ETV Bharat / bharat

ವಿಶ್ವಾದ್ಯಂತ 229 ಮಿಲಿಯನ್ ಮಲೇರಿಯಾ ಪ್ರಕರಣಗಳು

ಅಮೆರಿಕಾ ಖಂಡದ ಕೆಲವು ವಲಯಗಳು, ಏಷ್ಯಾ ಮತ್ತು ಆಫ್ರಿಕಾ, ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹೆಚ್ಚು ಈ ರೋಗ ಹರಡಲಿದೆ. ಮಲೇರಿಯಾ-ಸಂಬಂಧಿಸಿದ ಸಾವು ಶೇ.90ರಷ್ಟು ಆಫ್ರಿಕನ್​ ಪ್ರದೇಶದಲ್ಲೇ ಅಧಿಕವಾಗಿ ಸಂಭವಿಸುತ್ತಿವೆ.

author img

By

Published : Dec 5, 2020, 8:38 PM IST

WHO World Malaria Report 2020
ಮಲೇರಿಯಾ ಜ್ವರ

ಹೈದರಾಬಾದ್​: ಮಲೇರಿಯಾ ಜ್ವರ ಭಾರತ ದೇಶದ ಸಮಸ್ಯೆಯಲ್ಲ. ಇಡೀ ವಿಶ್ವಕ್ಕೆ ಮಾರಕ ಕಾಯಿಲೆ ಎಂಬ ಕುಖ್ಯಾತಿಗೂ ಒಳಗಾಗಿದೆ. ವಿಶೇಷವಾಗಿ ಉಷ್ಣವಲಯ ಪ್ರದೇಶಗಳ ಜನರನ್ನು ಹೆಚ್ಚು ಭೀತಿಗೆ ಒಳಗಾಗುವಂತೆ ಮಾಡಿದೆ. ಆಶ್ಚರ್ಯ ಎಂದರೆ ಅನಾಫಿಲಿಸ್ ಹೆಣ್ಣು ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್​ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕು ಹರಡುತ್ತದೆ.

ಅಮೆರಿಕಾ ಖಂಡದ ಕೆಲವು ವಲಯಗಳು, ಏಷ್ಯಾ ಮತ್ತು ಆಫ್ರಿಕಾ, ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹೆಚ್ಚು ಈ ರೋಗ ಹರಡಲಿದೆ. ಮಲೇರಿಯಾ-ಸಂಬಂಧಿಸಿದ ಸಾವು ಶೇ.90ರಷ್ಟು ಆಫ್ರಿಕನ್​ ಪ್ರದೇಶದಲ್ಲೇ ಅಧಿಕವಾಗಿ ಸಂಭವಿಸುತ್ತಿವೆ. ಇದು ಆರ್ಥಿಕ ವಿಕಸನಕ್ಕೂ ಅಡ್ಡಿಯಾಗುತ್ತದೆ.

ಜಾಗತಿಕವಾಗಿರೋಗದ ಅಂಕಿ-ಅಂಶಗಳ ಕಾಣುವುದಾದರೆ 87 ದೇಶಗಳಲ್ಲಿ ಕಳೆದ ವರ್ಷ (2019) 229 ಮಿಲಿಯನ್ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. 2000ರಲ್ಲಿ 238 ದಶಲಕ್ಷ, 2015ರಲ್ಲಿ 218 ಮಿಲಿಯನ್ ಪ್ರಕರಣಗಳು ಕಾಣಿಸಿಕೊಂಡಿದ್ದವು.

ಮಲೇರಿಯಾ ನಿರ್ಮೂಲನೆಗೆ ಪಣತೊಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) 2016–2030ರ ಜಾಗತಿಕ ತಾಂತ್ರಿಕ ಕಾರ್ಯತಂತ್ರವನ್ನು 2015ರ ಜೂನ್​​ನಲ್ಲಿ ಅಂಗೀಕರಿಸಿತು. ಈ ತಂತ್ರವು 2030ರ ವೇಳೆಗೆ ಜಾಗತಿಕ ಮಲೇರಿಯಾ ಸಂಭವ ಮತ್ತು ಮರಣ ಪ್ರಮಾಣವನ್ನು ಕನಿಷ್ಠ ಶೇ.90ರಷ್ಟು ಕಡಿಮೆಗೊಳಿಸುವ ಗುರಿ ಹೊಂದಿದೆ.

ಪ್ಲಾಸ್ಮೋಡಿಯಂ ವೈವಾಕ್ಸ್​​ನಿಂದ ಉಂಟಾಗುವ ಪ್ರಕರಣಗಳ ಪ್ರಮಾಣವು ವಿಶ್ವಾದ್ಯಂತ 2000ರಲ್ಲಿ ಶೇ.7ರಷ್ಟು, 2019ರಲ್ಲಿ ಶೇ.3ರಷ್ಟು ಇಳಿದಿದೆ. ಹಾಗೂ 2000ರಲ್ಲಿ ಪ್ರತಿ 1,000 ಜನರ ಪೈಕಿ 80 ಮಂದಿಗೆ ಸೋಂಕು ತಗುಲುತ್ತಿತ್ತು. 2015ರಲ್ಲಿ 58, 2019ರಲ್ಲಿ 57ಕ್ಕೆ ಇಳಿದಿದೆ. 2000-2015ರ ನಡುವೆ ಸಾಂಕ್ರಾಮಿಕ ರೋಗದ ಪ್ರಕರಣಗಳು ಶೇ.27ರಷ್ಟು ಕಡಿಮೆಯಾಗಿದೆ. 2015-2019ರ ನಡುವೆ ಶೇ.2ರಷ್ಟು ಕಡಿಮೆಯಾಗಿದೆ.

29 ದೇಶಗಳು ಶೇ.95ರಷ್ಟು ಮಲೇರಿಯಾ ಹರಡಲು ಕಾರಣವಾಗಿದ್ದು, ನೈಜೀರಿಯಾವೇ (27%) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ದಿ ಡೆಮಾಕ್ರಟಿಕ್​ ರಿಪಬ್ಲಿಕ್​​ ಆಫ್​ ದಿ ಕಾಂಗೋ (12%), ಉಗಾಂಡ (5%), ಮೊಜಾಂಬಿಕ್ (4%), ನೈಜರ್​ (3%) ಸೇರಿ ಒಟ್ಟು ಜಾಗತಿಕವಾಗಿ ಶೇ.51ರಷ್ಟು ಸೋಂಕು ಹಬ್ಬಿದೆ. ಸುಮಾರು ಶೇ.94 ಪ್ರಕರಣಗಳಿಗೆ ಕಾರಣವಾಗಿದೆ.

ಆಫ್ರಿಕನ್ ಪ್ರದೇಶದಲ್ಲಿ 2019ಕ್ಕೆ ಹೋಲಿಸಿದರೆ 2000ರಲ್ಲಿ ಕಡಿಮೆ ಮಲೇರಿಯಾ ಪ್ರಕರಣಗಳು ಕಂಡುಬಂದರೂ ಈ ಅವಧಿಯಲ್ಲಿ ಪ್ರತಿ 1000 ಮಂದಿಗೆ 363 ದಾಖಲಾಗುತ್ತಿದ್ದ ಪ್ರಕರಣಗಳು 225ಕ್ಕೆ ಕಡಿಮೆಯಾಗಿವೆ. ಆಫ್ರಿಕನ್ ಪ್ರದೇಶದಲ್ಲಿ 2000ರಲ್ಲಿ ಜನಸಂಖ್ಯೆ 665 ದಶಲಕ್ಷವಿತ್ತು. 2019ರಲ್ಲಿ 1.1 ಶತಕೋಟಿಗೆ ಏರಿತು.

ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2000ರಲ್ಲಿ 23 ದಶಲಕ್ಷದಿಂದ 2019ರಲ್ಲಿ ಸುಮಾರು 6.3 ದಶಲಕ್ಷಕ್ಕೆ ಇಳಿದಿದೆ. ಈ ಪ್ರದೇಶದಲ್ಲಿ ಮಲೇರಿಯಾ ಪ್ರಕರಣಗಳು ಶೇ.78ರಷ್ಟು ಕಡಿಮೆಯಾಗಿವೆ. ಪ್ರತಿ ಸಾವಿರ ಜನಸಂಖ್ಯೆ ಪೈಕಿ 2000ರಲ್ಲಿ 18 ಪ್ರಕರಣಗಳು ದಾಖಲಾಗುತ್ತಿದ್ದವು. 2019ರಲ್ಲಿಅದರ ಸಂಖ್ಯೆ 4ಕ್ಕೆ ಇಳಿದಿದೆ.

ಭಾರತ ಕೂಡ ಮಲೇರಿಯಾ ರೋಗ ನಿಯಂತ್ರಣಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದೆ. 2000 ರಲ್ಲಿ 20 ಮಿಲಿಯನ್​​ ಪ್ರಕರಣಗಳಿಂದ 5.6 (2019ಕ್ಕೆ) ಮಿಲಿಯನ್​ಗೆ ಇಳಿದಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಬರೊಬ್ಬರಿ ಶೇ.17.6ರಷ್ಟು ಪ್ರಕರಣಗಳು ಕುಸಿತ ಕಂಡಿವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕುಸಿದ ದೇಶವಾಗಿ ಭಾರತ ಹೊರ ಹೊರಹೊಮ್ಮಿದೆ.

ರೋಗ ಹರಡುವುದು ಹೇಗೆ: ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ನಂತರ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್​​ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡುತ್ತದೆ. ಈ ಮೂಲಕ ಹರಡುವುದಲ್ಲದೆ ಕೆಂಪು ರಕ್ತದ ಕಣಗಳನ್ನು ನಾಶಪಡಿಸುತ್ತದೆ. ಅವುಗಳ ಕುರಿತು ವೈದ್ಯರು ಚಿಕಿತ್ಸೆ ನೀಡಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.

ರೋಗದ ಲಕ್ಷಣಗಳು: ದೇಹದಲ್ಲಿ ಜ್ವರ ಹೆಚ್ಚಾದಂತೆ ಮೂತ್ರ ಪಿಂಡಗಳ ನಾಶ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತೀವ ಜ್ವರ, ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.