ETV Bharat / bharat

Army Jawan: ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಜನರ ಗುಂಪು ಥಳಿಸಿದೆ: ತಮಿಳುನಾಡಿನ ಯೋಧನ ವಿಡಿಯೋ ವೈರಲ್​.. ಪೊಲೀಸರು ಹೇಳಿದ್ದೇನು? - ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ

ತಮಿಳುನಾಡಿನಲ್ಲಿ ತನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಜನರ ಗುಂಪೊಂದು ಥಳಿಸಿದೆ ಎಂದು ಆರೋಪಿಸಿ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರೊಬ್ಬರು ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆದರೆ, ಈ ಆರೋಪವನ್ನು ತಮಿಳುನಾಡು ಪೊಲೀಸರು ತಳ್ಳಿಹಾಕಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Wife stripped half naked, beaten by 120 men in Tamil Nadu: Army jawan shares plight on Twitter video
ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಜನರ ಗುಂಪು ಥಳಿಸಿದೆ: ತಮಿಳುನಾಡಿನ ಯೋಧನ ವಿಡಿಯೋ ವೈರಲ್​... ಪೊಲೀಸರು ಹೇಳಿದ್ದೇನು?
author img

By

Published : Jun 11, 2023, 4:10 PM IST

ತಿರುವಣ್ಣಾಮಲೈ (ತಮಿಳುನಾಡು): ತನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ 120 ಜನರ ಗುಂಪು ಥಳಿಸಿದೆ ಎಂದು ತಮಿಳುನಾಡಿನ ಯೋಧರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಮೂಲದ ಯೋಧ ಪ್ರಭಾಕರನ್ ಎಂಬುವವರು ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮೂರಲ್ಲಿ ತನ್ನ ಪತ್ನಿಗೆ ಥಳಿಸಲಾಗಿದೆ ಎಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ನಾಗಪಟ್ಟಣಂ ಜಿಲ್ಲೆಯ ಕಡವಾಸಲ್ ಗ್ರಾಮದಲ್ಲಿ ನನ್ನ ಹೆಂಡತಿ ಜೀವನೋಪಾಯಕ್ಕಾಗಿ ಸ್ಥಳವೊಂದರಲ್ಲಿ ಅಂಗಡಿಯನ್ನು ನಡೆಸುತ್ತಾಳೆ. ಆಕೆಯನ್ನು 120 ಮಂದಿ ಥಳಿಸಿ ಅಂಗಡಿಯ ವಸ್ತುಗಳನ್ನು ಹೊರಹಾಕಿದ್ದಾರೆ. ನಾನು ಎಸ್ಪಿಗೆ ಮನವಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಡಿಜಿಪಿ ಸರ್ ದಯವಿಟ್ಟು ಸಹಾಯ ಮಾಡಿ. ನನ್ನ ಮನೆಯವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಬೆದರಿಸಿದ್ದಾರೆ. ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಯೋಧ ಪ್ರಭಾಕರನ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋವನ್ನು ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಎನ್​.ತ್ಯಾಗರಾಜನ್ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿದೆ.

ಪೊಲೀಸರು ಹೇಳಿದ್ದೇನು?: ಯೋಧ ಪ್ರಭಾಕರನ್ ಆರೋಪದ ಬಗ್ಗೆ ತಿರುವಣ್ಣಾಮಲೈ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕೇಯನ್, ಇದು ರೇಣುಕಾಂಬಲ್ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಗುತ್ತಿಗೆ ಪಡೆದ ಅಂಗಡಿಯೊಂದರ ವಿವಾದವಾಗಿದೆ. ಕೀರ್ತಿ ಎಂಬ ಮಹಿಳೆ ಮೇಲೆ ಹಲ್ಲೆ ನಡೆದಿಲ್ಲ. ನಿನ್ನೆ ಘಟನೆ ನಡೆದಾಗ ಕೀರ್ತಿ ಮತ್ತು ಆಕೆಯ ತಾಯಿ ಸ್ಥಳದಲ್ಲಿಯೇ ಇದ್ದರು. ಆದರೆ, ಈ ಸಮಸ್ಯೆಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಸ್ಥಳೀಯ ಪೊಲೀಸರ ಪ್ರಕಾರ, ರೇಣುಕಾಂಬಲ್ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ನಿರ್ಮಿಸಲಾದ ಅಂಗಡಿಯನ್ನು ಕುಮಾರ್ ಎಂಬುವವರು ಐದು ವರ್ಷಗಳ ಅವಧಿಗೆ 9.5 ಲಕ್ಷ ರೂ.ಗೆ ಯೋಧ ಪ್ರಭಾಕರನ್ ಅವರ ಮಾವ ಸೆಲ್ವಮೂರ್ತಿ ಅವರಿಗೆ ಗುತ್ತಿಗೆ ನೀಡಿದ್ದಾರೆ. ಕುಮಾರ್ ಮೃತಪಟ್ಟ ಮಗ ರಾಮು ಅಂಗಡಿಯನ್ನು ಮರಳಿ ಬಯಸಿದ್ದರಿಂದ ಹಣವನ್ನು ಹಿಂದಿರುಗಿಸಲು ಒಪ್ಪಿಕೊಂಡು ಫೆಬ್ರವರಿ 10ರಂದು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ಸೆಲ್ವಮೂರ್ತಿ ಹಣವನ್ನು ತೆಗೆದುಕೊಳ್ಳುವುದನ್ನು ನಿರಾಕರಿಸಿ ಅಂಗಡಿಯಿಂದ ಹೊರಬರಲು ನಿರಾಕರಿಸಿದರು ಎಂದು ರಾಮು ಹೇಳಿಕೊಂಡಿದ್ದಾರೆ. ಜೂನ್ 10ರಂದು ಸೆಲ್ವಮೂರ್ತಿ ಅವರ ಮಕ್ಕಳಾದ ಜೀವ ಮತ್ತು ಉದಯ ಅವರಿಗೆ ರಾಮು ಹಣವನ್ನು ನೀಡಲು ಅಂಗಡಿಗೆ ಹೋಗಿದ್ದರು. ಈ ವೇಳೆ ರಾಮು ಮೇಲೆ ಸೆಲ್ವಮೂರ್ತಿ ಮಕ್ಕಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

  • Tamil Nadu | "This was a dispute over a leased shop on land which is owned by Renugambal temple. The woman namely Keerthi was not attacked at all. Keerthi and her mother were at the spot yesterday when the incident happened. The issue has been exaggerated. A detailed… pic.twitter.com/rdi8bJtLpF

    — ANI (@ANI) June 11, 2023 " class="align-text-top noRightClick twitterSection" data=" ">

ಈ ಘರ್ಷಣೆ ವೇಳೆ ಸ್ಥಳೀಯರು ಸಹ ರಾಮು ಬೆಂಬಲಕ್ಕೆ ಬಂದಿದ್ದರು. ಇದು ದೊಡ್ಡ ಜಗಳಕ್ಕೆ ಕಾರಣವಾಯಿತು ಮತ್ತು ಅಂಗಡಿಯಲ್ಲಿನ ವಸ್ತುಗಳನ್ನು ಹೊರಹಾಕಲಾಯಿತು. ಆದರೆ, ಈ ಸಮಯದಲ್ಲಿ ಪ್ರಭಾಕರನ್ ಪತ್ನಿ ಕೀರ್ತಿ ಮತ್ತು ಅವರ ತಾಯಿ ಅಂಗಡಿಯಲ್ಲಿದ್ದರೂ ಗುಂಪು ಅವರ ಮೇಲೆ ಹಲ್ಲೆ ನಡೆಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸಂಜೆಯ ವೇಳೆಗೆ ಪ್ರಭಾಕರನ್​ ಪತ್ನಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ತನ್ನ ಪತ್ನಿಗೆ ಗಂಭೀರ ಗಾಯಗಳಾಗಿವೆ ಎಂದು ಯೋಧನ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

  • Had a telephonic conversation with the Havildar, who is bravely serving our country in Kashmir and his wife, based out of Tiruvannamalai. Truly gutted to hear her story & I felt ashamed that this had happened to her on our Tamil soil!

    Our party people are rushing to attend to… https://t.co/E1E3vbXr3n

    — K.Annamalai (@annamalai_k) June 11, 2023 " class="align-text-top noRightClick twitterSection" data=" ">

ಇದರ ನಡುವೆ ಈ ಬಗ್ಗೆ ಟ್ವೀಟ್​ ಮಾಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ .ಅಣ್ಣಾಮಲೈ, ಯೋಧನೊಂದಿಗೆ ಮಾತನಾಡಿದ್ದು, ತ್ವರಿತ ನ್ಯಾಯವನ್ನು ಕೊಡಿಸಲು ತಮ್ಮ ಪಕ್ಷವು ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತದೆ. ನ್ಯಾಯ ದೊರಕಿಸಿಕೊಡುವಲ್ಲಿ ಪಕ್ಷವು ಕುಟುಂಬದ ಜೊತೆಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಹಿರಿಯ ಅಧಿಕಾರಿಯ ಕಿರುಕುಳದಿಂದ ಯೋಧ ಆತ್ಮಹತ್ಯೆ ಆರೋಪ: ಸಹೋದ್ಯೋಗಿಗಳ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.