ETV Bharat / bharat

ಬೆತ್ತಲೆ ಫೋಟೋಗಳನ್ನ ಕಳುಹಿಸಿ ಪತ್ನಿಯಿಂದಲೇ ಪತಿಗೆ ಬ್ಲಾಕ್​ ಮೇಲ್​​ !

author img

By

Published : Dec 15, 2022, 4:00 PM IST

ನಾಸಿಕ್​ನಲ್ಲಿ ಬಾಯ್ ಫ್ರೆಂಡ್ ಸಹಾಯದಿಂದ ಪತ್ನಿಯೇ, ಪತಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪತಿಗೆ ಬ್ಲಾಕ್ ಮೇಲ್ ಮಾಡಿ ನಾಲ್ಕೂವರೆ ಲಕ್ಷ ರೂಪಾಯಿ ಹಣ ಸುಲಿಗೆ ಮಾಡಲಾಗಿದೆ. ಈ ಸಂಬಂಧ ಅಂಬಾಡ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಭಾಗೀರಥ್ ದೇಶಮುಖ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.

ನಗ್ನ ಫೋಟೋಸ್​
ನಗ್ನ ಫೋಟೋಸ್​

ನಾಸಿಕ್( ಮಹಾರಾಷ್ಟ್ರ): ಪತ್ನಿಯೇ ತನ್ನ ಪತಿಗೆ ಬ್ಲಾಕ್ ಮೇಲ್ ಮಾಡಿ ನಾಲ್ಕೂವರೆ ಲಕ್ಷ ರೂಪಾಯಿ ಹಣ ಪಡೆದಿರುವ ಪ್ರಕರಣ ಮಹಾರಾಷ್ಟ್ರದ ನಾಸಿಕ್​​ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಬೆತ್ತಲೆ ಫೋಟೋಗಳನ್ನು ಪತಿಗೆ ಕಳುಹಿಸಿ, ಬ್ಲಾಕ್ ಮೇಲ್ ಮಾಡಿದ್ದಾಳೆ. ಈ ಸಂಬಂಧ ಸಂತ್ರಸ್ತ ಪತಿ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತ ಪತಿ ನೀಡಿರುವ ದೂರಿನ ಪ್ರಕಾರ, ನನಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಮದುವೆಯಾದ ನಂತರವೂ ನಿಮ್ಮ ಪತ್ನಿ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ನನ್ನ ಬಳಿ ಅವರಿಬ್ಬರ ಖಾಸಗಿ ಫೋಟೋಗಳು ಮತ್ತು ವಿಡಿಯೋ ಇದೆ ಎಂದು ಹೇಳಿ ಪತ್ನಿಯ ನಗ್ನ ಫೋಟೋಗಳನ್ನು ಮೊಬೈಲ್ ಫೋನ್​​ಗೆ ಕಳುಹಿಸಿದ್ದಾರೆ.

ಈ ಫೋಟೋಗಳನ್ನು ಎಲ್ಲೂ ಶೇರ್​ ಮಾಡಬಾರದು ಎಂದರೇ, ಹಣ ನೀಡುವಂತೆ ಕೇಳಿದ್ದಾರೆ. ಈ ಪ್ರಕರಣದ ತನಿಖೆ ಹಿರಿಯ ಪೊಲೀಸ್​​ ಅಧಿಕಾರಿ ಭಾಗೀರಥ್ ದೇಶಮುಖ್​ ನೇತೃತ್ವದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಸ್ನೇಹಿತನ ಹೆಸರಿನಲ್ಲಿತ್ತು 4 ಕೋಟಿ ರೂ ವಿಮೆ: ಅಪಘಾತದಂತೆ ಬಿಂಬಿಸಿ ಕೊಲೆ

ಪತ್ನಿ ಮೇಲೆ ಆರೋಪ: ಪತ್ನಿಯೇ ಪ್ರಿಯಕರನ ನೆರವಿನಿಂದ ಸಂಚು ರೂಪಿಸಿ, ಮೊಬೈಲ್​ನಲ್ಲಿ ಇಬ್ಬರ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾನ ಮರ್ಯಾದೆಗೆ ಹೆದರಿ 4 ಲಕ್ಷ 50 ಸಾವಿರ ರೂ. ನೀಡಿದ್ದೇನೆ. ಆಸ್ತಿ ಕಬಳಿಸುವ ಉದ್ದೇಶದಿಂದ ಪತ್ನಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ನ್ಯಾಯಾಲಯ ವಿಚಾರಣೆ ನಡೆಸಿ, ಪತ್ನಿ ಮತ್ತು ಆಕೆಯ ಪ್ರೇಮಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ. ಬಳಿಕ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ದೂರುದಾರರು ಎರಡು ತಿಂಗಳ ಹಿಂದೆ ಪತ್ನಿ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.