ETV Bharat / bharat

ವಿರೋಧ ಪಕ್ಷಗಳ ನಾಯಕರ ಫೋನ್​ ಹ್ಯಾಕಿಂಗ್​ಗೆ ಯತ್ನ: ಸಂಸದ ಪಿ ಚಿದಂಬರಂ ಹೇಳಿದ್ದೇನು?

ವಿರೋಧ ಪಕ್ಷಗಳ ನಾಯಕರು ಆಪಲ್​ನಿಂದ ತಮ್ಮ ಫೋನ್​ಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ ಎಂಬ ಎಚ್ಚರಿಕೆ ಸಂದೇಶವನ್ನು ಪಡೆದಿದ್ದಾರೆ ಎಂಬುದನ್ನು ನಿರಾಕರಿಸಲಾಗದು ಎಂದು ಸಂಸದ ಪಿ ಚಿದಂಬರಂ ಹೇಳಿದ್ದಾರೆ.

Etv Bharatwhy-only-opposition-leaders-p-chidambarm-on-alleged-hacking-attempt-alerts-on-leaders-mobiles
ವಿರೋಧ ಪಕ್ಷಗಳ ನಾಯಕರ ಫೋನ್​ ಹ್ಯಾಕಿಂಗ್​ಗೆ ಯತ್ನ: ಸಂಸದ ಪಿ ಚಿದಂಬರಂ ಹೇಳಿದ್ದೇನು?
author img

By ETV Bharat Karnataka Team

Published : Nov 1, 2023, 5:54 PM IST

ನವದೆಹಲಿ: ಬೇಹುಗಾರಿಕೆ ವಿಷಯದಲ್ಲಿ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಫೋನ್ ಹ್ಯಾಕಿಂಗ್ ಪ್ರಯತ್ನದ ಎಚ್ಚರಿಕೆಗಳ ಬಗ್ಗೆ ತಮ್ಮದೇ ಪಕ್ಷಕ್ಕೆ ಸೇರಿದ ನಾಯಕರ ಆರೋಪದಿಂದ ಉದ್ಭವಿಸಿದ ವಿವಾದದ ಕುರಿತು ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಸಂಸದ ಪಿ ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.

  • It is undeniable that hundreds of Opposition leaders got an alert from Apple of a state-sponsored attempt to compromise their phones

    Why only Opposition leaders?

    Who will be interested in compromising the phones of Opposition leaders?

    After the Pegasus mystery (not resolved…

    — P. Chidambaram (@PChidambaram_IN) November 1, 2023 " class="align-text-top noRightClick twitterSection" data=" ">

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ನೂರಾರು ವಿರೋಧ ಪಕ್ಷಗಳ ನಾಯಕರು ಆಪಲ್​ನಿಂದ ತಮ್ಮ ಫೋನ್​ಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ ಎಂಬ ಎಚ್ಚರಿಕೆ ಸಂದೇಶವನ್ನು ಪಡೆದಿದ್ದಾರೆ ಎಂಬುದನ್ನು ನಿರಾಕರಿಸಲಾಗದು. ವಿರೋಧ ಪಕ್ಷದ ನಾಯಕರ ಫೋನ್​ಗಳನ್ನು ಹ್ಯಾಕ್ ಮಾಡಲು ಯಾರು ಆಸಕ್ತಿ ವಹಿಸುತ್ತಾರೆ?. ಪೆಗಾಸಸ್ ರಹಸ್ಯ ಬೇಹುಗಾರಿಕೆ ನಂತರ ಸರ್ಕಾರಿ ಸಂಸ್ಥೆಗಳ ಮೇಲೆ ಅನುಮಾನ ಮೂಡುತ್ತಿದೆ" ಎಂದು ಆರೋಪಿಸಿದ್ದಾರೆ.

ತಮ್ಮ ಫೋನ್​ಗಳು ಮತ್ತು ಇಮೇಲ್​ಗಳಲ್ಲಿ ಆಪಲ್​ನಿಂದ ಸಂದೇಶಗಳನ್ನು ಸ್ವೀಕರಿಸಿದ್ದೇವೆ ಎಂದು ಬಿಜೆಪಿ ಸರ್ಕಾರದ ಡೇಟಾ ಉಲ್ಲಂಘನೆ ಪ್ರಯತ್ನವನ್ನು ಹಲವಾರು ವಿರೋಧ ಪಕ್ಷದ ನಾಯಕರು ಬಹಿರಂಗಪಡಿಸಿದ ನಂತರ ಈ ವಿವಾದ ಉದ್ಭವಿಸಿದೆ. ತಮ್ಮ ಹೇಳಿಕೆಗಳನ್ನು ದೃಢೀಕರಿಸಲು, ವಿರೋಧ ಪಕ್ಷಗಳ ನಾಯಕರು ಆಪಲ್​ನಿಂದ ಸ್ವೀಕರಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದ್ದಾರೆ. "ಸರ್ಕಾರಿ ಪ್ರಾಯೋಜಿತ ದಾಳಿಕೋರರು ಐಫೋನ್​ಗಳನ್ನು ಗುರಿಯಾಗಿಸಿಕೊಂಡಿರಬಹುದು" ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಶಶಿ ತರೂರ್, ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ, ಶಿವಸೇನೆಯ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ ಅವರು ಆಪಲ್‌ನಿಂದ ಸ್ವೀಕರಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಆಪಲ್​ ಕಂಪನಿ "ಈ ಬೆದರಿಕೆ ಸೂಚನೆಗಳ ಹಿಂದೆ ಯಾವುದೇ ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರರಿದ್ದಾರೆ ಎಂದು ಆಪಾದಿಸುವುದಿಲ್ಲ. ಅವರ ಬೆದರಿಕೆ ಎಚ್ಚರಿಕೆಗಳು ಸುಳ್ಳು ಆಗಿರಬಹುದು ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, "ಅದಾನಿ ಅವರ ವಿಚಾರಗಳನ್ನು ಮಾತನಾಡಲು ಮುಂದಾದ ತಕ್ಷಣವೇ ಗುಪ್ತಚರ ಸಂಸ್ಥೆಗಳು ಮತ್ತು ಬೇಹುಗಾರಿಕೆ ನಿಯೋಜಿಸಲಾಗುತ್ತದೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸರ್ಕಾರಿ ಪ್ರಾಯೋಜಿತ ದಾಳಿಕೋರರು ತಮ್ಮ ಫೋನ್ ಹ್ಯಾಕ್​ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಹಲವಾರು ವಿರೋಧ ಪಕ್ಷದ ನಾಯಕರು ಸ್ವೀಕರಿಸಿದ ಎಚ್ಚರಿಕೆಯ ಸಂದೇಶದ ಇಮೇಲ್​ ಪ್ರತಿಗಳನ್ನು ತೋರಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸಂಸ್ಥಾಪನಾ ದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.