ETV Bharat / bharat

ಸಾಲದ ಸೂಲಕ್ಕೆ ಹೆಂಡ್ತಿ ನಂತರ ಗಂಡನೂ ಆತ್ಮಹತ್ಯೆ.. ಅನಾಥರಾದ ಮೂವರು ಹೆಣ್ಮಕ್ಕಳು!

author img

By

Published : Mar 12, 2021, 12:37 PM IST

ಸಾಲದ ಸೂಲಕ್ಕೆ ಹೆಂಡ್ತಿ ನಂತರ ಗಂಡನೂ ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಹೆಣ್ಮಕ್ಕಳು ಈಗ ಅನಾಥವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ.

Wife and Husband committed suicide, Wife and Husband committed suicide in Kurnool, Kurnool crime news, ಗಂಡ ಮತ್ತು ಹೆಂಡ್ತಿ ಆತ್ಮಹತ್ಯೆ, ಕರ್ನೂಲ್​ನಲ್ಲಿ ಗಂಡ ಮತ್ತು ಹೆಂಡ್ತಿ ಆತ್ಮಹತ್ಯೆ, ಕರ್ನೂಲ್​ ಅಪರಾಧ ಸುದ್ದಿ,
ಸಾಲ ಸೂಲಕ್ಕೆ ಹೆಂಡ್ತಿ ನಂತರ ಗಂಡನೂ ಆತ್ಮಹತ್ಯೆ

ಕರ್ನೂಲ್​: ಭಾರಿ ಸಾಲದಿಂದಾಗಿ ಗಂಡ - ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಲ್ಲಗಡ ತಾಲೂಕಿನ ಚಿಂತಕುಂಟಾದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಅಂಬತಿ ಸಂಜೀವ್ ರೆಡ್ಡಿ ಒಬ್ಬ ರೈತ. ಅವರು ಅದೇ ಹಳ್ಳಿಯ ಶ್ರಾವಣಿಯನ್ನು ಮದುವೆಯಾದರು. ಅವರಿಗೆ ತೇಜಸ್ವಿನಿ, ಅಶ್ವಿನಿ, ಸಾಯಿ ತೇಜಸ್ವಿನಿ ಎಂಬ ಮೂವರು ಮಕ್ಕಳಿದ್ದಾರೆ.

ಗಂಡ - ಹೆಂಡ್ತಿ ಇಬ್ಬರು ಸೇರಿ ಕೃಷಿಗಾಗಿ ಭೂಮಿಯನ್ನು ಗುತ್ತಿಗೆ ಪಡೆದಿದ್ದರು. 7 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದ ಅವರು ಹತ್ತಿ ಬೆಳೆ ಬೆಳೆದಿದ್ದರು. ಆದರೆ ಲಾಭದ ನಿರೀಕ್ಷೆಯಲ್ಲಿದ್ದ ಅವರು ಕೃಷಿಯಲ್ಲಿ ನಷ್ಟ ಅನುಭವಿಸಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ಬೆಳೆಯ ಇಳುವರಿ ತೀವ್ರವಾಗಿ ಹಾನಿಗೊಳಗಾಗಿದೆ. ಸಂಜೀವ್ ರೆಡ್ಡಿ ಕೃಷಿಗಾಗಿ 11 ಲಕ್ಷ ಸಾಲ ಮಾಡಿಕೊಂಡಿದ್ದರು. ಕೃಷಿ ನಷ್ಟದಿಂದಾಗಿ ದಂಪತಿ ಸಾಲ ಪರದೆಯಲ್ಲಿ ಸಿಲುಕಿಕೊಂಡಿದ್ದರು.

ತೀವ್ರ ಸಾಲದಿಂದಾಗಿ ಮನನೊಂದಿದ ಶ್ರಾವಣಿ ಮಾರ್ಚ್ 7 ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ತೀವ್ರ ಖಿನ್ನತೆಯಿಂದ ಸಂಜೀವರೆಡ್ಡಿ ಬಳಲುತ್ತಿದ್ದರು. ಹೆಂಡ್ತಿ ಸಾವಿನಿಂದ ಹೊರ ಬರದ ಸಂಜೀವರೆಡ್ಡಿ ಗುರುವಾರ ಮನೆಯ ಮಹಡಿಯಲ್ಲಿ ಕೀಟನಾಶಕ ಸೇವಿಸಿದ್ದಾರೆ. ಬಳಿಕ ಕೆಳಗಡೆ ಬಂದು ತಮ್ಮ ತಾಯಿ ವೆಂಕಟಲಕ್ಷ್ಮಿಗೆ ವಿಷ ಕುಡಿದಿರುವುದರ ಬಗ್ಗೆ ತಿಳಿಸಿದ್ದಾರೆ.

ಕೂಡಲೇ ಆ ತಾಯಿ ಮಗನ ಜೀವ ಉಳಿಸಲು ಆಟೋ ಮೂಲಕ ಅಲ್ಲಗಡ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಂಜೀವರೆಡ್ಡಿ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈಗ ತಂದೆ-ತಾಯಿಯನ್ನು ಇಬ್ಬರು ಕಳೆದುಕೊಂಡ ಆ ಮುದ್ದಾದ ಮೂವರು ಹೆಣ್ಮಕ್ಕಳು ಅನಾಥವಾಗಿವೆ.

ಸಂಬಂಧಿಕರೆಲ್ಲರೂ ಆ ಹೆಣ್ಮಕ್ಕಳು ಭವಿಷ್ಯದ ಬಗ್ಗೆ ಯೋಚಿಸುತ್ತಾ ಕಣ್ಣೀರು ಹಾಕುತ್ತಿದ್ದರು. ಈ ಘಟನೆ ಕುರಿತು ಅಲ್ಲಗಡ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.