ಜೈಪುರ: ಒಂದೇ ಕುಟುಂಬದ ಎಲ್ಲ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೈಪುರದಲ್ಲಿ ತಡರಾತ್ರಿ ನಡೆದಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ನಗರದ ಅಹಿಮ್ಸಾ ಸರ್ಕಲ್‌ನಲ್ಲಿರುವ ಅಲೌಕಿಕ ಕಟ್ಟಡದ ಮೇಲೆ ಹತ್ತಿ ಇಡಿ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆ ಕುಟುಂಬ ಸದಸ್ಯರ ಮನವೊಲಿಸಿ ರಕ್ಷಣೆ ಮಾಡಿದ್ದಾರೆ.
ಓದಿ : ನನಗೆ ವೇತನ ಬೇಡ, 1 ರೂ. ಗೌರವಧನ ಸಾಕು: ಮದನ್ ಗೋಪಾಲ್
ಈ ಕುಟುಂಬ ಫೈನಾನ್ಸ್‌ನಿಂದ ಸಾಲ ತೆಗೆದುಕೊಂಡಿದ್ದು, ಆ ಸಾಲವನ್ನೂ ಮರು ಪಾವತಿಸಿದ್ದೇವೆ ಎಂದು ತಿಳಿಸಿದೆ. ಆದರೂ ಫೈನಾನ್ಸ್ ಕಂಪನಿಯವರು ನಮಗೆ ಸಾಲ ಮರು ಪಾವತಿಸಿ ಇಲ್ಲವಾದರೆ ನಿಮ್ಮ ಮನೆ ಹರಾಜು ಮಾಡುವುದಾಗಿ ಪದೇ ಪದೆ ಬೆದರಿಕೆ ಹಾಕುತ್ತಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದು, ಇದೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಎಂದು ತಿಳಿಸಿದ್ದಾರೆ. ಪೊಲೀಸರು ಕುಟುಂಬ ಸದಸ್ಯರಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.