ETV Bharat / bharat

ಕೊರೊನಾ ಸೋಂಕಿನಿಂದ ಪತಿ ಸಾವು: 3 ವರ್ಷದ ಮಗನೊಂದಿಗೆ ಪತ್ನಿ ಆತ್ಮಹತ್ಯೆ!

author img

By

Published : Apr 15, 2021, 8:14 PM IST

Updated : Apr 15, 2021, 8:22 PM IST

ಪತಿ ಕೋವಿಡ್​ಗೆ ತುತ್ತಾಗಿ ಮೃತಪಟ್ಟಿದ್ದು, ಇದಾದ ಬಳಿಕ ಹತಾಶೆ ಮತ್ತು ಅಸಹಾಯಕತೆಯಿಂದ ಪತ್ನಿ ಮಗುವಿನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

wife-commits-suicide-with-three-year-old-child-after-corona-positive-husbands-death

ನಾಂದೇಡ್ (ಮಹಾರಾಷ್ಟ್ರ): ಕೊರೊನಾ ಸೋಂಕಿನಿಂದಾಗಿ ಪತಿ ಸಾವನ್ನಪ್ಪಿದ ಹಿನ್ನೆಲೆ ಪತ್ನಿ ತನ್ನ 3 ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಂದೇಡ್​ನಲ್ಲಿ ಸಂಭವಿಸಿದೆ. ಪತಿ ಸಾವನ್ನಪ್ಪಿದ ಮರುದಿನವೇ ಆಕೆ ತನ್ನ ಮಗನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅವರು ಜೀವನೋಪಾಯಕ್ಕಾಗಿ ಚಾಪೆಗಳನ್ನು ಮಾರುತ್ತಿದ್ದರು ಮತ್ತು ಜೊತೆಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ದಿನದೂಗಿಸಲು ಹೆಣಗಾಡುತ್ತಿದ್ದ ಸಂದರ್ಭದಲ್ಲಿ ಪತಿ ಕೋವಿಡ್​ಗೆ ತುತ್ತಾಗಿದ್ದು, ಆತನನ್ನು ಲೋಹಾದ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಆದರೆ ಮೂರು ದಿನಗಳ ನಂತರ ಆತ ಮೃತಪಟ್ಟಿದ್ದು, ಇದಾದ ಬಳಿಕ ಹತಾಶೆ ಮತ್ತು ಅಸಹಾಯಕತೆಯಿಂದ ಪತ್ನಿ ಮಗುವಿನೊಂದಿಗೆ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ಈ ದಂಪತಿಯ ಇನ್ನೊಬ್ಬ ಮಗ ಹಾಗೂ ಮಗಳು ಅನಾಥರಾಗಿದ್ದಾರೆ. ಲೋಹಾ ಪೊಲೀಸರು ಆಕಸ್ಮಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Last Updated : Apr 15, 2021, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.