ಜಲ್ನಾ (ಮಹಾರಾಷ್ಟ್ರ): ಹೆಂಡತಿ ಆಡಿಯೋ ವೈರಲ್ ಆದ ಬೆನ್ನಲ್ಲೇ ಅವಮಾನಿತನಾದ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಪರ್ದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ ಐವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಮಾನಭಂಗ ಹಾಗೂ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆ ದೂರಿನ ಅನ್ವಯ, ಗಜನಾನ್ ಆಶೋಕ್ ದೇಶ್ಮುಖ್, ರವಿ ದತ್ತಾತ್ರೇಯ ಸಪ್ಕಲ್, ಗಜನಾನ ದೀಲಿಪ್ ಶಿರಸತ್, ಮತ್ತು ಮತ್ತಿಬ್ಬರು ಮಹಿಳೆರು ರವಿ ದತ್ತಾತ್ರೇಯ ಸಪ್ಕಲ್ ಫೋನ್ನಲ್ಲಿ ಸಂತ್ರಸ್ತೆಗೆ ಒತ್ತಾಯಪೂರ್ವಕವಾಗಿ ನಿಂದನೆ ಮಾಡುವಂತೆ ಮಾಡಿದ್ದಾರೆ. ಮಾದಕ ದ್ರವ್ಯ ನೀಡಿ, ಆಕೆಯೊಂದಿಗೆ ಒತ್ತಾಯಪೂರ್ವಕವಾಗಿ ಕೆಟ್ಟ ವರ್ತನೆ ಮಾಡುವಂತೆ ಪ್ರಚೋದಿಸಿದ್ದಾರೆ.
ಇದಾದ ಬಳಿಕ ಸಂತ್ರಸ್ತ ಮಹಿಳೆ ಮತ್ತು ಶಂಕಾಸ್ಪದ ವ್ಯಕ್ತಿ ನಡುವೆ ನಡೆದ ಮಾತುಕತೆ ಆಡಿಯೋವನ್ನು ಸಂತ್ರಸ್ತೆ ಮಹಿಳೆ ಗಂಡನಿಗೆ ಕಳುಹಿಸಲಾಗಿದೆ. ಈ ಆಡಿಯೋ ಕೇಳಿದ ಬಳಿಕ ಅವಮಾನಿತನಾದ ಸಂತ್ರಸ್ತೆ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಪ್ರಕರಣದ ಬಳಿಕ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಗಜನಾನ್ ಆಶೋಕ್ ದೇಶ್ಮುಖ್, ರವಿ ದತ್ತಾತ್ರೇಯ ಸಪ್ಕಲ್, ಗಜನಾನ ದೀಲಿಪ್ ಶಿರಸತ್, ಮತ್ತು ಮತ್ತಿಬ್ಬರು ಮಹಿಳೆಯರು, ರವಿ ದತ್ತಾತ್ರೇಯ ಸಪ್ಕಲ್ ಸೇರಿದಂತೆ ಇಬ್ಬರು ಮಹಿಳೆ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ಅತ್ಯಾಚಾರ, ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹೆಂಡತಿಯ ತಲೆಗೆ ಬಾಣಲೆಯಿಂದ ಹೊಡೆದು ಕೊಲೆ: ಠಾಣೆಗೆ ತೆರಳಿ ಶರಣಾದ ಪತಿ