ETV Bharat / bharat

ಕೋವಿಡ್​ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!

ದೇಶದಲ್ಲಿ ಕೋವಿಡ್​ 2ನೇ ಅಲೆ ವೇಳೆ ಸಾವಿರಾರು ಯುವತಿಯರು ತಮ್ಮ ಗಂಡನ ಕಳೆದುಕೊಂಡು ವಿಧವೆಯರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದಿರುವ ಈ ಆದರ್ಶ ಮದುವೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..

WIDOW WOMEN REMARRIED IN AHMEDNAGAR
WIDOW WOMEN REMARRIED IN AHMEDNAGAR
author img

By

Published : Feb 4, 2022, 10:19 PM IST

Updated : Feb 4, 2022, 11:31 PM IST

ಅಹಮದ್​ನಗರ​(ಮಹಾರಾಷ್ಟ್ರ): ಕೋವಿಡ್​​ನಿಂದ ಪತಿ ಸಾವನ್ನಪ್ಪಿದ್ದರಿಂದ ತಬ್ಬಿಲಿಯಾಗಿದ್ದ ಪುಟ್ಟ ಮಗು ಹಾಗೂ ವಿಧವೆಗೆ ಪತಿಯ ಸಹೋದರ ಹೊಸ ಬಾಳು ನೀಡಿದ್ದಾನೆ. ಯುವತಿ ಇದೀಗ ಆತನೊಂದಿಗೆ ಮರು ವಿವಾಹ ಮಾಡಿಕೊಂಡಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ

ಮಹಾರಾಷ್ಟ್ರದ ಅಹಮದ್​​ನಗರದ ಅಕೋಲೆ ತಾಲೂಕಿನಲ್ಲಿ ಈ ಆದರ್ಶ ವಿವಾಹ ನಡೆದಿದೆ. ಅಕೋಲೆ ತಾಲೂಕಿನ ಧೋಕ್ರಿಯ 31 ವರ್ಷದ ನೀಲೇಶ್ ಶೇಟೆ ಕೋವಿಡ್​ನಿಂದಾಗಿ ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಸಾವನ್ನಪ್ಪಿದ್ದರು.

WIDOW WOMEN REMARRIED IN AHMEDNAGAR
ವಿಧವೆಗೆ ಹೊಸ ಬಾಳು ನೀಡಿದ ಯುವಕ

ವಸತಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದ ಈತನ ಸಾವಿನಿಂದಾಗಿ ಹೆಂಡತಿ, ಮಗಳು ಬೀದಿಗೆ ಬೀಳುತ್ತಾರೆ. 19 ತಿಂಗಳ ಮಗಳು ಹಾಗೂ ಪತ್ನಿ ಪೂನಂ ನೋಡಿಕೊಳ್ಳುವವರು ಯಾರೂ ಇಲ್ಲದಂತಾಗುತ್ತದೆ.

WIDOW WOMEN REMARRIED IN AHMEDNAGAR
ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ

ಕೈಹಿಡಿದ ನಿಲೇಶ್​ ಸಹೋದರ

ಕೋವಿಡ್​ನಿಂದ ನೀಲೇಶ್​ ಸಾವನ್ನಪ್ಪುತ್ತಿದ್ದಂತೆ ಆತನ ಸಹೋದರ ಸಮಾಧಾನ್​ 23 ವರ್ಷದ ಪೂನಂ ಜೊತೆ ಮರು ವಿವಾಹ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತಾರೆ. ಗ್ರಾಮದ ಹಿರಿಯರು, ಎರಡು ಕುಟುಂಬದವರು ಮದುವೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಸರಳ ಮದುವೆ ಸಮಾರಂಭ ನಡೆದಿದೆ. ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, 26 ವರ್ಷದ ಸಮಾಧಾನ್ ಇದೀಗ ಪೂನಂ ಜೊತೆ ಸಪ್ತಪದಿ ತುಳಿದಿದ್ದಾರೆ.

WIDOW WOMEN REMARRIED IN AHMEDNAGAR
ಮಹಾರಾಷ್ಟ್ರದಲ್ಲಿ ಆದರ್ಶ ಮದುವೆ

ದೇಶದಲ್ಲಿ ಕೋವಿಡ್​ 2ನೇ ಅಲೆ ವೇಳೆ ಸಾವಿರಾರು ಯುವತಿಯರು ತಮ್ಮ ಗಂಡನ ಕಳೆದುಕೊಂಡು ವಿಧವೆಯರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದಿರುವ ಈ ಆದರ್ಶ ಮದುವೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Last Updated : Feb 4, 2022, 11:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.