ETV Bharat / bharat

ಪತ್ನಿ ನೇಣಿಗೆ ಶರಣಾಗುವುದನ್ನು ತಡೆಯುವ ಬದಲು ವಿಡಿಯೋ ಮಾಡಿ ವಿಕೃತಿ ಮೆರೆದ ಪತಿ

ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಕೆಯ ರಕ್ಷಣೆಗೆ ಧಾವಿಸದ ಗಂಡನೊಬ್ಬ ಆಕೆಯ ಸಾವನ್ನೇ ಮೊಬೈಲ್​ನಲ್ಲಿ ಸೆರೆ ಹಿಡಿದಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

hanging
hanging
author img

By

Published : Sep 23, 2021, 6:53 PM IST

Updated : Sep 23, 2021, 7:16 PM IST

ನೆಲ್ಲೂರು(ಆಂಧ್ರಪ್ರದೇಶ): ಕಟ್ಟಿಕೊಂಡ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವೇಳೆ ಆಕೆಯ ರಕ್ಷಣೆ ಮಾಡುವ ಬದಲು ಗಂಡನೊಬ್ಬ ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಗಂಡನ ಮುಂದೆ ಆತ್ಮಹತ್ಯೆಗೆ ಶರಣಾದ ಪತ್ನಿ

ನೆಲ್ಲೂರು ಜಿಲ್ಲೆಯ ಆತ್ಮಕುರು ಎಂಬಲ್ಲಿ ಈ ಪ್ರಕರಣ ನಡೆದಿದೆ. ಹೆಂಡತಿ ಫ್ಯಾನ್​ಗೆ ಸೀರೆ ಕಟ್ಟಿ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾಗ, ಆಕೆಯ ರಕ್ಷಣೆ ಮಾಡುವ ಬದಲು ಘಟನೆಯ ಸಂಪೂರ್ಣ ಘಟನೆಯನ್ನು ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸಂಬಂಧಿಕರಿಗೆ ವಿಡಿಯೋ ಕಳುಹಿಸಿದ ಪತಿ! ​

ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದ ಬಳಿಕ ಗಂಡ ಅದನ್ನು ತನ್ನ ಕುಟುಂಬ ಹಾಗೂ ಸಂಬಂಧಿಕರಿಗೂ ರವಾನಿಸಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್​ ಕಂಚು ವಿಜೇತ ಶರದ್​ಗೆ ಹೃದಯ ಸಂಬಂಧಿ ಸಮಸ್ಯೆ, AIIMSನಲ್ಲಿ ತಪಾಸಣೆ

ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆ ಕೊಂಡಮ್ಮ ಮೆಪ್ಮಾ ಎಂಬಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Last Updated : Sep 23, 2021, 7:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.