ETV Bharat / bharat

ಸಂಭೋಗದ ಸಮಯದಲ್ಲಿ ಕೆಲವು ಮಹಿಳೆಯರು ಏಕೆ ಯೋನಿಯ ನೋವನ್ನು ಅನುಭವಿಸುತ್ತಾರೆ? - ಲೈಂಗಿಕ ಕ್ರಿಯೆ

ಹಿತವಾದ ಲೈಂಗಿಕ ಕ್ರಿಯೆ ದೈಹಿಕ ತೃಪ್ತಿಯನ್ನು ನೀಡುವುದಲ್ಲದೆ ಮಾನಸಿಕ ಆನಂದವನ್ನು ನೀಡುತ್ತದೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಹೀಗಾಗಿ, ಇದು ಉಂಟಾಗದಿದ್ದರೆ ಸಂಬಂಧದ ಮೇಲೆ ಬಹಳ ಪರಿಣಾಮ ಬೀರಬಹುದು. ಆದ್ದರಿಂದ, ಸಂಗಾತಿಗಳಿಬ್ಬರೂ ಪರಸ್ಪರರ ಲೈಂಗಿಕ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗೌರವಿಸುವುದು ಬಹಳ ಮುಖ್ಯ..

sukhibhava
ಮಹಿಳೆಯರು
author img

By

Published : Oct 17, 2021, 9:28 PM IST

ಕೆಲವೊಮ್ಮೆ ಲೈಂಗಿಕ ಕ್ರಿಯೆ ಸಮಯದಲ್ಲಿ ಮಹಿಳೆಯರು ಯೋನಿಯಲ್ಲಿ ಸೌಮ್ಯವಾದ ಹಾಗೂ ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಇದು ದೈಹಿಕ ಸ್ಥಿತಿ, ಮಾನಸಿಕ ಒತ್ತಡ, ಭಾವನಾತ್ಮಕ ಪ್ರತ್ಯೇಕತೆ ಮುಂತಾದ ವಿವಿಧ ಕಾರಣಗಳಿಂದಾಗಿರಬಹುದು.

ಇದರಿಂದಾಗಿ ಮಹಿಳೆಯು ಸಂಭೋಗದುದ್ದಕ್ಕೂ ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕತೆಯು ಅವರಿಗೆ ನೋವಿನ ಅನುಭವ ಉಂಟು ಮಾಡಬಹುದು. ಸಂಭೋಗದ ಸಮಯದಲ್ಲಿ ಯೋನಿಯ ನೋವು ವಿವಿಧ ಕಾರಣಗಳಿಂದಾಗಿರಬಹುದು.

ಇದು ಸಂಗಾತಿಯೊಂದಿಗೆ ಅತೃಪ್ತಿಕರ ಲೈಂಗಿಕ ಸಂಬಂಧ ಮತ್ತು ಇತರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ, ಇದು ಕೇವಲ ದೈಹಿಕ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ. ಮಾನಸಿಕ ಸಂಬಂಧದ ಮೇಲೂ ಅದರ ಪ್ರಭಾವ ಬೀರುತ್ತದೆ.

ಮಿಲನದ ಸಮಯದಲ್ಲಿ ಯೋನಿಯ ನೋವು ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಭಾವನಾತ್ಮಕ ಪ್ರತ್ಯೇಕತೆ ಅಥವಾ ಪ್ರೀತಿಯ ಕೊರತೆ, ಲೈಂಗಿಕತೆ, ಒತ್ತಡ, ಕೋಪ ಅಥವಾ ಇತರ ಕಾರಣಗಳಿಂದಾಗಿರಬಹುದು.

ತಜ್ಞ ವೈದ್ಯರು ಏನಂತಾರೆ?

ಸ್ತ್ರೀರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಶರ್ಮಾ, ನಾವು ಸಂಭೋಗದ ಸಮಯದಲ್ಲಿ ಯೋನಿಯ ನೋವಿನ ದೈಹಿಕ ಕಾರಣಗಳ ಬಗ್ಗೆ ಮಾತನಾಡುವುದಾದರೆ, ಮೂತ್ರದ ಸೋಂಕು, ಯೋನಿಯಲ್ಲಿ ಶುಷ್ಕತೆ, ಯೋನಿಮಸ್ (ಯೋನಿ ಗೋಡೆಗಳ ಸಂಕೋಚನ) ಅಥವಾ ಗಾಯವನ್ನು ಪರಿಗಣಿಸಬಹುದು. ಅಂತಹ ಸಂದರ್ಭಗಳಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯು ಮುಖ್ಯವಾಗಿದೆ. ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುವ ಅಪಾಯವಿದೆ.

ನಮ್ಮ ತಜ್ಞರು ಇಂತಹ ಚಿಕಿತ್ಸೆಗಳ ಸಮಯದಲ್ಲಿ ಅನೇಕ ಮಹಿಳೆಯರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಲೈಂಗಿಕತೆಯಿಂದ ದೂರವಿರಲು ಹೇಳುತ್ತಾರೆ ಎಂದು ಡಾ.ವಿಜಯಲಕ್ಷ್ಮಿ ಹೇಳಿದ್ದಾರೆ. ಪಂಜಾಬ್‌ನ ವಿವಿಧ ಸಂಸ್ಥೆಗಳಲ್ಲಿ ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುತ್ತಿರುವ ಮನೋವೈದ್ಯೆಯಾಗಿರುವ ಡಾ. ಅಪರ್ಣಾ ಗುಪ್ತಾ ಪ್ರತಿಕ್ರಿಯಿಸಿ, ಲೈಂಗಿಕ ಸಂಭೋಗದ ಸಮಯದಲ್ಲಿ ಯೋನಿ ನೋವಿಗೆ ಕೆಲವು ಮಾನಸಿಕ ಕಾರಣಗಳನ್ನು ವಿವರಿಸುತ್ತಾರೆ.

ಮಾನಸಿಕ ಪ್ರಕ್ಷುಬ್ಧತೆ, ತೊಂದರೆ, ಭಯ, ಪರಸ್ಪರ ಸಂಬಂಧಗಳಲ್ಲಿ ಉದ್ವೇಗ ಅಥವಾ ಸಂಬಂಧವನ್ನು ಮುಂದುವರಿಸಲು ಸಿದ್ಧರಿಲ್ಲದಿರುವುದು ಕಾರಣವಾಗುತ್ತದೆ ಎಂದು ವಿವರಿಸುತ್ತಾರೆ. ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಇಷ್ಟವಿಲ್ಲದ ಮಹಿಳೆಯರೊಂದಿಗೆ ಡಾ. ಅಪರ್ಣಾ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಆ ಮಹಿಳೆಯರಿಗೆ ಲೈಂಗಿಕ ಕ್ರಿಯೆ ವೇಳೆ ಸಮಾನವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಅವರ ಯೋನಿ ಸ್ವತಃ ನಯವಾಗುವುದಿಲ್ಲ, ಇದು ನೋವಿನ ಅನುಭವಕ್ಕೆ ಕಾರಣವಾಗುತ್ತದೆ.

ಡಾ. ಗುಪ್ತಾ ಹೇಳುವಂತೆ ಈ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ತುಂಬಾ ಸಾಮಾನ್ಯವಾಗಿದೆ. ಬಹುತೇಕ ಸಮಯಗಳಲ್ಲಿ ಸಂತೋಷದ ಅನುಭವಕ್ಕಾಗಿ, ಪುರುಷರು ಹಾಗೂ ಸ್ತ್ರೀ ಇಬ್ಬರೂ ಸಮಾನವಾಗಿ ಪ್ರಚೋದಿಸಲ್ಪಡಬೇಕು ಮತ್ತು ದೇಹ ಮತ್ತು ಮನಸ್ಸುಗಳೆರಡೂ ಲೈಂಗಿಕತೆಗೆ ಸಿದ್ಧವಾಗಿರಬೇಕು ಎಂದು ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ, ಮಹಿಳೆಯರಿಗೆ ಲೈಂಗಿಕ ಅನುಭವವು ಅಹಿತಕರವಾಗುತ್ತದೆ.

ಇದರ ಹೊರತಾಗಿ, ಅನೇಕ ಬಾರಿ ಮಾನಸಿಕ ಒತ್ತಡ, ಆತಂಕ, ದೇಹದಲ್ಲಿನ ಬದಲಾವಣೆಗಳು ಮತ್ತು ಸಂಗಾತಿಯೊಂದಿಗೆ ಭಾವನಾತ್ಮಕ ಸಂಪರ್ಕದ ಕೊರತೆ ಈ ನೋವಿಗೆ ಕಾರಣವಾಗಿದ್ದು, ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸಿರುತ್ತಾರೆ.

ಸಮಸ್ಯೆಯು ದೈಹಿಕ ಕಾರಣಗಳಿಂದ ಉಂಟಾಗಿದ್ದರೆ, ಅದನ್ನು ಔಷಧಿಗಳ ಸಹಾಯದಿಂದ ಚಿಕಿತ್ಸೆ ನೀಡಬಹುದು, ಆದರೆ ಮಾನಸಿಕವಾಗಿ ಈ ಸಮಸ್ಯೆ ಎದುರಾಗಿದ್ದರೆ,ಮಹಿಳೆಯರು ಅದರ ಬಗ್ಗೆ ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದು ಮುಖ್ಯವಾಗಿದೆ.

ಹಿತವಾದ ಲೈಂಗಿಕ ಕ್ರಿಯೆ ದೈಹಿಕ ತೃಪ್ತಿಯನ್ನು ನೀಡುವುದಲ್ಲದೆ ಮಾನಸಿಕ ಆನಂದವನ್ನು ನೀಡುತ್ತದೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಹೀಗಾಗಿ ಇದು ಉಂಟಾಗದಿದ್ದರೆ ಸಂಬಂಧದ ಮೇಲೆ ತುಂಬಾ ಪರಿಣಾಮ ಬೀರಬಹುದು. ಆದ್ದರಿಂದ, ಸಂಗಾತಿಗಳಿಬ್ಬರೂ ಪರಸ್ಪರರ ಲೈಂಗಿಕ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗೌರವಿಸುವುದು ಬಹಳ ಮುಖ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.