆಡ್ಡಿ ಅವರಿಗೆ ಧನ್ಯವಾದ ಸಲ್ಲಿಸುವೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಪರವಾಗಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಾವು ಖಂಡಿತವಾಗಿಯೂ ಮೇಲುಗೈ ಸಾಧಿಸುತ್ತೇವೆ. ಉಳಿದಿದ್ದೆಲ್ಲವೂ ದೇವರ ಇಚ್ಛೆ, ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸುತ್ತಿದ್ದಾರೆ. ಕೆಲವು ನಗರ ಪ್ರದೇಶಗಳಿಗೆ ಮಾತ್ರ ಅಭಿವೃದ್ಧಿ ಸೀಮಿತವಾಗಿದೆ. ಆದ್ದರಿಂದ ನಾವು ಇಡೀ ರಾಜ್ಯದತ್ತ ಗಮನ ಹರಿಸುತ್ತೇವೆ. ಪಕ್ಷ ನೀಡಿದ 6 ಭರವಸೆಗಳನ್ನು ಖಂಡಿತವಾಗಿಯೂ ಜಾರಿ ಮಾಡುತ್ತೇವೆ ಎಂದು ಅಜರ್ ಹೇಳಿದರು.

ಜುಬಿಲಿ ಹಿಲ್ಸ್‌ನಲ್ಲಿ ಸ್ಪರ್ಧಿಸಿದ್ದು, ಕ್ಷೇತ್ರದ ಜನರೊಂದಿಗೆ ಮಾತನಾಡಿದಾಗಲೆಲ್ಲ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಗೆಲ್ಲುವ ವಿಶ್ವಾಸವಿದೆ. ಇದು ಅಭಿವೃದ್ಧಿ ಹೊಂದಿದ ಪ್ರದೇಶ ಎಂದು ಜನರು ಭಾವಿಸಿದ್ದಾರೆ. ಇಲ್ಲಿಯೂ ಅಭಿವೃದ್ಧಿಯ ಅಗತ್ಯವಿರುವ ಪ್ರದೇಶಗಳಿವೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ನಾವು ಜನರ ವಿಶ್ವಾಸವನ್ನು ಗಳಿಸುತ್ತೇವೆ ಎಂದು ಅವರು ಹೇಳಿದರು.

ಚುನಾವಣೆ- ಕ್ರಿಕೆಟ್​ ಸಾಮ್ಯತೆ: ಚುನಾವಣಾ ಕದನದಲ್ಲಿ ಕ್ರಿಕೆಟ್‌ ಸ್ಫೂರ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಕ್ರಿಕೆಟ್​ನಂತೆ ಇಲ್ಲಿಯೂ ಆಕ್ರಮಣಕಾರಿಯಾಗಿ ಪ್ರಚಾರ ಮಾಡಬೇಕು. ಒಮ್ಮೆ ಮೈದಾನಕ್ಕಿಳಿದರೆ ಎಲ್ಲವನ್ನೂ ಎದುರಿಸಬೇಕು, ಸುಮ್ಮನಿರಲು ಸಾಧ್ಯವಿಲ್ಲ. ಜನರ ಮನ ಗೆಲ್ಲಬೇಕು. ಫೀಲ್ಡಿಂಗ್ (ಪ್ರಚಾರ) ಅನ್ನು ಸರಿಯಾಗಿ ಮಾಡುತ್ತೇವೆ. ದೊಡ್ಡದಾದ ಈ ಪಿಚ್‌ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ಬಿಆರ್‌ಎಸ್‌ನ ಗೋಪಿನಾಥ್ ಮಾಗಂಟಿ ಅವರು ಜುಬಿಲಿ ಹಿಲ್ಸ್‌ನ ಹಾಲಿ ಶಾಸಕರಾಗಿದ್ದಾರೆ. ತೆಲಂಗಾಣದ 119 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಮಧ್ಯಪ್ರದೇಶದ ಚುನಾವಣಾ ಕಣದಲ್ಲಿ 8 ಮಾಜಿ ಸಿಎಂಗಳ 10 ಸಂಬಂಧಿಕರು: ಬಿಜೆಪಿಯಿಂದ 6 ಮಂದಿ ಕಣಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.