ರೇಣಿಗುಂಟ(ಆಂಧ್ರಪ್ರದೇಶ) : ಚಿತ್ತೂರು ಜಿಲ್ಲೆ ರೇಣಿಗುಂಟದಲ್ಲಿ ದಾರುಣ ಘಟನೆಯೊಂದ ಬೆಳಕಿಗೆ ಬಂದಿದೆ. ಪತಿಯನ್ನು ಪತ್ನಿಯೇ ಬರ್ಬರವಾಗಿ ಕೊಲೆ ಮಾಡಿದ್ದಲ್ಲದೇ ಆತನ ರುಂಡವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿದ್ದಾರೆ.
ಪೊಲೀಸರ ಪ್ರಕಾರ, ರವಿಚಂದ್ರನ್ (53) ಮತ್ತು ವಸುಂಧರಾ ದಂಪತಿಗಳು ಪೊಲೀಸ್ಲೈನ್ ನಗರದಲ್ಲಿ ವಾಸವಿದ್ದರು. ಅವರಿಗೆ 20 ವರ್ಷದ ಮಗನಿದ್ದಾನೆ. ಗುರುವಾರ ಬೆಳಗ್ಗೆ ದಂಪತಿ ನಡುವೆ ಸಣ್ಣಪುಟ್ಟ ಜಗಳ ನಡೆದಿದೆ. ಈ ಹಿನ್ನೆಲೆ ಕುಪಿತಳಾದ ವಸುಂಧರಾ, ಚಾಕುವಿನಿಂದ ತನ್ನ ಪತಿ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾಳೆ, ಬಳಿಕ ತಲೆ ಕತ್ತರಿಸಿದ್ದಾರೆ. ಬಳಿಕ ತಲೆಯನ್ನು ಬ್ಯಾಗ್ನಲ್ಲಿಟ್ಟುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಓದಿ: ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಸಭೆ: ವೀಕೆಂಡ್ ಕರ್ಫ್ಯೂ ಭವಿಷ್ಯ ನಿರ್ಧಾರ?
ಘಟನೆಯಿಂದ ಬೆಚ್ಚಿಬಿದ್ದ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಕೊಲೆ ನಡೆದ ರೀತಿಯನ್ನು ಪರಿಶೀಲಿಸಿದ ಪೊಲೀಸರು ಬಳಿಕ ಮೃತದೇಹವನ್ನು ತಿರುಪತಿ ಎಸ್‌ವಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಈ ಘಟನೆ ಕುರಿತು ರೇಣಿಗುಂಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ